.jpg)
PUTTUR: ದೈವದ ಮುಂದೆ ಹಾಜರಾದ ಪೋಕ್ಸೋ ಆರೋಪಿ ಮಹೇಶ್ ಭಟ್!?
ವಿಟ್ಲ: ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದಲ್ಲಿ ದಲಿತ ಬಾಲಕಿಗೆ ದೌರ್ಜನ್ಯ ಆರೋಪ ಎದುರಿಸುತ್ತಿರುವ ಪೋಕ್ಸೋ ಪ್ರಕರಣದ ಆರೋಪಿ ಮಹೇಶ್ ಭಟ್ ದೈವದ ಮುಂದೆ ಹಾಜರಾಗಿದ್ದಾರೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ತನ್ನ ವಿರುದ್ಧ ಅಪಪ್ರಚಾರ ನಡೆಸಲಾಗಿದೆ ಎಂದು ಅಳಲು ತೋಡಿಕೊಂಡಿದ್ದಾನೆ. ಅದಕ್ಕೆ ಪ್ರತಿಕ್ರಿಯಿಸಿರುವ ದೈವ ಅಪಪ್ರಚಾರ ನಡೆದಿದ್ದಲ್ಲಿ ನನಗೆ ಬಿಟ್ಟು ಬಿಡು. ನಾನು ನೋಡಿಕೊಳ್ಳುತ್ತೇನೆ ಎಂದಿದೆ. ಅಲ್ಲದೆ, ಇಬ್ಬರೂ ನನ್ನದೇ ಊರಿನವರಾಗಿರುವ ಕಾರಣ ಅನ್ಯಾಯವಾದ ವೇಳೆ ನನ್ನಲ್ಲಿಗೆ ಬರಬೇಕು. ನ್ಯಾಯ ನಿರ್ಣಯ ನನ್ನಿಂದಲೇ ಆಗುತ್ತದೆ ಎಂದಿದೆ.
ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದಲ್ಲಿ ಗುರುವಾರ ರಾತ್ರಿ ಪಂಜುರ್ಲಿ ಹಾಗೂ ಪಿಲಿಚಾಮುಂಡಿ ದೈವದ ನೇಮ ನಡೆದಿತ್ತು. ಗ್ರಾಮದ ನೇಮೋತ್ಸವವಾಗಿರುವ ಹಿನ್ನೆಲೆ ಗ್ರಾಮಸ್ಥರೆಲ್ಲರೂ ಹಾಜರಾಗಿದ್ದರು. ಇದೇ ವೇಳೆ ಆರೋಪಿ ಮಹೇಶ್ ಭಟ್ ತನ್ನ ವಿರುದ್ಧ ಅಪಪ್ರಚಾರ ನಡೆಸಲಾಗಿದೆ ಎಂದು ಗ್ರಾಮಸ್ಥರ ಹಾಜರಾತಿಯ ವೇಳೆ ದೈವದ ಮುಂದೆ ಅಳಲು ತೋಡಿಕೊಂಡಿದ್ದ. ಇದಕ್ಕೆ ದೈವ ಸಹಜ ಪ್ರತಿಕ್ರಿಯೆ ನೀಡಿದೆ.
ಬಾಲಕಿ ಕುಟುಂಬಸ್ಥರು ದೈವದ ಮುಂದೆ ಹಾಜರಾಗಿಲ್ಲ:
ಒಂದು ಮೂಲದ ಪ್ರಕಾರ ಬಾಲಕಿ ಕುಟುಂಬಸ್ಥರು ಯಾರೂ ಕೂಡ ದೈವದ ಮುಂದೆ ತಮಗೆ ಅನ್ಯಾಯವಾಗಿದೆ ಎಂದು ಅಳಲು ತೋಡಿಕೊಂಡಿಲ್ಲ ಎನ್ನಲಾಗಿದೆ. ಬಾಲಕಿಗೆ ನಿಜಕ್ಕೂ ಅನ್ಯಾಯವಾಗಿದ್ದರೆ ಬಾಲಕಿಯ ಕುಟುಂಬಸ್ಥರು ಅಥವಾ ಇತರ ಪ್ರಮುಖರ ಮೂಲಕ ದೈವದ ಮುಂದೆ ಹಾಜರಾಗಬಹುದಿತ್ತು. ಆದರೆ ಆ ಕೆಲಸವಾಗಿಲ್ಲ. ಬಾಲಕಿಯ ಪರ ಯಾರು ಧ್ವನಿ ಎತ್ತಿಲ್ಲ ಎನ್ನುವ ಚರ್ಚೆ ನಡೆಯುತ್ತಿವೆ.
ತಪ್ಪು ಮಾಡದೇ ಇದ್ದಿದ್ದರೆ ನ್ಯಾಯ ನಿರ್ಣಯ ಮಾಡಬೇಕಿತ್ತು!
ತನ್ನ ವಿರುದ್ಧ ಅಪಪ್ರಚಾರವಾಗಿದೆ ಎಂದು ಆರೋಪಿ ದೈವದ ಮುಂದೆ ಅಂಗಲಾಚಿದ್ದಾನೆ. ದೈವಕ್ಕೆ ಆಭರಣಗಳನ್ನು ನೀಡಿದ್ದಾನೆ. ಆದರೆ, ನ್ಯಾಯ ನಿರ್ಣಯಕ್ಕೆ ಮುಂದಾಗಿಲ್ಲ. ಗ್ರಾಮದ ಕೆಲವು ಹಿರಿಯರು ಹೇಳುವ ಪ್ರಕಾರ ಸಂತ್ರಸ್ತೆ ಬಾಲಕಿಯ ಕುಟುಂಬಸ್ಥರನ್ನು ಎದುರು ನಿಲ್ಲಿಸಿ ನ್ಯಾಯ ನಿರ್ಣಯವಾಗಬೇಕಿತ್ತು. ದೈವವೇ ಸತ್ಯವನ್ನು ಬಹಿರಂಗಗೊಳಿಸಬೇಕಿತ್ತು ಎನ್ನುವ ಮಾತುಗಳು ಕೇಳಿಬಂದಿವೆ.