.jpg)
PUTTUR: ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಸವಾಲೆಸೆದ ಕಾಂಗ್ರೆಸ್ ಕಾರ್ಯಕರ್ತ!!
ನಾನು ಶಾಸಕ ಅಶೋಕ್ ರೈ ಅವರ ಮೆಡಿಕಲ್ ಕಾಲೇಜು ಬಗ್ಗೆ ಪ್ರಶ್ನೆ ಮಾಡಿದ್ದೇನೆ. ಬಜೆಟ್ ನಲ್ಲಿ ಮೆಡಿಕಲ್ ಕಾಲೇಜಿಗೆ ಉದ್ದೇಶಿಸಲಾಗಿದೆ ಎಂದು ಹೇಳಲಾಗಿದೆ. ಪುತ್ತೂರಿನ ಮೆಡಿಕಲ್ ಕಾಲೇಜಿಗೆ ಎಲ್ಲಿಯೂ ಅನುದಾನ ಮೀಸಲಿಟ್ಟಿಲ್ಲ. ಒಂದು ಮೆಡಿಕಲ್ ಕಾಲೇಜು ಆಗಬೇಕಾದರೆ ಅದು ಹಂತ ಹಂತವಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಅದು ಬಿಟ್ಟು ಪುತ್ತೂರಿಗೆ ಮೆಡಿಕಲ್ ಕಾಲೇಜು ಎಂಬುದು ಸದ್ಯಕ್ಕೆ ಆಗುವಂತ ವಿಚಾರವಲ್ಲ. ಇದನ್ನ ನಾನು ಪ್ರಶ್ನೆ ಮಾಡಿದ್ದೇನೆ. ನಾನು ಯಾವುದೇ ಕೋಮು ಪ್ರಚೋದನಕಾರಿ ಹೇಳಿಕೆ ನೀಡಿಲ್ಲ. ಶಾಸಕ ಅಶೊಕ್ ಕುಮಾರ್ ರೈ ಮುಸ್ಲಿಂರನ್ನು ಕಡೆಗಣಿಸುತ್ತಿದ್ದಾರೆ ಎಂದಿದ್ದೆ. ಎಲ್ಲಾ ಹುದ್ದೆಗಳನ್ನು ಸಂಘಪರಿವಾರದಿಂದ ಬಂದವರಿಗೆ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ರ ತಾಕತ್ತು ತೋರಿಸಬೇಕು ಎಂದಿದ್ದೆ. ಈ ವಿಚಾರವಾಗಿ ಶಾಸಕರ ಆಪ್ತರಿಂದ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ. ಕೊಲೆ ಆರೋಪಿಗಳಿಂದಲೂ ಬೆದರಿಕೆ ಬರುತ್ತಿವೆ. ಸ್ವತಃ ಪೊಲೀಸರೇ ನನ್ನ ಜೀವಕ್ಕೆ ಅಪಾಯವಿದೆ ಎಂದಿದ್ದಾರೆ. ಆದ್ರೆ ನನ್ನ ಬಾಯಿ ಮುಚ್ಚಿಸಲು ಯಾರಿಗೂ ಸಾಧ್ಯವಿಲ್ಲ. ಅನ್ಯಾಯದ ವಿರುದ್ಧ ನಾನು ಮಾತಾಡುತ್ತೇನೆ. ಕಾನೂನಿಗೆ ಮಾತ್ರ ನಾನು ಗೌರವ ಕೊಡುವ ವ್ಯಕ್ತಿ. ಕೋಮು ಪ್ರಚೋದನಕಾರಿ ಭಾಷಣ ಮಾಡಿದ ಸೂಲಿಬೆಲೆ ವಿರುದ್ಧ ದೂರನ್ನು ಪುತ್ತೂರಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ನೀಡಿಲ್ಲ. ಆದ್ರೆ ಕಾಂಗ್ರೆಸ್ ಪಕ್ಷದ ಭವಿಷ್ಯದ ಬಗ್ಗೆ ಮಾತಾಡಿದ ನನ್ನ ಮೇಲೆ ದೂರು ನೀಡುತ್ತಾರೆ. ತಾಕತ್ತಿದ್ದರೆ ಕೃಷ್ಣಪ್ರಸಾದ್ ಆಳ್ವ ನನ್ನನ್ನು ಪಕ್ಷದಿಂದ ಉಚ್ಛಾಟಿಸಲಿ ಎಂದು ಹಕೀಂ ಕೂರ್ನಡ್ಕ ಸವಾಲು ಹಾಕಿದ್ದಾರೆ.
