-->
MANGALORE: ಕರಾವಳಿಗರೇ ಎಚ್ಚರ...ಸ್ವಲ್ಪ ಯಾಮಾರಿದ್ರೂ ಗುಳುಂ ಸ್ವಾಹ..

MANGALORE: ಕರಾವಳಿಗರೇ ಎಚ್ಚರ...ಸ್ವಲ್ಪ ಯಾಮಾರಿದ್ರೂ ಗುಳುಂ ಸ್ವಾಹ..


ಮಂಗಳೂರು: "ಕೃಷಿ ಮಾಡುವಾಗ ಭೂಮಿಯಲ್ಲಿ ನಿಧಿ ಸಿಕ್ಕಿದೆ. ನಮಗೆ ತುರ್ತಾಗಿ ಹಣ ಬೇಕಾದ ಕಾರಣ ಕಡಿಮೆಯಲ್ಲಿ ಚಿನ್ನ ಕೊಡ್ತೇವೆ"... ಹೀಗಂತ ಯಾರಾದ್ರೂ ನಿಮ್ಮ ಬಳಿ ಬಂದು ಹೇಳಿದ್ರೆ ಎಚ್ಚರವಾಗಿರಿ. ಯಾಕಂದ್ರೆ ಇಂತಹ ಕಥೆ ಹೇಳಿ ನಕಲಿ ಚಿನ್ನ ನೀಡಿ ವಂಚಿಸೋ ತಂಡವೊಂದು ಮಂಗಳೂರಿನಲ್ಲಿ ಕಾರ್ಯಾಚರಿಸ್ತಾ ಇದೆ. ನಗರದ ನಾಗುರಿ ಬಳಿ ಇದೇ ಕಥೆ ಹೇಳಿಕೊಂಡು ಅಂಗಡಿಯವರೊಬ್ಬರನ್ನು ವಂಚಿಸಲು  ಪ್ರಯತ್ನಿಸಿದ್ದಾರೆ. 


ಮಹಿಳೆ ಹಾಗೂ ನಾಲ್ವರು ಯುವಕರ ತಂಡ ಈ ಪ್ರಯತ್ನ ಮಾಡಿ ತಗಲಾಕೊಂಡಿದ್ದಾರೆ. ಮೊದಲಿಗೆ ಅಸಲಿ ಚಿನ್ನ ನೀಡಿ ಪರೀಕ್ಷಿಸಲು ಹೇಳಿದ್ದು ಪರೀಕ್ಷೆ ವೇಳೆ ಅದು ಅಸಲಿಯೇ ಆಗಿತ್ತು. 2 ಲಕ್ಷಕ್ಕೆ ಮತ್ತೊಂದು ಚಿನ್ನ ನೀಡಿದ್ದು ಅದು ನಕಲಿಯಾಗಿತ್ತು. ಆದ್ರೆ ಇಂತಹ ವಂಚನೆ ಬಗ್ಗೆ ಮೊದಲೇ ಅನುಮಾನ ಇದ್ದ ಅಂಗಡಿಯವರು ಈ ಚಿನ್ನ ಕೂಡಾ ಪರೀಕ್ಷೆ ಮಾಡುವುದಾಗಿ ಹೇಳಿದ್ದಾರೆ. ಈ ವೇಳೆ ಬಂಡವಾಳ ಬಯಲಾಗುತ್ತದೆ ಅಂತ ನಾಲ್ವರು ಯುವಕರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. 

ಆದ್ರೆ ಜೊತೆಯಲ್ಲಿದ್ದ ಮಹಿಳೆಯನ್ನು ಅಂಗಡಿಯವರು ಹಿಡಿದಿಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಡಿಮೆ ಬೆಲೆಗೆ ಇಂತಹ ಮೋಸದ ಕಥೆ ಹೆಣೆದು ಚಿನ್ನದ ಆಸೆ ತೋರಿಸಿ ವಂಚಿಸೋ ದೊಡ್ಡ ತಂಡವೇ ಇಲ್ಲಿ ಕಾರ್ಯಾಚರಿಸ್ತಾ ಇದೆ. ಹೀಗಾಗಿ ಸಾರ್ವಜನಿಕರು ಇಂತವರ ಬಗ್ಗೆ ಎಚ್ಚರವಾಗಿರೋದು ಒಳ್ಳೆಯದು.

Ads on article

Advertise in articles 1

advertising articles 2

Advertise under the article