ಮುಂಬೈ: ಹುಡುಗಿಯರನ್ನು 'ಐಟಂ'' ಅಂತಾ ಕರೆಯೋದು ಅವಹೇಳನಾಕಾರಿ. ಹಾಗಾಗಿ ವಿಶೇಷ ನ್ಯಾಯಾಲಯವೊಂದು ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ವ್ಯಕ್ತಿಯೊಬ್ಬರಿಗೆ ಒಂದೂವರೆ ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
ಅ. 20 ರಂದು ಆರೋಪಿಗೆ ಮೃಧುತ್ವ ತೋರಿಸಲು ನಿರಾಕರಿಸಿದ ನ್ಯಾಯಾಲಯ ಈ ಆದೇಶ ನೀಡಿದೆ. ರಸ್ತೆ ಬದಿಯ ರೊಮಿಯೋಗಳಿಗೆ ಇಂತಹ ಅನಪೇಕ್ಷಿತ ವರ್ತನೆಯಿಂದ ಮಹಿಳೆಯರನ್ನು ರಕ್ಷಿಸಲು ತಕ್ಕ ಪಾಠ ಕಲಿಸಬೇಕಾಗಿದೆ ನ್ಯಾಯಾಲಯ ಹೇಳಿದೆ. ಪೊಕ್ಸೊ ಕಾಯ್ದೆಯಡಿ ಪ್ರಕರಣಗಳ ವಿಚಾರಣೆಗೆ ನಿಯೋಜಿತವಾಗಿರುವ ವಿಶೇಷ ನ್ಯಾಯಾಧೀಶ ಎ ಜೆ ಅನ್ಸಾರಿ, 25 ವರ್ಷದ ವ್ಯಕ್ತಿಗೆ ಜೈಲು ಶಿಕ್ಷೆ ಪ್ರಕಟಿಸಿದ್ದಾರೆ. 16 ವರ್ಷದ ಹದಿಹರೆಯದ ಬಾಲಕಿಗೆ ಐಟಂ ಎಂದು ಕರೆದು ಆಕೆಯ ಕೂದಲು ಹಿಡಿದು ತನ್ನ ಮನೆಯವರೆಗೂ ಕರೆದೊಯ್ದ ಆರೋಪಕ್ಕೆ ಯುವಕ ಗುರಿಯಾಗಿದ್ದ. ಆರೋಪಿ ವರ್ತನೆ ಸಂಪೂರ್ಣವಾಗಿ ಅನುಚಿತವಾಗಿದೆ ಎಂದು ಹೇಳಿದ ನ್ಯಾಯಾಲಯ, ಆರೋಪಿ ಆಕೆಯನ್ನುದ್ದೇಶಿಸಿ ಐಟಂ ಎಂಬ ಪದ ಬಳಸಿದ್ದಾನೆ.
ಇದು ಸಾಮಾನ್ಯವಾಗಿ ಹುಡುಗರು ಹುಡುಗಿಯರನ್ನು ಅವಹೇಳನಕಾರಿ ಶೈಲಿಯಲ್ಲಿ ಸಂಬೋಧಿಸಲು ಬಳಸುವ ಪದವಾಗಿದ್ದು ಲೈಂಗಿಕ ರೀತಿಯಲ್ಲಿ ವಸ್ತುನಿಷ್ಠವಾಗಿದೆ. ಇದು ಆಕೆಯ ನಮ್ರತೆಯನ್ನು ಅತಿರೇಕಗೊಳಿಸುವ ಉದ್ದೇಶವನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಯಾವುದೇ ಹುಡುಗಿಯನ್ನು ಸಂಬೋಧಿಸಲು 'ಐಟಂ' ಎಂಬ ಪದವನ್ನು ಬಳಸುವುದು ನಿಸ್ಸಂಶಯವಾಗಿ ಅವಮಾನಕರವಾಗಿದೆ ಆರೋಪಿಯ ಕೃತ್ಯ ನಿಸ್ಸಂಶಯವಾಗಿ ಲೈಂಗಿಕ ಉದ್ದೇಶದಿಂದ ಮಾಡಲ್ಪಟ್ಟಿದೆ. ಏಕೆಂದರೆ 'ಐಟಂ' ಎಂಬ ಪದವು ಅವಳನ್ನು ಲೈಂಗಿಕವಾಗಿ ಆಕ್ಷೇಪಿಸಲು ಮಾತ್ರ ಬಳಸಲ್ಪಡುತ್ತದೆ ಮತ್ತು ಬೇರೇನೂ ಅಲ್ಲ ಎಂದು ನ್ಯಾಯಾಧೀಶರು ಹೇಳಿದರು.