
PUTTUR: ಪುತ್ತೂರಿನಲ್ಲಿ ಮತ್ತೆ ಮುನ್ನೆಲೆಗೆ ಬಂದ `ಪುತ್ತೂರಿಗೆ ಪುತ್ತಿಲ'
ಪುತ್ತೂರು: ಪುತ್ತೂರಿನಲ್ಲಿ ಮತ್ತೆ ರಾಜಕೀಯ ಗರಿಗೆದರಿದೆ. ಹೌದು ಪುತ್ತೂರಿನ ರಾಜಕೀಯದ ಇತಿಹಾಸದಲ್ಲೇ ಬಹುದೊಡ್ಡ ಟ್ರೆಂಡ್ ಸೃಷ್ಠಿಸಿದವರಲ್ಲಿ ಮುಂಚೂಣಿಯಲ್ಲಿರುವವರು ಅಶೋಕ್ ಕುಮಾರ್ ರೈ. ಯಾಕಂದ್ರೆ ಈಗ ಎಲ್ಲಿ ನೋಡಿದ್ರೂ ಅಶೋಕ್ ರೈ ಅವರ ಗುಣಗಾನವನ್ನೇ ಮಾಡುವವರೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಭಿವೃದ್ಧಿಯ ಪಥಕ್ಕೆ ಪುತ್ತೂರನ್ನ ಕೊಂಡೊಯ್ಯಬೇಕು ಎಂಬ ದೃಷ್ಠಿಯಿಂದ ಪುತ್ತೂರಿನಿಂದ ಬೆಂಗಳೂರಿನವರೆಗೂ ಓಡಾಡಿ, ವಿಧಾನಸೌಧದಲ್ಲಿ ತನ್ನ ಊರಿನ ಜನರಿಗೆ ಏನಾಗಬೇಕು ಎಂಬುದನ್ನ ಗಟ್ಟಿ ಧ್ವನಿಯಾಗಿ ಮಾತಾಡಿ ಸೈ ಅನಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಪುತ್ತೂರಿಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ಬರಬೇಕೆಂಬ ಒತ್ತಾಸೆ ಅವರಲ್ಲಿತ್ತು. ಅದಕ್ಕಾಗಿ ಅಭಿಯಾನಗಳು ನಡೆದವು. ಮೆಡಿಕಲ್ ಕಾಲೇಜು ಬರಲೇಬೇಕೆಂಬ ಉದ್ದೇಶದಿಂದ ರಾಜ್ಯದ ಮುಖ್ಯಮಂತ್ರಿಯವರನ್ನ ಕಾಡಿಬೇಡಿ ತನ್ನೂರಿಗೆ ಮೆಡಿಕಲ್ ಕಾಲೇಜನ್ನ ಬಜೆಟ್ ನಲ್ಲಿ ಘೋಷಣೆ ಮಾಡಿಸಿ ಹತ್ತೂರಿನ ಶಾಸಕರಿಗೆ ಪುತ್ತೂರಿನ ಶಾಸಕ ಏನು ಎಂಬುದನ್ನ ತೋರಿಸಿಕೊಟ್ರು. ಇದೀಗ ಅದೇನೆ ಇರಲಿ ಅಶೋಕ್ ರೈ ಜನಪರವಾಗಿ ಪುತ್ತೂರಿನಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಇದರ ನಡುವೆ ಮುಂದಿನ ಚುನಾವಣೆಯಲ್ಲಿ ಅಶೋಕ್ ರೈ ಕಾಂಗ್ರೆಸ್ಸಿನಿಂದಲೇ ಸ್ಫರ್ಧಿಸುತ್ತಾರಾ ಅನ್ನೋ ಪ್ರಶ್ನೆಯೂ ಹಲವರಲ್ಲಿದೆ. ಆದ್ರೆ ಬಿಜೆಪಿಯ ಪುತ್ತೂರಿನ ನಾಯಕರು ಮಾತ್ರ ಅಶೋಕ್ ರೈ ಅವರನ್ನ ತನ್ನ ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಡುವುದಿಲ್ಲ ಎಂಬ ಗುಸು ಗುಸು ಪಿಸು ಪಿಸು ಮಾತುಗಳಿಂದಲೇ ತಿಳಿದಿದೆ. ಇದರ ನಡುವೆ ಇದೀಗ ಮತ್ತೆ ಟ್ರೆಂಡ್ ಆಗಿರುವುದು `ಪುತ್ತೂರಿಗೆ ಪುತ್ತಿಲ'.
