.jpg)
PUTTUR: ಮಹೇಶ್ ಭಟ್ಟನ ಕರಾಮತ್ತಿಗೆ ಹಿಂದೂ ನಾಯಕರು ಮೌನ... ಪೊಲೀಸ್ ಇಲಾಖೆಯೂ ಸೈಲೆಂಟ್..!?
ಪುತ್ತೂರು: ಇಂದು ಸುಳ್ಳು ಕೇಸ್ ದಾಖಲು ಮಾಡೋದು ಕೂಡ ಸುಲಭವಾಗಿ ಬಿಟ್ಟಿದೆ. ಕೆಲವೊಮ್ಮೆ ಏನೂ ತಪ್ಪು ಮಾಡಿಲ್ಲ ಅಂದ್ರು ಸ್ಟೇಷನ್, ಕಾನೂನು ವ್ಯವಸ್ಥೆಯಲ್ಲಿ ಕೈಕಟ್ಟಿ ನಿಲ್ಲಬೇಕಾದ ಸ್ಥಿತಿ ಬರುತ್ತದೆ. ಅಂತಹದ್ರಲ್ಲಿ ಈ ಪ್ರಕರಣದಲ್ಲಿ ಕಣ್ಣಿಗೆ ಕಾಣುವ ಸಾಕ್ಷಿ ಇದ್ದರೂ ಒಂದು ಅಪ್ರಾಪ್ತ ವಯಸ್ಸಿನ ಹೆಣ್ಣು ಮಗಳಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ! ಇದಕ್ಕೆ ಮುಖ್ಯ ಕಾರಣ ನಮ್ಮ ಪೊಲೀಸ್ ವ್ಯವಸ್ಥೆ ಹಾಗೂ ನಮ್ಮ ಮೈಯೆಲ್ಲಾ ಬಂಗಾರ ಅಂಡು ಮಾತ್ರ ಹಿತ್ತಾಳೆ ಎಂಬತಿರೋ ನಾಯಕರು.
ಒಂದು ಬಾಲಕಿ ಮೇಲೆ ಲೈಂಗಿಕವಾಗಿ ಶೋಷಣೆಯಾದಾಗ ಪೊಲೀಸರೆ ಮುತುವರ್ಜಿ ವಹಿಸಬೇಕು, ಬಾಲಕಿ ಕಡೆಯವರು ಯಾರನ್ನು ಆರೋಪಿ ಅಂತಾರೋ ಅವನನ್ನು ಮೊದಲು ಬಂಧಿಸಿ ವಿಚಾರಣೆ ನಡೆಸೋದು ಪದ್ಧತಿ. ಇಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗೋ ಪ್ರಮಯವೇ ಬರುವುದಿಲ್ಲ. ಮಹೇಶ ಭಟ್ಟ ತಪ್ಪು ಮಾಡಿದ್ದಾನೋ ಇಲ್ವೋ ಅನ್ನೋದು ವಿಚಾರಣೆ ಮಾಡಿ ಹೇಳಬೇಕಾದ ವಿಚಾರವೇ ಹೊರತು, ಪೊಲೀಸ್ ವ್ಯವಸ್ಥೆ ಅವನನ್ನು ಬಂಧನ ಮಾಡೋ ಮೊದಲೇ ಕೇವಲ ಬಾಲಕಿಯನ್ನು ಬರೋಕೆ ಹೇಳಿದ್ದ ಅಷ್ಟೆ ಇತ್ಯಾದಿ ಅನ್ನೋ ಬಾಲಿಷ ಹೇಳಿಕೆ ಕೊಡೋದಕ್ಕೆ ಬರುವುದಿಲ್ಲ.!
