
PUTTUR: ಪುತ್ತೂರಿನಲ್ಲಿ ತಲೆ ಎತ್ತಲಿದೆ 2 ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ!!
ಪುತ್ತೂರು: ಪುತ್ತೂರು ದಿನದಿಂದ ದಿನಕ್ಕೆ ಅಭಿವೃದ್ಧಿಯ ಪಥಕ್ಕೆ ಮುನ್ನುಗ್ಗುತ್ತಿದೆ. ಹೀಗಿರುವಾಗ ಪುತ್ತೂರಿಗೆ ಎರಡು ಖಾಸಗಿ ಒಡೆತನದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬರಲು ಮುಂದಾಗಿದೆ. ಈಗಾಗ್ಲೇ ಅಶ್ರಫ್ ಕಮ್ಮಾಡಿ ಒಡೆತನದ ಆಸ್ಪತ್ರೆಯೊಂದು ಪುತ್ತೂರಿನ ಕಮ್ಮಾಡಿಯಲ್ಲಿ ಉದ್ಘಾಟನೆಗೆ ಸಿದ್ಧಗೊಂಡಿದೆ.
ಇದರ ಬೆನ್ನಲ್ಲೇ ಇದೀಗ ಪುತ್ತೂರಿನ ಹೃದಯಭಾಗದ ತೆಂಕಿಲದಲ್ಲಿ ಖಾಸಗಿ ಒಡೆತನದವರು ಜಾಗ ಗುರುತು ಮಾಡಿಕೊಂಡಿದ್ದು, ಸದ್ಯ ಈ ಜಾಗದಲ್ಲಿ ಅತೀ ದೊಡ್ಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಈಗಾಗ್ಲೇ ಮಂಗಳೂರಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಇವೆ. ಇದರ ಜೊತೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರನ್ನೇ ಅವಲಂಭಿಸುವಂತ ಪರಿಸ್ಥಿತಿ ಇದೆ. ಇದನ್ನೇ ಮನಗಂಡು ಬೆಳ್ತಂಗಡಿ, ಸುಳ್ಯ, ಕಡಬ ಪುತ್ತೂರನ್ನ ಕೇಂದ್ರೀಕರಿಸಿ ಇದೀಗ ಪುತ್ತೂರಿನ ತೆಂಕಿಲದಲ್ಲಿ ಅತೀ ದೊಡ್ಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬರಲು ಸ್ಕೆಚ್ ರೆಡಿ ಮಾಡಲಾಗಿದೆ.
ಈ ಎರಡು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಬಂದ ಮೇಲೆ ಮಂಗಳೂರನ್ನ ಅವಲಂಭಿಸುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ. ಬದಲಾಗಿ ಆದಷ್ಟು ಎಲ್ಲವೂ ಚಿಕಿತ್ಸೆಗೆ ಸಹಕಾರಿಯಾಗುವಂತ ವ್ಯವಸ್ಥೆ ಈ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಿಗುತ್ತವೆ. ಇದರಿಂದ ದೂರದ ಭಾಗದ ಕಡಬ, ಸುಳ್ಯ, ಬೆಳ್ತಂಗಡಿ ಹಾಗೆಯೇ ಪುತ್ತೂರಿನ ಜನತೆಗೆ ಇದೊಂದು ಸಿಹಿ ಸುದ್ದಿಯಾಗಿದೆ. ಈ ಮೂಲಕ ಪುತ್ತೂರು ಮತ್ತಷ್ಟು ಅಭಿವೃದ್ಧಿ ಕಾಣಲಿದೆ. ಇದರ ಜೊತೆಗೆ ಈಗಾಗ್ಲೇ ಪುತ್ತೂರಿಗೆ ಮೆಡಿಕಲ್ ಕಾಲೇಜು ಕೂಡ ಮಂಜೂರಾಗಿದ್ದು, ಇದು ಇನ್ನಷ್ಟು ಅಭಿವೃದ್ಧಿಯ ಶಕೆಗೆ ಕಾರಣವಾಗಲಿದೆ.