-->
MANGALORE: ಕರಾವಳಿಯಲ್ಲಿ ಯುಪಿ ಮಾದರಿಯಲ್ಲೇ ಟಫ್ ರೂಲ್ಸ್...!!!

MANGALORE: ಕರಾವಳಿಯಲ್ಲಿ ಯುಪಿ ಮಾದರಿಯಲ್ಲೇ ಟಫ್ ರೂಲ್ಸ್...!!!



ಮಂಗಳೂರು: ಕರಾವಳಿಯಲ್ಲಿ ಉತ್ತರ ಪ್ರದೇಶದ ಮಾದರಿ ರೂಲ್ಸ್​ ಜಾರಿಯಾಗಿದೆ. ಗೋಹತ್ಯೆ ಕೇಸ್​ನಲ್ಲಿ ಯೋಗಿ ಮಾದರಿ ಕ್ರಮ ಜಾರಿಗೆ ತಂದಿದ್ಧಾರೆ. ಅಕ್ರಮ ಗೋಮಾಂಸ ಸಾಗಣೆ ಆರೋಪದಲ್ಲಿ ಮನೆಗಳ ಜಪ್ತಿ ಮಾಡಲಾಗಿದೆ. ಮನೆಯಲ್ಲಿ ಅಕ್ರಮವಾಗಿ ಗೋಮಾಂಸ ಮಾರುತ್ತಿದ್ದ ಆರೋಪ ಕೇಳಿಬಂದಿದ್ದು, ಬಿಜೆಪಿ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.

ಮಂಗಳೂರು ಉತ್ತರ ಶಾಸಕ ಭರತ್​ ಶೆಟ್ಟಿ ಬೆಂಬಲಿಗರು ಆರೋಪ ಮಾಡಿದ್ದರು. ದಕ್ಷಿಣ ಕನ್ನಡ ಉಪವಿಭಾಗಾಧಿಕಾರಿ ಮೂಲಕ ದಿಢೀರ್​ ಕಾರ್ಯಾಚರಣೆ ನಡೆಸಿದ್ದಾರೆ. ಗೋಹತ್ಯೆ ಪ್ರತಿಬಂಧಕ ಕಾಯ್ದೆ-2020ರ ಅಡಿ ಕಾರ್ಯಾಚರಣೆಯಾಗಿದೆ.

ಕರ್ನಾಟಕ ಜಾನುವಾರ ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮದಲ್ಲಿ ಜಿಲ್ಲಾಡಳಿತ ಮೂವರ ಮನೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ಧಾರೆ. ಅಕ್ರಮ ಗೋಮಾಂಸ ಸಾಗಣೆ ಆರೋಪದಲ್ಲಿ ಮನೆಗಳ ಜಪ್ತಿ ಮಾಡಲಾಗಿದೆ. ಹಕೀಂ @ ಸುಕ, ಹಕೀಂ, ಮೊಹಮ್ಮದ್ ಪರ್ವೇಜ್​ಗೆ ಸೇರಿದ ಮನೆಗಳು ಜಪ್ತಿಯಾಗಿದ್ದು, ಕೃಷ್ಣಾಪುರ, ಕಾಟಿಪಳ್ಳ, ಮಂಗಳೂರಿನಲ್ಲಿ ಮನೆಗಳ ಮುಟ್ಟುಗೋಲು ಹಾಕಿದ್ಧಾರೆ. ಕರಾವಳಿಯಲ್ಲಿ ಧರ್ಮ ದಂಗಲ್​​​​ ಶುರುವಾಗಿದ್ದು, ಗೋಹಂತಕರ ಮೇಲೆ ಯುಪಿ ಮಾದರಿಯಲ್ಲೇ ಟಫ್​​ ರೂಲ್ಸ್​ ಜಾರಿ ಮಾಡಿದೆ. 

Ads on article

Advertise in articles 1

advertising articles 2

Advertise under the article