
UDUPI: ನಾಳೆ ಉಡುಪಿ ಜಿಲ್ಲೆಯ ಪುಣ್ಯಕ್ಷೇತ್ರಗಳ ಪೂಜೆಯಲ್ಲಿ ಬದಲಾವಣೆ...!!!
Monday, October 24, 2022
ಉಡುಪಿ: ನಾಳೆ ಸೂರ್ಯ ಗ್ರಹಣ ಹಿನ್ನೆಲೆ ಉಡುಪಿಯ ಪ್ರಮುಖ ಪುಣ್ಯಕ್ಷೇತ್ರಗಳ ಪೂಜೆಯಲ್ಲೂ ಬದಲಾವಣೆ ಇರಲಿದೆ.
ಕೊಲ್ಲೂರಿನಲ್ಲಿ ಗ್ರಹಣ ಮಧ್ಯಕಾಲವನ್ನು ಹೊರತುಪಡಿಸಿದರೆ ದೇವರ ದರ್ಶನಕ್ಕೆ ಯಾವುದೇ ತೊಂದರೆ ಇಲ್ಲ. ಗ್ರಹಣ ಮಧ್ಯಕಾಲದಲ್ಲಿ ಅಭಿಷೇಕದ ವೇಳೆ ಸುಮಾರು 30 ನಿಮಿಷಗಳ ಕಾಲ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಉಳಿದಂತೆ ಗ್ರಹಣಕಾಲದಲ್ಲಿ ದೇವರಿಗೆ ವಿಶೇಷ ಪೂಜೆ ನಡೆಯುತ್ತೆ. ನಾಳೆ ಮಧ್ಯಾಹ್ನ ಭೋಜನದ ವ್ಯವಸ್ಥೆ ಇರುವುದಿಲ್ಲ. ಉಳಿದಂತೆ ದೇವರ ದರ್ಶನಕ್ಕೆ ಎಂದಿನಂತೆ ಮಾಮೂಲಿ ವ್ಯವಸ್ಥೆಗಳು ಇರುತ್ತವೆ. ಗ್ರಹಣದ ಅವಧಿ ಮುಗಿದ ನಂತರ ರಾತ್ರಿ ಪೂಜೆ ನಡೆಸಲಾಗುತ್ತೆ.
ಉಡುಪಿ ಕೃಷ್ಣ ಮಠದಲ್ಲಿ ಬೆಳಿಗ್ಗೆ 9:00 ಗಂಟೆ ಒಳಗೆ ದೇವರ ಪೂಜೆ ನಡೆಯಲಿದ್ದು, ತದನಂತರ ವಿಶೇಷ ಸಾನಿಧ್ಯ ಇರುವ ಮೂರ್ತಿಗಳಲ್ಲಿ ದರ್ಬೆಯನ್ನು ಇರಿಸಿ ಮರುದಿನ ಸೂರ್ಯೋದಯದಲ್ಲಿ ದರ್ಬೆಯನ್ನು ತೆಗೆದು ಶುದ್ದಿಗೊಳಿಸುವುದು ನಡೆಸಲಾಗುತ್ತದೆ ಅಂತ ಮಠದ ಮೂಲಗಳು ತಿಳಿಸಿದೆ.