.jpg)
DEVIL: ಕನ್ಯಾನದಲ್ಲಿ ರಾತ್ರಿ ಬಿಳಿ ವಸ್ತ್ರಧಾರಿ ಒಂಟಿ ಮಹಿಳೆಯ ಓಡಾಟ!!
ಇದಾದ ಬಳಿಕ ಕುಡ್ತಮುಗೇರಿನಿಂದ ಕನ್ಯಾನ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಚಾಲಕನಿಗೆ ರಾತ್ರಿ ಸುಮಾರು 12 ಗಂಟೆಗೆ ಕೈ ಹಿಡಿದು ಡ್ರಾಪ್ ಕೇಳಿದೆ. ಈ ವೇಳೆ ಟಿಪ್ಪರ್ ಚಾಲಕ ವಾಹನದಿಂದ ಇಳಿಯದೇ ವಿಚಾರಿಸಿದ್ದಾನೆ. ಮಾತಾಡುತ್ತಿದ್ದಂತೇ ಏಕಾಏಕಿ ಮಹಿಳೆ ಮಾಯವಾಗಿದೆ ಎಂದು ಹೇಳಲಾಗಿದೆ.
ಇದಾದ ಬಳಿಕ ರಾತ್ರಿ ಸುಮಾರು 10:30 ಗಂಟೆಗೆ ಕುಳಾಲು ಕಡೆಯಿಂದ ಕುಡ್ತಮುಗೇರು ಕಡೆಗೆ ಬೈಕಲ್ಲಿ ಬರುತ್ತಿದ್ದ ಯುವಕನಿಗೆ ನೆಕ್ರಾಜೆ ತಂಗುದಾಣದ ಬಳಿ ಒಬ್ಬಂಟಿ ಮಹಿಳೆ ನಿಂತಿರುವುದು ಕಂಡುಬಂದಿದೆ. ಕೈ ಸನ್ನೆ ಮಾಡಿ ಯುವಕನಲ್ಲಿ ಡ್ರಾಪ್ ಕೇಳಿದ ಮಹಿಳೆಯನ್ನ ಬೈಕ್ ಹತ್ತದಂತೆ ಯುವಕ ನಿರಾಕರಿಸಿದ್ದಾನೆ. ಆದ್ರೆ ಅಲ್ಲೇ ಇದ್ದ ಮಹಿಳೆ ಯುವಕ ನೋಡುನೋಡುತ್ತಿದ್ದಾನೆ ಮಾಯವಾಗಿದ್ದಾಳೆ. ಇದರಿಂದ ಭಯಭೀತಿಗೊಂಡ ಯುವಕ ತಕ್ಷಣ ಬೈಕ್ ಜೊತೆ ಎಸ್ಕೇಪ್ ಆಗಿದ್ದಾನೆ. ಸ್ವಲ್ಪ ದೂರದಲ್ಲಿ ಹೋಗಿ ಬೈಕ್ ಸವಾರ ಬಿದ್ದು ಗಾಯಗೊಂಡ ಘಟನೆಯೂ ನಡೆದಿದೆ.
ಈ ಬಿಳಿ ವಸ್ತ್ರಧಾರಿ ಮಹಿಳೆ ಎಷ್ಟೋ ಜನರಿಗೆ ಭಯವನ್ನ ಹುಟ್ಟಿಸಿರುವುದು ಸತ್ಯ ಎಂಬುದಕ್ಕೆ ನೈಜ ಉದಾಹರಣೆ ಕೆಲ ದಿನಗಳ ಹಿಂದೆ ಕೇರಳ ಮೂಲದ ಕೋಳಿ ಸಾಗಾಟದ ವಾಹನ ಸವಾರನಿಗೆ ಕಂಡ ದೃಶ್ಯ. ಹೌದು ಕನ್ಯಾನ ಪೆಟ್ರೋಲ್ ಬಂಕ್ ಬಳಿ ಕೇರಳದ ಲಾರಿ ಚಾಲಕ ಮಲಗಿದ್ದ. ಈ ವೇಳೆ ರಾತ್ರಿ ಸುಮಾರು 2 ಗಂಟೆಗೆ ದೊಡ್ಡ ಶಬ್ದವೊಂದು ಕೇಳಿದೆ. ಇದರಿಂದ ಎಚ್ಚರಗೊಂಡ ಲಾರಿ ಚಾಲಕ ಎದ್ದು ನೋಡಿದಾಗ ಕನ್ಯಾನದ ಪೆಟ್ರೋಲ್ ಬಳಿಯ ರಸ್ತೆಯಲ್ಲಿ ಬಿಳಿ ಬಣ್ಣದ ವಸ್ತ್ರವನ್ನುಟ್ಟ ಮಹಿಳೆ ಓಡಾಡುವುದನ್ನ ಗಮನಿಸಿದ್ದಾನೆ. ಬಳಿಕ ಲಾರಿಯ ಹೆಡ್ ಲೈಟ್ ಹಾಕಿ ನೋಡಿದಾಗ ಮಹಿಳೆ ರಸ್ತೆಯಲ್ಲಿ ಹೋಗುವುದು ನೋಡಿದ್ದಾನೆ. ಸ್ವಲ್ಪ ಹೊತ್ತಾಗುತ್ತಿದ್ದಂತೇ ಮಹಿಳೆ ಮಾಯವಾಗಿದೆ ಎಂದು ಹೇಳಲಾಗಿದೆ. ಇವೆಲ್ಲವೂ ಕನ್ಯಾನ ಭಾಗದ ಸುತ್ತಮುತ್ತ ನಡೆದಿರುವ ಘಟನೆಯಾಗಿದ್ದು, ರಾತ್ರಿ ಹೊತ್ತು ಸಂಚರಿಸುವಾಗ ಒಬ್ಬೊಬ್ಬರಾಗಿ ಹೋಗಬೇಡಿ ಎಂದು ಆ ಭಾಗದ ಜನ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನ ರವಾನಿಸಿದ್ದಾರೆ.