
ದುಬೈ: BPL ಕ್ರಿಕೆಟ್ ಲೀಗ್; ಚಾಂಪಿಯನ್ ಆಗಿ ಹೊರ ಹೊಮ್ಮಿದ ಪೆಸಿಫಿಕ್ ಚಾರ್ಜರ್ಸ್
ದುಬೈ: ಬದ್ರಿಯಾ ಫ್ರೆಂಡ್ಸ್ ಯುಎಇ ನೇತೃತ್ವದಲ್ಲಿ ನಡೆದ ವಿಶೇಷ ಆಹ್ವಾನಿತ ಐದು ತಂಡಗಳ BPL-6 ಕ್ರಿಕೆಟ್ ಲೀಗಿನ ಫೈನಲ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಪೆಸಿಫಿಕ್ ಚಾರ್ಜರ್ಸ್ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ದುಬೈಯ ಜಿ ಫೋರ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅನ್ವರ್ ಬಿಕರ್ನಕಟ್ಟೆ ಮಾಲೀಕತ್ವದ, ಬಾತಿಶಾಂ ನಾಯಕತ್ವದ 'ಪೆಸಿಫಿಕ್ ಚಾರ್ಜರ್ಸ್' ತಂಡವು ಇರ್ಫಾನ್ ಎರ್ಮಾಳ್ ಮಾಲಕತ್ವದ, ಅರ್ಫಾ ಮಾರಿಪಳ್ಳ ನಾಯಕತ್ವದ 'ರಿಯಲ್ ಫೈಟರ್ಸ್' ತಂಡವನ್ನು ಮಣಿಸುವ ಮೂಲಕ ಗೆಲುವನ್ನು ಪಡೆಯಿತು.
ಸರಣಿಯಲ್ಲಿ ಬಾತಿಶಾಂ ಅತ್ಯುತ್ತಮ ಬ್ಯಾಟ್ಸ್ ಮನ್ ಆಗಿ ಹೊರ ಹೊಮ್ಮಿದರೆ, ರಿಯಾಝ್ ಅತ್ಯುತ್ತಮ ಬೌಲರ್ ಪ್ರಶಸ್ತಿಗೆ ಭಾಜನರಾದರು.
AMAC ಬಿಲ್ಡರ್ಸ್ ಪ್ರಾಯೋಜಕತ್ವ ಹಾಗೂ ಸುಪ್ರೀಂ ಸ್ಟಾರ್, ಬ್ರಿಸ್ಟಾರ್ ಮೊಬೈಲ್ಸ್, ಐಡಿವಿಶನ್ ಮತ್ತು ಎಸ್.ಕೆ. ಗ್ರೂಪ್ ಸಹ ಪ್ರಾಯೋಜಕತ್ವದಲ್ಲಿ ನಡೆದ ಪಂದ್ಯಕೂಟದಲ್ಲಿ ಕ್ರಿಕೆಟ್ ಮಾಸ್ಟರ್ಸ್, ಚಾಲೆಂಜರ್ಸ್ ಫ್ರೆಂಡ್ಸ್ ಸರ್ಕಲ್, ಕುಡ್ಲ ನೈಟ್ಸ್ ರೈಡರ್ಸ್ ತಂಡಗಳು BPL-6 ಗಾಗಿ ಸೆಣಸಾಡಿದ್ದವು.
ಪಂದ್ಯಕೂಟದ ನೇತೃತ್ವವನ್ನು ಸಿನಾನ್ ಅರಫಾ, ಸಾದಿಕ್ ಉಳ್ಳಾಲ, ಬಿಎಲ್ ಲತೀಫ್, ಅರ್ಫಾ ಮಾರಿಪಳ್ಳ, ಶಫ್ಫಾಫ್, ನಝೀರ್ ಬಿಕರ್ನಕಟ್ಟೆ ವಹಿಸಿದ್ದರು.