
ಹರ್ಷ ಸಹೋದರಿ ಅಶ್ವಿನಿಗೆ ಬೆದರಿಕೆ ಪ್ರಕರಣ; ಮೂವರು ಆರೋಪಿಗಳು ಅರೆಸ್ಟ್!
ಶಿವಮೊಗ್ಗ: ಹತ್ಯೆಗೀಡಾದ ಹರ್ಷ ಸಹೋದರಿ ಅಶ್ವಿನಿ ಹಾಗೂ ಅವರ ಕುಟುಂಬದವರಿಗೆ ಬೆದರಿಕೆ, ಹಲ್ಲೆ ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತಂದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ಸೀಗೇಹಟ್ಟಿ ಬಡಾವಣೆ, ಭರ್ಮಪ್ಪ ಲೇಔಟ್, ಒಟಿ ಸರ್ಕಲ್ ಬಳಿ ಜನರಿಗೆ ಮಾರಾಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿದ್ದ ಈ ಮೂವರನ್ನು ಬಂಧಿಸುವಲ್ಲಿ ಶಿವಮೊಗ್ಗದ ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ಮಾರ್ಕೇಟ್ ಫೌಜಾನ್(22), ಅಜರ್(24) ಹಾಗೂ ಫರಾಜ್(21) ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳು ತಲೆಮಾರಿಸಿಕೊಂಡಿದ್ದು ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬಂಧಿತ ಆರೋಪಿಗಳ ವಿರುದ್ದ ಶಿವಮೊಗ್ಗದ ವಿವಿಧ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆ ಪ್ರಕರಣಗಳು ದಾಖಲಾಗಿದ್ದು ಹಳೇ ದ್ವೇಷದ ಹಿನ್ನೆಲೆಯಲ್ಲಿ ಪ್ರಕಾಶ್ ಎಂಬುವವರ ತಲೆ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿರುವುದಾಗಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಇನ್ನುಳಿದಂತೆ ತನಿಖೆ ಮುಂದುವರೆದಿದ್ದು ಹರ್ಷ ಕುಟುಂಬಕ್ಕೆ ಬೆದರಿಕೆ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.