-->
MANGALORE: ಭಜರಂಗಿಗಳಿಂದ ಅನ್ಯಕೋಮಿನ ಯುವಕನ ಮೇಲೆ ಅಟ್ಯಾಕ್...!!!

MANGALORE: ಭಜರಂಗಿಗಳಿಂದ ಅನ್ಯಕೋಮಿನ ಯುವಕನ ಮೇಲೆ ಅಟ್ಯಾಕ್...!!!



ಮಂಗಳೂರು: ಕೋಮುಸೂಕ್ಷ್ಮ ಪ್ರದೇಶ ಮಂಗಳೂರಿನಲ್ಲಿ ಮತ್ತೆ ಅನ್ಯಕೋಮಿನ ಯುವಕನ ಮೇಲೆ ಭಜರಂಗದಳದ ಕಾರ್ಯಕರ್ತರು ಅಟ್ಯಾಕ್ ಮಾಡಿದ್ದಾರೆ. 



ಹೌದು ಕಾರಣ ಅನ್ಯಕೋಮಿನ ಯುವಕನೋರ್ವ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಹಿಂದೂ ಯುವಕನಂತೆ ಬಿಂಬಿಸಿ ಚಿಕ್ಕಮಗಳೂರಿನ ಹಿಂದೂ ಯುವತಿಯೊಬ್ಬಳನ್ನ ಪಟಾಯಿಸಿ ಬೆಂಗಳೂರಿಗೆ ಎಸ್ಕಾಪ್ ಆಗಲು ಯತ್ನಿಸಿದ್ದ. ಈ ಮಾಹಿತಿಯನ್ನ ಅರಿತ ಭಜರಂಗಿಗಳು ಕೂಡಲೇ ಅಲರ್ಟ್ ಆಗಿ ಮಂಗಳೂರಿನ ನಾಗುರಿಯಲ್ಲಿ ಬಸ್ ನಿಂದ ಯುವಕನನ್ನು ಧರಧರನೇ ಎಳೆದು ಹಿಗ್ಗಾಮುಗ್ಗ ಥಳಿಸಿ ಮಾರಣಾಂತಿಕ ಕೃತ್ಯ ಎಸೆಗಿದ್ದಾರೆ. ಹಲ್ಲೆಗೊಳಗಾದ ಯುವಕ ಬಿಸಿರೋಡ್ ಸಮೀಪದವನು ಅಂತ ತಿಳಿದುಬಂದಿದೆ.

ಈಗಾಗ್ಲೇ ಯುವಕನ ಮೇಲೆ ಅಟ್ಯಾಕ್ ಮಾಡಿದ ನಾಲ್ವರು ಭಜರಂಗಿಗಳನ್ನ ಕಂಕನಾಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸ್ತಾ ಇದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. 

Ads on article

Advertise in articles 1

advertising articles 2

Advertise under the article