.jpg)
PUTTUR: ಬಿಜೆಪಿ ಮುಖಂಡ ಪಿ.ಜಿ.ಜಗನ್ನಿವಾಸ್ ರಾವ್ ಗೆ ಬಿಜೆಪಿಯಿಂದ ಎಚ್ಚರಿಕೆ ನೋಟಿಸ್!!
Tuesday, July 8, 2025
ಪುತ್ತೂರು: ಬಿಜೆಪಿ ಮುಖಂಡ, ಪುತ್ತೂರು ನಗರ ಸಭಾ ಸದಸ್ಯ ಪಿ.ಜಿ.ಜಗನ್ನಿವಾಸ್ ರಾವ್ ಗೆ ಬಿಜೆಪಿಯಿಂದ ಶಿಸ್ತು ಕ್ರಮದ ಎಚ್ಚರಿಕೆ ನೋಟಿಸ್ ನೀಡಿದೆ.
ತಮ್ಮ ಪುತ್ರ ಶ್ರೀಕೃಷ್ಣ ಜೆ ರಾವ್ ಯುವತಿಗೆ ವಂಚನೆ ಪ್ರಕರಣದಿಂದಾಗಿ ಬಿಜೆಪಿ ಪಕ್ಷಕ್ಕೆ ಮುಜುಗರ ಉಂಟಾಗಿದೆ. ನಿಮ್ಮ ಮಗ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿ ವಂಚನೆ ಮಾಡಿರುವ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ. ಸಂತ್ರಸ್ತೆಯ ಪೋಷಕರು ನೀವು ನ್ಯಾಯ ಸಮ್ಮತವಾಗಿ ನಂಡೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ. ತಾವು ಪಕ್ಷದಲ್ಲಿದ್ದು ನ್ಯಾಯಯುತವಾಗಿ, ಜವಾಬ್ದಾರಿಯುತವಾಗಿ ನಡದುಕೊಳ್ಳಬೇಕಿತ್ತು. ಸಂತ್ರಸ್ತೆ ಯುವತಿಗೆ ನ್ಯಾಯ ಒದಗಿಸಕೊಡಬೇಕು. ಇಲ್ಲದಿದ್ದಲ್ಲಿ ಪಕ್ಷದ ಹಿತದೃಷ್ಟಿಯಿಂದ ನಿಮ್ಮ ಮೇಲೆ ಕ್ರಮಕೈಗೊಳ್ಳಬೇಕಾಗುತ್ತದೆ. ಈ ಬಗ್ಗೆ ತಕ್ಷಣವೇ ಉತ್ತರಿಸಬೇಕು ಎಂದು ಪುತ್ತೂರು ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ. ಎಚ್ಚರಿಕೆಯ ನೋಟಿಸ್ ನೀಡಿದ್ದಾರೆ.