
PUTTUR: ಜನಮೂಲದಿಂದಲೇ `ಹಲಾಲ್' ಕಿತ್ತೊಗೆಯಿರಿ...!!!
ಪುತ್ತೂರು: ಅಲ್ಪಸಂಖ್ಯಾತ ಮುಸ್ಲಿಮರು ಪಾಲಿಸಬೇಕಾದ ಹಲಾಲ್ಗೆ ಇಂದು ಬಹುಸಂಖ್ಯಾತ ಹಿಂದೂಗಳು ತಮಗೆ ಅರಿಯದಂತೆ ಬೆಂಬಲಿಸುತ್ತಿದ್ದಾರೆ. ಆ ಮೂಲಕ ಹಲಾಲ್ ಆರ್ಥಿಕತೆಯನ್ನು ಭವಿಷ್ಯದಲ್ಲಿ ಯಾವುದೇ ವ್ಯಾಪಾರ ವಹಿವಾಟಿಗೆ ಅನಿವಾರ್ಯ ಎಂಬಂತೆ ಬೆಳೆಸಲಾಗುತ್ತಿದೆ. ಈ ಕುರಿತು ಹಿಂದೂ ಬಾಂಧವರು ತಕ್ಷಣ ಎಚ್ಚೆತ್ತುಕೊಂಡು ಹಲಾಲ್ ಪ್ರೇರಣೆಯ ಬಳಕೆಯನ್ನು ಬಹಿಷ್ಕರಿಸಬೇಕಾಗಿದೆ ಎಂದು ಹಿಂದೂ ಜನ ಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ್ ಸಿಂಧೆ ಹೇಳಿದರು.
ಅವರು ಪುತ್ತೂರಿನಲ್ಲಿ ನಡೆದ ಹಲಾಲ್ ವಿರುದ್ಧ ಜನಜಾಗೃತಿ ಸಭೆಯಲ್ಲಿ ಮಾತನಾಡಿ, 2013ರಲ್ಲಿ ವಿಶ್ವ ಹಲಾಲ್ ಸಮ್ಮೇಳನ ವಿದೇಶದಲ್ಲಿ ನಡೆದಿತ್ತು. ಅಲ್ಲಿ ಹಲಾಲ್ ಇದ್ದಲ್ಲಿ ಖರೀದಿಸುವಂತೆ ಫರ್ಮಾನು ಹೊರಡಿಸಲಾಗಿತ್ತು. ಜಮೀಯತ್ ಉಲಮಾ ಇ ಹಿಂದ್ಗೆ ಹಲಾಲ್ ಸರ್ಟಿಫಿಕೇಟ್ ನೀಡುವ ಅಧಿಕಾರ ನೀಡಲಾಯಿತು. ಭಯೋತ್ಪಾದನೆಗಿಂತಲೂ ಸುಲಭವಾಗಿ ಹಲಾಲ್ ಆರ್ಥಿಕತೆಯ ಮೂಲಕ ಜಗತ್ತನ್ನು ಹಾಗೂ ಮುಸ್ಲಿಮೇತರರನ್ನು, ಮುಗಿಸುವ ಹುನ್ನಾರ ಆರಂಭಿಸಲಾಯಿತು. ಇದನ್ನು ಅರಿಯದ ಜನರು ಸುಲಭವಾಗಿ ಹಲಾಲ್ ಆರ್ಥಿಕತೆಯ ಎದುರು ಮಂಡಿಯೂರುತ್ತಿದ್ದಾರೆ ಎಂದು ರಮೇಶ್ ಶಿಂಧೆ ಹೇಳಿದರು.
