
KANTHARA: ನಟಿ ಕಂಗನಾಗೆ ಹ್ಯಾಂಗೋವರ್ ಇಳಿದಿಲ್ವಂತೆ...???
Friday, October 21, 2022
ಕಾಂತಾರ...ಕಾಂತಾರ...ಕಾಂತಾರ...ಎಲ್ಲೆಲ್ಲೋ ಕಾಂತಾರದ್ದೇ ಹವಾ...ಹೌದು ಕಾಂತಾರ ಚಲನಚಿತ್ರವನ್ನ ವೀಕ್ಷಿಸಿ ಬಂದ ಬಾಲಿವುಡ್ ನಟಿ ಕಂಗನಾ ರಾಣವತ್ ಇನ್ನೂ ಹ್ಯಾಂಗೋವರ್ ನಿಂದ ಹೊರಬಂದಿಲ್ವಂತೆ..ಅಬ್ಬಬ್ಬಾ ಏನಿದು ಚಿತ್ರ ಮಾಡಿದ್ದೀರಿ ರಿಷಬ್ ಶೆಟ್ರೆ..ನಿಮಗೆ ಹ್ಯಾಟ್ಸಾಫ್ ಅಂತ ಗುಣಗಾನ ಮಾಡಿದ್ದಾರೆ.
ನಾನು ಕುಟುಂಬದವರ ಜೊತೆ ಹೋಗಿ ಚಿತ್ರವನ್ನ ನೋಡಿಕೊಂಡು ಬಂದಿದ್ದೇನೆ. ಈಗಲೂ ನಾನು ಶೇಕ್ ಆಗುತ್ತಿದ್ದೇನೆ. ಎಂತಹ ಅನುಭವ ಅಬ್ಬ...ಶೆಟ್ರೆ ನಿಮ್ಮ ಬರವಣಿಗೆ, ನಿರ್ದೇಶನ, ನಟನೆ ಎಲ್ಲವೂ ಅತ್ಯುತ್ತಮ ಎಂದು ಹಾಡಿ ಹೊಗಲಿದ್ದಾರೆ.