
ಉಡುಪಿ: ಕಾರಿನ ಮೇಲೆ ಪಟಾಕಿ ಸಿಡಿಸಿ ಹುಚ್ಚಾಟ; ಕಾರು ಚಾಲಕ ಅರೆಸ್ಟ್!
Thursday, October 27, 2022
ಉಡುಪಿ: ಮಣಿಪಾಲ ನಗರದಲ್ಲಿ ಕಾರು ಚಲಾಯಿಸುತ್ತಾ ಅಪಾಯಕಾರಿ ರೀತಿಯಲ್ಲಿ ಪಟಾಕಿ ಸಿಡಿಸಿದ ಕಾರು ಚಾಲಕನನ್ನು ಮಣಿಪಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮಣಿಪಾಲದ ಸೆಲೂನ್ ಉದ್ಯೋಗಿ ವಿಶಾಲ್ ಕೊಹ್ಲಿ (26) ದೀಪಾವಳಿ ಹಬ್ಬದ ಹಿನ್ನೆಲೆ ತನ್ನ ಕಾರಿನ ಮೇಲೆ ಪಟಾಕಿಯಿರಿಸಿ ಬೆಂಕಿ ಹಚ್ಚಿ ಸಿಡಿಸಿದ್ದಾನೆ. ಬೆಂಕಿ ಕೊಟ್ಟ ಬಳಿಕ ನಗರದಲ್ಲಿ ವಿಶಾಲ್ ತನ್ನ ಪಾಡಿಗೆ ತಾನೇ ಕಾರು ಚಲಾಯಿಸಿಕೊಂಡು ತೆರಳಿದ್ದಾನೆ.
ಘಟನೆ ಕುರಿತ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು. ತಕ್ಷಣ ಎಚ್ಚೆತ್ತುಕೊಂಡ ಮಣಿಪಾಲ ಪೊಲೀಸರು ಸುಮೊಟೋ ಕೇಸ್ ದಾಖಲಿಸಿ ವಿಶಾಲ್ ಕೊಹ್ಲಿ ಬಂಧಿಸಿ, ಕಾರನ್ನು ವಶಕ್ಕೆ ಪಡೆದಿದ್ದಾರೆ.
ಪಟಾಕಿ ಸಿಡಿಸಿ ಕಾರು ಚಲಾಯಿಸುತ್ತಿರುವ ದೃಶ್ಯ