ಹೌದು ಇದೀಗ ಪುತ್ತೂರಿಗೆ ಪುತ್ತಿಲ ಅನ್ನೋ ಪೋಸ್ಟರ್ ವೊಂದು ಬಾರಿ ವೈರಲ್ ಆಗುತ್ತಿದೆ. ಅಶೋಕ್ ರೈ ಅವರು ಸರ್ಕಾರಿ ಮೆಡಿಕಲ್ ಕಾಲೇಜನ್ನು ಪುತ್ತೂರಿಗೆ ಘೋಷಣೆ ಮಾಡಿಸುವಲ್ಲಿ ಸಫಲವಾಗಿದ್ದಾರೆ. ಇದನ್ನೇ ಮುಂದಿಟ್ಟು "ಅಶೋಕ್ ರೈಗಳೇ ನೀವು ಹಿಮಾಲಯ ಪರ್ವತವನ್ನು ಹೊತ್ತುಕೊಂಡು ಪುತ್ತೂರಿಗೆ ಬಂದರೂ ನಾವು ಮುಂದಿನ ಚುನಾವಣೆಯಲ್ಲಿ ಅರುಣ್ ಪುತ್ತಿಲರನ್ನೇ ಪುತ್ತೂರಿನಲ್ಲಿ ಶಾಸಕರನ್ನಾಗಿ ಮಾಡೋದು" ಪುತ್ತೂರಿಗೆ ಪುತ್ತಿಲ ಎಂದು ಅಶೋಕ್ ರೈ ಗೆ ಕೌಂಟರ್ ಕೊಟ್ಟು ಪೋಸ್ಟರ್ ವೊಂದು ಭಾರೀ ವೈರಲ್ ಆಗುತ್ತಿದೆ. ಇದು ರಾಜಕೀಯವಾಗಿ ಅಶೋಕ್ ರೈಗೂ ನಡುಕ ಹುಟ್ಟಿಸಿದೆ.
ಒಂದು ವೇಳೆ ಬಿಜೆಪಿಯಿಂದ ಪುತ್ತಿಲರನ್ನ ಮುಂದಿನ ಚುನಾವಣೆಗೆ ಕಣಕ್ಕಿಳಿಸಿದ್ದೇ ಆದಲ್ಲಿ ಪುತ್ತೂರಿನಲ್ಲಿ ಬಿಜೆಪಿಗೆ ಸುಲಭ ಜಯ. ಅದೇ ಪುತ್ತಿಲಗೆ ಬಿಜೆಪಿಯವ್ರು ಟಿಕೆಟ್ ನೀಡದೇ ಇದ್ದು, ಪುತ್ತಿಲ ಪಕ್ಷೇತರವಾಗಿ ನಿಂತಲ್ಲಿ ಮತ್ತೆ ಅದೇ ರಾಗ ಅದೇ ಹಾಡು ಎಂಬಂತ ಅಶೋಕ್ ರೈಗಳು ಜಯಗಳಿಸುವ ಸಾಧ್ಯತೆ ಇದೆ. ಬದಲಾಗಿ ಬಿಜೆಪಿಯಿಂದ ಹೊಸ ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ದೇ ಆದಲ್ಲಿ, ಪುತ್ತಿಲ ಸ್ಫರ್ಧೆ ಮಾಡದಿದ್ದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ಬಿಗ್ ಫೈಟ್ ಇರಲಿದೆ. ಒಟ್ನಲ್ಲಿ ಪುತ್ತೂರಿಗೆ ಪುತ್ತಿಲ ಅನ್ನೋ ಟ್ರೆಂಡ್ ಮತ್ತೆ ಚಾಲ್ತಿಗೆ ಬಂದಿದ್ದು, ಬಿಜೆಪಿ ವಲಯದಲ್ಲೂ ಭಾರೀ ಸಂಚಲನ ಸೃಷ್ಟಿಯಾಗಿದೆ. ಪುತ್ತೂರು ಬಿಜೆಪಿಯಲ್ಲಿ ಎಲ್ಲವೂ ಸರಿ ಎಲ್ಲ ಎಂದು ಹಿರಿಯ ನಾಯಕ ಪ್ರಸಾದ್ ಭಂಡಾರಿ ಇತ್ತೀಚೆಗೆ ಹೇಳಿದ್ದರು. ಅದು ಇದೀಗ ಮತ್ತೊಮ್ಮೆ ಸಾಬೀತು ಆಗಿದೆ ಎಂಬುದು ಸತ್ಯ.