-->
ಹೆದ್ದಾರಿಯಲ್ಲೇ ಬಿಜೆಪಿ ನಾಯಕನ ಕಾ*ಮದಾಟ! ವೀಡಿಯೋ ವೈರಲ್‌ಗೆ ಬೆಚ್ಚಿಬಿದ್ದ ಭಾಜಪಾ!

ಹೆದ್ದಾರಿಯಲ್ಲೇ ಬಿಜೆಪಿ ನಾಯಕನ ಕಾ*ಮದಾಟ! ವೀಡಿಯೋ ವೈರಲ್‌ಗೆ ಬೆಚ್ಚಿಬಿದ್ದ ಭಾಜಪಾ!

ಮಧ್ಯಪ್ರದೇಶ: ಇಲ್ಲಿನ ಬಿಜೆಪಿ ಮುಖಂಡನೊಬ್ಬ ರಾಷ್ಟ್ರೀಯ ಹೆದ್ದಾರಿಯಲ್ಲೇ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ವಿಲಕ್ಷಣ ಘಟನೆ ವರದಿಯಾಗಿದೆ. ಘಟನೆಯ ಸಿಸಿಟಿವಿ ದೃಶ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಕಾಮಕೃತ್ಯದಲ್ಲಿ ತೊಡಗಿಸಿಕೊಂಡು ಸಿಕ್ಕಿಬಿದ್ದಿರುವ ಬಿಜೆಪಿ ಮುಖಂಡನನ್ನು ಮನೋಹರ್‌ಲಾಲ್ ಧಾಕಡ್‌ ಎಂದು ಗುರುತಿಸಲಾಗಿದೆ. ಈತ ಮಧ್ಯಪ್ರದೇಶದ ಮಂದ್ಸೌ‌ರ್‌ನ ಸಕ್ರಿಯ ಬಿಜೆಪಿ ನಾಯಕನಾಗಿದ್ದು, ಬಿಜೆಪಿಯ ರಾಷ್ಟ್ರೀಯ ಯುವಮೋರ್ಚಾ ಘಟಕದಲ್ಲೂ ಜವಾಬ್ದಾರಿ ಹೊಂದಿದ್ದ ಎಂದು ತಿಳಿದುಬಂದಿದೆ.

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಕಾರನ್ನು ನಿಲ್ಲಿಸಿದ ಬಳಿಕ, ಕಾರಿನಿಂದ ಇಳಿಯುವ ನಗ್ನ ಮಹಿಳೆಯೊಂದಿಗೆ ರಸ್ತೆಯಲ್ಲೇ ನಿಂತು ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಈ ಘಟನೆಯು ಹೆದ್ದಾರಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿರುವುದಾಗಿ ವರದಿಯಾಗಿದೆ. ಕಾಮಕೃತ್ಯದ ವಿಡಿಯೋ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.

Ads on article

Advertise in articles 1

advertising articles 2

Advertise under the article