
UDUPI: ಬಾರ್ಕೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳ್ಳತನ
ಬ್ರಹ್ಮಾವರ: ಬ್ರಹ್ಮಾವರ ತಾಲೂಕಿನ ಹನೇಹಳ್ಳಿ ಗ್ರಾಮದ ಬಾರ್ಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೊಠಡಿಯ ಸಿಸಿಟಿವಿ ಡಿವಿಆರ್ ಕಳವು ಮಾಡಿರುವ ಘಟನೆ ನಡೆದಿದೆ.
ಅ.19ರ ಸಂಜೆ 5:30 ಗಂಟೆಯಿಂದ ಅ.20ರ ಬೆಳಿಗ್ಗೆ 08:30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಾಲೇಜಿನ ಪ್ರಾಂಶುಪಾಲರ ಕೊಠಡಿ ಹಾಗೂ ಕಛೇರಿಯ ಬಾಗಿಲಿಗೆ ಹಾಕಿದ ಬೀಗವನ್ನು ಒಡೆದು ಒಳನುಗ್ಗಿ, ಕಛೇರಿಯಲ್ಲಿನ 2 ಕಪಾಟುಗಳ ಬೀಗ ಮುರಿದು ಹುಡುಕಾಡಿದ್ದು, 3 ಮೇಜು ಡ್ರಾವರುಗಳ ಬೀಗಗಳನ್ನು ಮುರಿದು ಚೆಲ್ಲಾಪಿಲ್ಲಿ ಮಾಡಿರುತ್ತಾರೆ. ಪ್ರಾಂಶುಪಾಲರ ಮೇಜಿನ 2 ಡ್ರಾವರುಗಳನ್ನು ತೆರೆದು ಡ್ರಾವರನ್ನು ಹುಡುಕಾಡಿರುವುದು ಕಂಡು ಬಂದಿದೆ.. ಅಲ್ಲದೇ ಪ್ರಾಂಶುಪಾಲರ ಕೊಠಡಿಯಲ್ಲಿನ ಸಿ.ಸಿ.ಟಿ.ವಿ.ಯ ಡಿವಿಆರ್‌ನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.. ಕಳವಾದ ಡಿವಿಆರ್‌ನ ಮೌಲ್ಯ ರೂಪಾಯಿ 7000 ಆಗಿದೆ. ಈ ಬಗ್ಗೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಶಿವಕುಮಾರ್ ಬಿ.ಎಸ್. ಅವರು ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..