ಮೊನ್ನೆ ದಲಿತ ಸಮಿತಿ ಇತ್ಯಾದಿ ಸಂಘಟನೆಗಳು ವಿಟ್ಲದಲ್ಲಿ ನ್ಯಾಯಕ್ಕಾಗಿ, ಆರೋಪಿಯ ಬಂಧನಕ್ಕಾಗಿ ಪ್ರತಿಭಟನೆ ಮಾಡಿದ್ರು, ವಿಟ್ಲ ಪೊಲೀಸ್ ವ್ಯವಸ್ಥೆ ಈ ವಿಚಾರದಲ್ಲಿ ತೋರಿಸುತ್ತಿರೋ ನಿಧಾನಗತಿಯ ನಡೆ ಹಲವು ಅನುಮಾನಕ್ಕೂ ಎಡೆಮಾಡಿಕೊಟ್ಟಿದೆ. ಇದನ್ನ ಪ್ರತಿಭಟನೆ ವೇಳೆ ಪ್ರತಿಭಟನಕಾರರು ಬೊಟ್ಟು ಮಾಡಿ ತೋರಿಸಿ ಉಲ್ಲೇಖಿಸಿದ್ರು. ಇಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ಶೋಷಣೆಯಾದ್ರೂ ಪ್ರತಿಭಟನೆ ಮಾಡಿಯೇ ನ್ಯಾಯ ದೊರಕಿಸಿಕೊಡಬೇಕಾದ ಕೆಟ್ಟ ಸ್ಥಿತಿ ಬಂದಿದ್ಯಾ.? ಅನೋದನ್ನ ಅರ್ಥಮಾಡಿಕೊಳ್ಳಬೇಕಾಗುತ್ತೆ! ಒಂದಾ ಆರೋಪಿಯ ಜೊತೆ ಪ್ರಭಾವಿಗಳಿರಬೇಕು? ಇಲ್ಲ ಪೊಲೀಸ್ ಇಲಾಖೆ ಕೆಟ್ಟ ಉದ್ದೇಶ ಹೊಂದಿದ್ಯಾ ಅನ್ನೋ ಅನುಮಾನವು ಪ್ರತಿಭಟನಕಾರರಲ್ಲಿ ಹುಟ್ಟಿಕೊಂಡಿದೆ.
ಇಂತಹ ಪ್ರಕರಣಗಳಲ್ಲಿ ರಾಜಕೀಯ ಅನ್ನೋದು ಬರಲೇಕೂಡದು ಆರೋಪಿ ಬಿಜೆಪಿ ಮುಖಂಡನೇ ಇರಲಿ, ಅವನ ಅಪ್ಪನೇ ಇರಲಿ ಮೊದಲು ಬಂಧಿಸಬೇಕಾದ್ದು ಪೊಲೀಸರ ಕರ್ತವ್ಯ. ಒಂದು ವೇಳೆ ಇಂತವರಿಗೆ ಸಪೋರ್ಟ್ ಮಾಡೋ ನಾಯಕರಿದ್ದಲ್ಲಿ ಅವರಿಗೆ ಮೊದಲು ಛಿಮಾರಿ ಹಾಕಬೇಕು, ಅಷ್ಟಕ್ಕೂ, ಇಂತಹ ಪ್ರಕರಣದಲ್ಲಿ ಯಾವುದೇ ನಾಯಕರು ಹೇಳಿಕೆ ಕೊಡುತ್ತಿಲ್ಲ ಯಾಕೆ? ಶಾಸಕ ಅಶೋಕ್ ಕುಮಾರ್ ರೈಯವರೇ ನೀವು ಅಪ್ರಾಪ್ತಯೇ ಮನೆಗೆ ಭೇಟಿ ಕೊಟ್ಟು ವಸ್ತುಸ್ಥಿತಿಯನ್ನು ಇನ್ನೊಮ್ಮೆ ಅರಿಯಬೇಕು. ಮನೆಗೆ ಹೋಗಿ ಬಂದ ಬಳಿಕದ ಅಪ್ಡೇಟ್ ತೆಗೆದುಕೊಳ್ಳಿ, ವಿಟ್ಲ ಏನೂ ಉತ್ತರಪ್ರದೇಶವಾ ಅಲ್ಲಾ ಬಿಹಾರವಾ..?
