
MANGALURU: ದ.ಕ. ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚದ ಅಧ್ಯಕ್ಷೆ ಡಾ. ಮಂಜುಳಾ ರಾವ್ ಪೊಸ್ಟರ್ ಗೆ ವ್ಯಾಪಕ ಟೀಕೆ!!
ಮಂಗಳೂರು: ಪೆಹಲ್ಗಾಮ್ ನಲ್ಲಿ ನಡೆದ ಉಗ್ರರ ನರಮೇದಕ್ಕೆ ಇಡೀ ದೇಶದ ಜನರು ಸಂಕಟದಿದಂಲೇ ಸಂತಾಪ ಸೂಚಿಸುತ್ತಿದ್ದಾರೆ. ಕೆಲವೊಂದೆಡೆ ಪ್ರತಿಭಟನೆ ನಡೆಸಲಾಗಿದ್ರೆ, ಮತ್ತೆ ಕೆಲವೆಡೆ ಮಡಿದವರಿಗಾಗಿ ಮೌನ ಪ್ರಾರ್ಥನೆ ಸಲ್ಲಿಸಲಾಗಿದೆ. ಜಾತಿ ಧರ್ಮ ಪಕ್ಷ ಮರೆತು ಈ ಸಂದರ್ಭದಲ್ಲಿ ಎಲ್ಲರೂ ಸರ್ಕಾರದ ಜೊತೆ ನಿಂತಿದ್ದಾರೆ. ಆದ್ರೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಈ ವಿಚಾರವಾಗಿ ಮಾಡಿದ ಪೋಸ್ಟರ್ ಒಂದು ಭಾರೀ ಟೀಕೆಗೆ ಕಾರಣವಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮೋರ್ಚದ ಅಧ್ಯಕ್ಷೆ ಡಾ. ಮಂಜುಳಾ ರಾವ್ ಇದೊಂದು ಮದುವೆ ಆಮಂತ್ರಣ ಎಂಬಂತೆ ತನ್ನ ಫೋಟೋ ಹಾಕಿ ಮೋರ್ಚಾದ. ಕಾರ್ಯಕರ್ತೆಯರಿಗೆ ಆಹ್ವಾನದ ಪೋಸ್ಟರ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಯಡವಟ್ಟಿನ ಜೊತೆಗೆ ಕೊನೆಯಲ್ಲಿ "ಜಿಲ್ಲೆಯಿಂದ ಈ ಕಾರ್ಯ ಮಾಡಬೇಕು ಎಂದು ಹೇಳಿದ್ದಾರೆ . ಎಲ್ಲರೂ ಬನ್ನಿ" ಅಂತ ಬೇರೆ ಬರೆದುಕೊಂಡಿದ್ದಾರೆ. ದೇಶದಲ್ಲಿ ನಡೆದಿರುವ ಭೀಕರ ದುರ್ಘಟನೆಗೆ ಮಹಿಳಾ ಮೋರ್ಚಾಗೆ ಮೊಂಬತ್ತಿ ಮೆರವಣಿಗೆ ಅಥವಾ ಸಂತಾಪ ಸೂಚಕ ಸಭೆ ನಡೆಸಲೂ ಮೇಲಿನಿಂದ ಆದೇಶ ಬರಬೇಕೆ ಎಂದು ಜನ ಪ್ರಶ್ನೆ ಮಾಡಿದ್ದಾರೆ.