ಹಲಾಲ್ ಆರೋಗ್ಯಯುತ ಎನ್ನುವುದು ಎಲ್ಲಿಯೂ ಘೋಷಣೆ ಆಗಿಲ್ಲ. ಆದರೆ 75 ವರ್ಷಗಳಲ್ಲಿ ಭಾರತದ ಒಟ್ಟು ಆರ್ಥಿಕತೆ 3 ಟ್ರಿನಿಯನ್ನಷ್ಟೇ ಬೆಳೆದಿದ್ದರೆ, ಕೇವಲ 9 ವರ್ಷಗಳಲ್ಲಿ ಹಲಾಲ್ ಅರ್ಥ ವ್ಯವಸ್ಥೆ ಜಗತ್ತಿನಲ್ಲಿ ೨ ಟ್ರಲಿಯನ್ ಡಾಲರ್ಗೆ ತಲುಪಿದೆ. ಆಹಾರಕ್ಕೆ ಮಾತ್ರ ಉಲ್ಲೇಖಿಸಲ್ಪಟ್ಟ ಹಲಾಲ್ ಇಂದು ಔಷಧಿ, ಕಾಸ್ಮೆಟಿಕ್, ಡೇಟಿಂಗ್ ಆಪ್, ಕಟ್ಟಡಗಳ ನಿರ್ಮಾಣ, ಆಸ್ಪತ್ರೆ, ಪ್ರವಾಸೋದ್ಯಮ ಸೇರಿದಂತೆ ಎಲ್ಲಾ ಕಡೆಗಳಲ್ಲೂ ಆವರಿಸಿಕೊಂಡಿದೆ. ಅಂತಹ ಮಾರುಕಟ್ಟೆ ವ್ಯವಸ್ಥೆಯನ್ನು ಸೃಷ್ಟಿ ಮಾಡಲಾಗಿದೆ ಎಂದರು.
ಹಲಾಲ್ ಈಗ ಪ್ರತಿಯೊಂದು ವಸ್ತು, ವ್ಯವಹಾರದಲ್ಲೂ ಹಾಸುಹೊಕ್ಕಾಗಿರುವುದರಿಂದ ಹಿಂದೂ ಬಾಂಧವರು ವ್ಯವಹಾರದ ಸಂದರ್ಭದಲ್ಲಿ ಹಲಾಲ್ ಲೋಗೋ ಇದೆಯೇ ? ಎಂಬುದನ್ನು ಗಮನಿಸಿ ಅದನ್ನು ನಿರಾಕರಿಸಬೇಕು. ಹಿಂದೂಗಳ ಅತ್ಯಂತ ದೊಡ್ಡ ಹಬ್ಬ ಹಾಗೂ ಹೆಚ್ಚು ಆರ್ಥಿಕ ವ್ಯವಹಾರ ನಡೆಯುವ ದೀಪಾವಳಿಯಿಂದ ಆರಂಭಗೊಂಡು ಹಲಾಲ್ ಬಹಿಷ್ಕಾರದ ಮೂಲಕ ದೊಡ್ಡ ಆಂದೋಲನ ಆಗಬೇಕು. ಜನಮೂಲದಿಂದಲೇ ಹಲಾಲ್ ಕಿತ್ತೊಗೆಯುವ ಮಹತ್ವದ ನಿರ್ಧಾರವನ್ನು ಹಿಂದೂ ಬಾಂಧವರು ತೆಗೆದುಕೊಳ್ಳಬೇಕು. ಇದು ಭಾರತೀಯ ಭವಿಷ್ಯವನ್ನು ಉಜ್ವಲಗೊಳಿಸಲು ಕೊಡುಗೆಯಾಗುತ್ತದೆ ಎಂದು ರಮೇಶ್ ಶಿಂಧೆ ವಿನಂತಿಸಿದರು.
ಚಿಂತಕ ಶ್ರೀಕೃಷ್ಣ ಉಪಾಧ್ಯಾಯ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕಾರ ಗುರುಪ್ರಸಾದ್ ಗೌಡ, ಹಿಂದೂ ಜನ ಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕಾರ ಚಂದ್ರ ಮೊಗೇರ, ಸನಾತನ ಸಂಸ್ಥೆಯ ದಯಾನಂದ್,ನವೀನ್ ಕುಲಾಲ್,ದಿನೇಶ್ ಜೈನ್, ಹರಿಪ್ರಸಾದ್ ನೆಲ್ಲಿಕಟ್ಟೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.