
KANTHARA: ಪಂಜುರ್ಲಿ ದೈವದ ರೀಲ್ಸ್ ಮಾಡಿ ಯುವತಿ ಹುಚ್ಚಾಟ...!!!
ಕಾಂತಾರ ಸಿನಿಮಾ ಹವಾಕ್ಕೆ ಇಡೀ ಚಿತ್ರರಂಗವೇ ಬೆಚ್ಚಿಬಿದ್ದಿದೆ. ಇಡೀ ದೇಶದಲ್ಲಿ ಕಾಂತಾರ ಹವಾ ಹೇಗಿದೆ ಅಂದ್ರೆ ಇನ್ನೂ ಕೆಲವೊಂದು ಥಿಯೇಟರ್ ಗಳು ಹೌಸ್ ಫುಲ್ ಆಗಿ ಮುನ್ನುಗ್ಗುತ್ತಿವೆ. ಹೀಗಿರುವಾಗ ಪಂಜುರ್ಲಿ ದೈವದ ರೀಲ್ಸ್ ಮಾಡಿ ಯುವತಿಯೊಬ್ಬಳು ಹುಚ್ಚಾಟ ಮಾಡಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು ಶ್ವೇತಾ ರೆಡ್ಡಿ ಅನ್ನೋ ಮೇಕಪ್ ಆರ್ಟಿಸ್ಟ್ ತನ್ನ INSTAGRAM ಖಾತೆಯಲ್ಲಿ ಪಂಜುರ್ಲಿ ದೈವದ ರೀಲ್ಸ್ ಮಾಡಿ ಆ ವೀಡಿಯೋವನ್ನ ಪೋಸ್ಟ್ ಮಾಡಿದ್ದಾಳೆ. ಇದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂತಾರ ಚಿತ್ರದ ವರಹಾ ರೂಪಂ ದೈವ ವರಿಷ್ಠಾಂ ಹಾಡಿಗೆ ರೀಲ್ಸ್ ಮಾಡಿ ಕರಾವಳಿಯ ಕಾರಣಿಕ ದೈವ ಪಂಜುರ್ಲಿಯನ್ನ ಅಣಕ ಮಾಡಿದ್ದಾಳೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಯುವತಿ ವಿರುದ್ಧ ಆಕ್ರೋಶ ಸ್ಫೋಟಗೊಂಡಿದೆ. ಈ ನಡುವೆ ನೆಟ್ಟಿಗರು ಯುವತಿ ವಿರುದ್ಧ ತೀವ್ರ ಕಮೆಂಟ್ ಮಾಡಿದ ಬೆನ್ನಲ್ಲೇ ವೀಡಿಯೋವನ್ನ ತನ್ನ ಖಾತೆಯಿಂದ ರಿಮೂವ್ ಮಾಡಿದ್ದಾಳೆ. ಇಷ್ಟಕ್ಕೂ ಸುಮ್ಮನಿರದ ನೆಟ್ಟಿಗರು ಶ್ವೇತಾ ರೆಡ್ಡಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ.