
MANGALURU: ರಾಜೇಂದ್ರ ಕುಮಾರ್ ಜೊತೆ ವ್ಯಾವಹಾರಿಕ ಒಡನಾಟಕ್ಕೆ ಬ್ರೇಕ್: ಪತ್ರಕರ್ತರ ಸಂಘ ತೀರ್ಮಾನ
ಮೊದಲನೆಯದಾಗಿ ರಾಜೇಂದ್ರಕುಮಾರ್ ಜೊತೆ ಪತ್ರಕರ್ತರ ಜಿಲ್ಲಾ ಸಂಘವಾಗಲಿ, ಪ್ರೆಸ್ ಕ್ಲಬ್ ಆಗಲಿ ಯಾವುದೇ ರೀತಿಯಾದ ವ್ಯಾವಹಾರಿಕ ಒಡನಾಟ ಇಟ್ಟುಕೊಳ್ಳಬಾರದು ಹಾಗೂ ಪತ್ರಕರ್ತರ ಎಲ್ಲಾ ಕಾರ್ಯಕ್ರಮಗಳಿಂದಲೂ ಅವರನ್ನು ಹೊರಗಿಡುವ ತೀರ್ಮಾನ ಮಾಡಲಾಗಿದೆ. ಸಂಘದ ಸೇವಾ ಕಾರ್ಯಗಳಿಗೆ ಜಿಲ್ಲಾ ಸಹಕಾರಿ ಬ್ಯಾಂಕ್ ಆಗಲಿ ವ್ಯಯಕ್ತಿಕವಾಗಿ ರಾಜೇಂದ್ರ ಕುಮಾರ್ ನಿಂದಾಗಲಿ ಆರ್ಥಿಕ ಸಹಕಾರ ಪಡೆಯದಿರಲು ತೀರ್ಮಾನಿಸಲಾಗಿದೆ.
ಇನ್ನು ಇದೇ ಸಭೆಯಲ್ಲಿ ಬಹಳ ಮುಖ್ಯವಾದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.
1. ಯಾವುದೇ ಪ್ರೆಸ್ ಮೀಟ್ ನಡೆದರೂ ಅಲ್ಲಿ ಕೊಡುವ ಗಿಫ್ಟ್ ವೋಚರ್, ಅಥವಾ ನಗದು ರೂಪದಲ್ಲಿ ನೀಡುವ ಹಣಕ್ಕೆ ನಿರ್ಬಂಧ ಹಾಕಲಾಗಿದೆ. ಪ್ರೆಸ್ ಮೀಟ್ ಆಯೋಜಕರಿಗೆ ಈ ವಿಚಾರವನ್ನು ಮೊದಲೇ ತಿಳಿಸುವ ಮೂಲಕ ಈ ಸಂಸ್ಕೃತಿಗೆ ಕಡಿವಾಣ ಹಾಕಲಾಗಿದೆ.
2. ಅ‌್ಯಡ್ ಎಜೆನ್ಸಿಗಳು ಆಯೋಜಿಸುವ ಪ್ರೆಸ್ ಮೀಟ್ ಗಳಿಗೂ ಇದು ಅನ್ವಯ ಆಗಲಿದ್ದು ಅವರಿಗೂ ಈ ಬಗ್ಗೆ ಮನವರಿಕೆ ಮಾಡಲು ತೀರ್ಮಾನಿಸಲಾಗಿದೆ.
3. ಸೆಲೆಬ್ರಿಟಿ ಪ್ರೆಸ್ ಮೀಟ್ ಗಳಿಗೂ ಈ ವಿಚಾರವನ್ನು ಮನವರಿಕೆ ಮಾಡಿ ಗಿಫ್ಟ್ ವೊಚರ್ ಅಥವಾ ಗಿಫ್ಟ್ ನೀಡದಂತೆ ಪತ್ರಿಕಾಗೋಷ್ಠಿ ಆಯೋಜನೆಯ ಮಾಹಿತಿ ಬಂದ ತಕ್ಷಣ ತಿಳಿಸಿ ಅವರಿಗೆ ಮನವರಿಕೆ ಮಾಡಲು ತೀರ್ಮಾನಿಸಲಾಗಿದೆ.
ಇಂದು ರಾಜೇಂದ್ರ ಕುಮಾರ್ ಮಾಡಿದ್ದನ್ನು ಮುಂದೆ ಯಾರೂ ಮಾಡದಂತೆ ಈ ಮೇಲಿನ ಕ್ರಮಗಳು ಅಗತ್ಯವಾಗಿದೆ ಎಂದು ಜಿಲ್ಲಾ ಸಂಘದ ಕಾರ್ಯಕಾರಿಣಿ ಹಾಗೂ ಪ್ರೆಸ್ ಕ್ಲಬ್ ನ ಜಂಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.