ದಕ್ಷಿಣ ಕನ್ನಡ: ಗ್ರಾಹಕರಿಗೆ ಶಾಕ್ ನೀಡಿದ ಆರ್‌ಪಿಸಿ! ಕೋಟ್ಯಂತರ ರೂಪಾಯಿ ಪಂಗನಾಮ!
Monday, December 9, 2024
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರೀ ಸಂಚಲನ ಮೂಡಿಸಿದ್ದ ಚೈನ್ ಲಿಂಕ್ ಮಾದರಿಯ ಆರ್‌ಪಿಸಿ ಇದೀಗ ಪಂಗನಾಮ ಹಾಕಿ ಕೋಟಿಗಟ್ಟಲೆ ಹಣ ಲಪಟಾಯಿಸಿದೆ ಅನ್ನೋ ಸುದ್ದಿ ಹೊರ ಬಿದ್ದಿದೆ. ಮಹಿಳೆಯೊಬ್ಬರ ಆಡಿಯೋ ವೈರಲ್ ಆಗಿದ್ದು, ಯಾರೂ ಆರ್‌ಪಿಸಿ ಖಾತೆ ತೆರೆಯದಂತೆ ಮನವಿ ಮಾಡಿದ್ದಾರೆ. ಡಿಸೆಂಬರ್ ತಿಂಗಳಿಗೆ ಅಂತ್ಯವಾಗಲಿದೆ. ನನ್ನನ್ನು ಜಾಯಿನ್ ಮಾಡಿಸಿದ ಮಹಿಳೆ ತಿಂಗಳಿಗೆ 4 ಲಕ್ಷ ಗಳಿಸುತ್ತಿದ್ದಾರೆ. ಅವರೇ ಆರ್‌ಪಿಸಿ ಮಾಡದಂತೆ ಹೇಳುತ್ತಿದ್ದಾರೆ. ಅವರ ವ್ಯಾಲೆಟ್‌ನಲ್ಲಿರುವ 6 ಲಕ್ಷ ರೂಪಾಯಿಯನ್ನು ತೆಗೆಯಲು ಬಿಡುತ್ತಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಇದರಿಂದ ನಾವು ಡೆಪಾಸಿಟ್ ದುಡ್ಡು ಕಂಪೆನಿಯ ಪಾಲಾಗಲಿದೆ ಎಂದಿದ್ದಾರೆ.
ಇದೊಂದು ದೊಡ್ಡ ಗ್ಯಾಂಬ್ಲಿಂಗ್‌ನಂತೆ ಕಂಡು ಬರುತ್ತಿದ್ದು, ನಂಬಿ ಮೋಸ ಹೋಗುವ ಮುನ್ನ ಜನರು ಎಚ್ಚೆತ್ತುಕೊಳ್ಳಬೇಕಿದೆ.