-->
PUTTUR: ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ರಾಜ್ಯ ಮಟ್ಟದ ಐಟಿ ಫೆಸ್ಟ್‌ ಪಿನ್ಯಾಕಲ್‌ ಗೆ ಚಾಲನೆ...

PUTTUR: ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ರಾಜ್ಯ ಮಟ್ಟದ ಐಟಿ ಫೆಸ್ಟ್‌ ಪಿನ್ಯಾಕಲ್‌ ಗೆ ಚಾಲನೆ...

 


ಪುತ್ತೂರು: ಸೈಂಟ್ ಫಿಲೋಮಿನಾ ಕಾಲೇಜಿನ ಗಣಕವಿಜ್ಞಾನ ವಿಭಾಗ ಮತ್ತು ಪಿನ್ಯಾಕಲ್‌ ಐಟಿಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಐಟಿ ಫೆಸ್ಟ್‌ ಪಿನ್ಯಾಕಲ್‌-25 ಕ್ಕೆ ಚಾಲನೆ ನೀಡಲಾಯಿತು. 

ಸೋಷಿಯಲ್‌ ಮೀಡಿಯಾ ಇನ್‌ಪ್ಲುಎನ್ಸರ್‌ ಹಾಗೂ ತುಳು ಕಂಟೆಂಟ್‌ ಕ್ರಿಯೇಟರ್‌ ಶರಣ್‌ ಚಿಲಿಂಬಿ ದೀಪ ಬೆಳಗಿಸುವುದರ ಮೂಲಕ ಐಟಿ ಫೆಸ್ಟ್‌ ಅನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು “ಪಾಠಗಳಿಂದ ಮಾತ್ರವಲ್ಲದೆ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಬಹಳಷ್ಟು  ಕಲಿಯಲು ಸಾಧ್ಯವಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವುದು ಹೆಚ್ಚು ಮುಖ್ಯ. ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಜನರು ಇತರರಿಗಿಂತ ಒಂದು ಹೆಜ್ಜೆ ಮುಂದಿರುತ್ತಾರೆ. ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಅನುಕೂಲಕರ ವಾತಾವರಣವಿದೆ. ನನಗೆ ಈ ಕಾಲೇಜಿನ ಆವರಣವನ್ನು ಪ್ರವೇಶಿಸುತ್ತಿರುವಂತೆಯೇ ಸಕಾರಾತ್ಮಕ ಭಾವನೆ ಬರುತ್ತಿದೆ"  ಎಂದು ಹೇಳಿ  ಕಾಲೇಜು ಜೀವನದಲ್ಲಿ ಸ್ಪರ್ಥೆಗಳಲ್ಲಿ ಭಾಗವಹಿಸಿದ್ದು ಹೇಗೆ ತಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಲು ಸಹಕಾರಿಯಾಯಿತು ಎಂಬುದನ್ನು ತಿಳಿಸಿದರು. 

ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ| ಆ್ಯಂಟನಿ ಪ್ರಕಾಶ್‌ ಮೊಂತೇರೊರವರು ಮಾತನಾಡಿ “ ವಿದ್ಯಾರ್ಥಿಗಳು ಸೃಜನಶೀಲರಾಗಿರಲು ಕಲಿಯಬೇಕು. ಇತರರನ್ನು ಅನುಕರಿಸುವವರು ಹಲವರಿರಬಹುದು ಆದರೆ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಗಳಿಸಬೇಕೆಂದಲ್ಲಿ  ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ಸ್ಪರ್ಧೆಗಳಲ್ಲಿ ಭಾಗವಹಿಸಬೇಕು “ ಎಂದು ಅಭಿಪ್ರಾಯಪಟ್ಟರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಂಚಾಲಕರಾದ ಅತಿ ವಂ. ಲಾರೆನ್ಸ್‌ ಮಸ್ಕರೇನಸ್‌ರವರು ಮಾತನಾಡಿ “ ಅವಕಾಶ ಸಿಕ್ಕಾಗಲೆಲ್ಲಾ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿರಿ. ತರಗತಿಯೊಳಗೆ ಕಲಿಯುವುದು ಮತ್ತು ಈ ರೀತಿಯ ಸ್ಪರ್ಧೆಗಳಿಂದ ಕಲಿಯುವುದು ಸಿದ್ಧಾಂತ ಮತ್ತು ಪ್ರಾಯೋಗಿಕತೆಯಂತೆ. ಜೀವನದಲ್ಲಿ ಯಶಸ್ವಿಯಾಗಲು ಎರಡೂ ಮುಖ್ಯ. ಜ್ಞಾನ ಮತ್ತು ಅನುಭವವಿಲ್ಲದೆ   ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಗಳಿಸುವುದು ಕಷ್ಟಕರವಾಗಿರುತ್ತದೆ. ಓದಿನ ಜೊತೆಗೆ ಸುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮ್ಮನ್ನು ಮುಕ್ತವಾಗಿರಿಸಿಕೊಳ್ಳಿ. ಜೀವನದಲ್ಲಿ  ಕಲಿಕೆ ಹಾಗೂ ಸ್ಪರ್ಧೆಗಳಿಗೆ ಸಮಾನವಾದ ಪ್ರಾಮುಖ್ಯತೆ ನೀಡಿ. ವಿನಮ್ರತೆಯು ನಮ್ಮ ಬಹಳ ಎತ್ತರಕ್ಕೆ ಕೊಂಡೊಯ್ಯುತ್ತದೆ “ ಎಂದು ಹೇಳಿದರು. 

2023-24ನೇ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯಲ್ಲಿ  ಬಿ ಸಿ ಎ ಪದವಿ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದ ಚೈತಾಲಿ ಎಸ್‌ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾಲೇಜಿನ ಪರೀಕ್ಷಾಂಗ ಕುಲಸಚಿವರೂ ಗಣಕವಿಜ್ಞಾನ ವಿಭಾಗದ ಡೀನ್‌ ಹಾಗೂ ಮುಖ್ಯಸ್ಥರಾದ ಡಾ. ವಿನಯಚಂದ್ರ ಹಾಗೂ ಪಿನ್ಯಾಕಲ್‌-25ರ ಸಂಯೋಜಕಿ ಡಾ. ಗೀತಾ ಪೂರ್ಣಿಮಾ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article