
UDUPI: ದೀಪಾವಳಿಗೆ `ಕಾಂತಾರ' ರಂಗೋಲಿ...!!!
Monday, October 24, 2022
ಉಡುಪಿ: ಸದ್ಯ ಕರ್ನಾಟಕದಲ್ಲಿ ಕಾಂತಾರ ಚಿತ್ರದ ಹವಾ ಜೋರಾಗಿದೆ. ಎಲ್ಲೆಲ್ಲೂ ಕಾಂತಾರ ಸಿನಿಮಾದ್ದೇ ಸುದ್ದಿ. ಅದರಂತೆ ಉಡುಪಿ ಜಿಲ್ಲೆಯಲ್ಲಿ ದೀಪಾವಳಿಗೆ ಕಾಂತಾರ ರಂಗೋಲಿಯೊಂದು ಸಿದ್ಧವಾಗಿದೆ. ಸಾಲಿಗ್ರಾಮ ವಿಶ್ವಕರ್ಮ ಸಭಾ ಭವನದಲ್ಲಿ ಸುಮಾರು 7 ಅಡಿ ಎತ್ತರ 9 ಅಡಿ ಅಗಲವಿರುವ ಕಾಂತಾರ ರಂಗೋಲಿ ಜನರನ್ನು ಆಕರ್ಷಿಸುತ್ತಿದೆ.
ಸ್ಫೂರ್ತಿ ಆಚಾರ್ಯ ಮತ್ತು ಅಶ್ವತ್ಥ್ ಆಚಾರ್ಯ ಅವರು ಈ ರಂಗೋಲಿ ರಚನೆ ಮಾಡಿದ್ದು, ಕರಾವಳಿ ಸಂಸ್ಕೃತಿ, ಆಚರಣೆಗೆ ಬೆಳಕು ಹಿಡಿದ ಕಾಂತಾರ ಚಲನಚಿತ್ರಕ್ಕೆ ರಂಗೋಲಿಯ ಅಭಿನಂದನೆ ಸಲ್ಲಿಸಿದ್ದಾರೆ. ಪಂಜುರ್ಲಿ ದೈವದ ವೇಷ ಕಟ್ಟಿರುವ ಮತ್ತು ಕೋಣ ಓಡಿಸುವ ರಿಷಭ್ ಶೆಟ್ಟಿಯವರನ್ನು ಹೋಲುವ ರಂಗೋಲಿ ರಚನೆ ಮಾಡಿದ್ದು, ನೋಡಿದವರು ಕಲಾವಿದರ ಕೈ ಚಳಕಕ್ಕೆ ಬೇಸ್ ಅಂತಿದ್ದಾರೆ