ನಮಗೆ ಇರೋ ಮಾಹಿತಿ ಪ್ರಕಾರ ಆ ಬಾಲಕಿಗೆ ಗರ್ಭಪಾತ ಮಾಡಿಸಲಾಗಿದೆ.?! ಏನೂ ತಪ್ಪು ಮಾಡಿಲ್ಲ ಅಂದ್ರೆ ಮಹೇಶ ಭಟ್ಟ ಅಡಗಿ ಕುಳಿತಿರುವ ಉದ್ದೇಶವೇನು? ಎಲ್ಲಿಯೋ ಮುಂಬೈಲ್ಲಿ ಅಡಗಿ ಕುರೋ ಆರೋಪಿಗಳನ್ನು ವಿಟ್ಲ ಪೊಲೀಸರು ಗರುಡಪಾತಾಳ ಹಾಕಿ ಎತ್ತಿಕೊಂಡು ಬಂದ ಉದಾಹರಣೆಯಿದೆ, ಹಾಗಾದ್ರೆ ಈ ಮಹೇಶ ಭಟ್ಟನನ್ನು ಬಂಧಿಸೋಕೆ ಸಾಧ್ಯವಿಲ್ವಾ..? ಎಲ್ಲದಕ್ಕೂ ಪ್ರತಿಭಟನೆ ಮಾಡ್ಬೇಕು ಅಂದ್ರೆ ಇಲ್ಲಿಗೆ ಶಾಸಕರ ಹಾಗೂ ಪೊಲೀಸ್ ವ್ಯವಸ್ಥೆಯ ಅಗತ್ಯವಿದ್ಯಾ..? ಶಾಸಕರ ಮೇಲೆ ಗೌರವವಿರೋ ಕಾರಣ ಬಹಿರಂಗವಾಗಿಯೇ ನೀವು ಇದರಲ್ಲಿ ಸತ್ಯಾಸತ್ಯೆಯನ್ನು ತಿಳಿದುಕೊಂಡು ಕೂಡಲೇ ಮುತುವರ್ಜಿ ವಹಿಸಿ ಎಂದೂ ಕೇಳಿಕೊಳ್ಳುತ್ತಿದ್ದೇವೆ.
ಹಾಗೇ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮೀಯರಾದ ಅರುಣ್ ಕುಮಾರ್ ಪುತ್ತಿಲ ಅವರೇ, ಹಾಗೂ ಅಣ್ಣನಂತಿರೋ ಬೋಟ್ಯಾಡಿ ಯವರೇ " ದಲಿತರು ಕೂಡ ಹಿಂದುಗಳು" ಅನ್ನೋದನ್ನ ಅರ್ಥಮಾಡಿಕೊಳ್ಳಬೇಕು, ಎಲ್ಲಾ ಕಡೆ ಭೇಟಿ ಕೊಡುವ ನೀವುಗಳು ಇಲ್ಲಿಗೂ ಸಮಯ ಮಾಡಿಕೊಂಡು ಹೋಗಿ ವಾಸ್ತವವನ್ನು ತಿಳಿದುಕೊಳ್ಳಬೇಕು.. ಇದು ನಿಮ್ಮ ರಾಜಕೀಯ ಜೀವನಕ್ಕೂ ಉತ್ತಮ. ಇದರಲ್ಲಿ ಯಾವುದೇ ಮುಖಂಡರು ನಿಮ್ಮ ದಾರಿ ತಪ್ಪಿಸೋದಕ್ಕೆ ನೋಡಿದ್ರು ಅದಕ್ಕೆ ಮಹತ್ವ ನೀಡಬೇಕಾದ ಅಗತ್ಯವಿಲ್ಲ. ನಿಮ್ಮ ತಂಗಿ ಅಥವಾ ಮಗಳು ಎಂಬ ದೃಷ್ಟಿಕೋನವನ್ನು ಇಟ್ಟುಕೊಂಡು ಅಪ್ರಾಪ್ತ ಬಾಲಕಿಗೆ ನ್ಯಾಯ ದೊರಕಿಸಿಕೊಡಿ. ಆಗ ನಮಗೂ ನಿಮ್ಮ ಮೇಲಿರೋ ಗೌರವ ದುಪ್ಪಟ್ಟಾಗುತ್ತೆ.
ವರದಿ: Parikshith bhat