-->
PUTTUR: ಅದ್ದು ಪಡೀಲ್ ಹಂದಿ ತರಹ ಬದುಕಿದರೆ ಕಾರ್ಯಕರ್ತರು ಕೈಕಾಲು ಮುರಿಯೋದು ಗ್ಯಾರಂಟಿ: ಕಿಶೋರ್ ಪುತ್ತೂರು

PUTTUR: ಅದ್ದು ಪಡೀಲ್ ಹಂದಿ ತರಹ ಬದುಕಿದರೆ ಕಾರ್ಯಕರ್ತರು ಕೈಕಾಲು ಮುರಿಯೋದು ಗ್ಯಾರಂಟಿ: ಕಿಶೋರ್ ಪುತ್ತೂರು


ಪುತ್ತೂರು: ಪುತ್ತೂರು ನಗರಸಭಾಧ್ಯಕ್ಷೆ ವಿರುದ್ಧ ಅವಾಚ್ಯ ಪದ ಬಳಸಿದ ಅದ್ದು ಪಡೀಲ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಯನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸ್ಥಳೀಯ ಶಾಸಕ ಅಶೋಕ್ ಕುಮಾರ್ ರೈ ಅವರ ಆಪ್ತನೆಂಬಂತೆ ಅದ್ದು ಪಡೀಲ್ ಗುರುತಿಸಿಕೊಂಡಿದ್ದು, ಶಾಸಕರು ಇಂತಹವರಿಂದ ದೂರ ಇರುವುದು ಉತ್ತಮ. ಇಂತಹವರನ್ನು ಇಟ್ಟುಕೊಳ್ಳುವುದು ಸೊಂಟದಲ್ಲಿ ಕೆಂಡ ಕಟ್ಟಿಕೊಂಡಂತೆ ಎಂದರು. 


ಅಲ್ಲದೇ, ಅದ್ದು ಪಡೀಲ್ ಬಿಜೆಪಿ ಪಕ್ಷದ ಕಮಲ ಚಿಹ್ನೆಗೆ ಹಾಗೂ ಪುತ್ತೂರಿನ ಪ್ರಥಮ ಪ್ರಜೆ ನಗರಸಭಾಧ್ಯಕ್ಷೆ ಅವರಿಗೂ ಅವಹೇಳನ ಆಗುವ ರೀತಿಯಲ್ಲಿ ಸಂದೇಶ ಹರಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಪಕ್ಷವನ್ನು ತಾಯಿಯಂತೆ ಕಾಣುತ್ತಾರೆ. ಜಿಲ್ಲೆಯಲ್ಲಿ ಪಕ್ಷವು ಸಂಘಟನೆ ಮಟ್ಟಿಗೂ ಬಲಿಷ್ಠವಾಗಿದೆ. ಕಾರ್ಯಕರ್ತರು ಕಾನೂನು ಕೈಗೆತ್ತಿಕೊಂಡರೆ ನಾವು ಜವಾಬ್ದಾರರಲ್ಲ‌‌. ಅದಾಗ್ಯೂ ಕಾರ್ಯಕರ್ತರು ತಾಳ್ಮೆ ವಹಿಸುವಂತೆ ನಾವು ಮನವಿ ಮಾಡುವುದಾಗಿ ಕಿಶೋರ್ ಕುಮಾರ್ ತಿಳಿಸಿದರು. 

ಅದ್ದು ಪಡೀಲ್ ನಾಯಿ ತರಹ ಬದುಕಿದರೆ ಉತ್ತಮ. ಹಂದಿ ತರಹ ಬದುಕಲು ಮುಂದಾದರೆ ನಿನ್ನ ಕೈಕಾಲನ್ನ ನಮ್ಮ ಕಾರ್ಯಕರ್ತರು ಮುರಿಯುವುದು ಗ್ಯಾರಂಟಿ ಎಂದು ಎಚ್ಚರಿಸಿದ್ದಾರೆ.

Ads on article

Advertise in articles 1

advertising articles 2

Advertise under the article