ಇಷ್ಟೆಲ್ಲ ಆದ ಮೇಲೂ ಪೊಲೀಸ್ ಠಾಣೆಯಲ್ಲಿ ನನ್ನ ಮೇಲೆ ದೌರ್ಜನ್ಯ ನಡೆದಿದೆ ಎಂದು ಹಕೀಂ ಕೂರ್ನಡ್ಕ ಪೊಲೀಸರ ವಿರುದ್ಧ ಆರೋಪ ಮಾಡಿದ್ದಾರೆ. ಶಾಸಕ ಅಶೋಕ್ ರೈ ಅವರ ಒತ್ತಡದಿಂದ ಪೊಲೀಸರು ನನ್ನ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ದೂರಿದ್ದಾರೆ. ಮೂರು ಜೀಪ್ ನಲ್ಲಿ ಬಂದ ಪೊಲೀಸರು ನನ್ನನ್ನು ನಿನ್ನೆ ವಶಕ್ಕೆ ಪಡೆದಿದ್ದರು. ನನ್ನ ಕಾರಿನಲ್ಲಿ ಒಬ್ಬ ಪೊಲೀಸ್ ಅಧಿಕಾರಿಯನ್ನು ಬಿಟ್ಟಿದ್ದರು. ನನ್ನ ಕಾರಿನ ಮುಂದೆ ಎರಡು ಪೊಲೀಸ್ ವಾಹನ ಹಾಗೂ ಹಿಂಬದಿ ಒಂದು ಪೊಲೀಸ್ ಜೀಪ್ ಇತ್ತು. ಮಂಗಳೂರು ರಸ್ತೆಯಾಗಿ ನನ್ನನ್ನು ಒತ್ತಾಯಪೂರ್ವಕವಾಗಿ ಕೊಂಡೊಯ್ಯುತ್ತಿದ್ದರು. ನನ್ನನ್ನು ಎನ್ ಕೌಂಟರ್ ಮಾಡುವ ಪ್ರಯತ್ನದಿಂದ ಸಂಶಯಗೊಂಡಿತ್ತು. ನನ್ನ ಒಂದು ಮೊಬೈಲ್ ಪೊಲೀಸರು ಮೊದಲೇ ವಶಕ್ಕೆ ಪಡೆದಿದ್ದರು. ಹಾಗಾಗಿ ನಾನು ಇನ್ನೊಂದು ಮೊಬೈಲ್ ಮೂಲಕ ಸ್ಪೀಕರ್ ಯು.ಟಿ.ಖಾದರ್ ಪಿಎ ಹಾಗೂ ಆಪ್ತರಿಗೆ ವಿಚಾರ ತಿಳಿಸಿದೆ. ಸ್ಪೀಕರ್ ಗಮನಕ್ಕೆ ಬಂದ ವಿಚಾರ ತಿಳಿದ ಪೊಲೀಸರು ತಕ್ಷಣವೇ ಡಿವೈಎಸ್ಪಿ ಕಚೇರಿಗೆ ವಾಹನವನ್ನು ತಿರುಗಿಸಿದ್ದಾರೆ. ಸಂಜೆಯಿಂದ ರಾತ್ರಿ 10 ಗಂಟೆವರೆಗೆ ನನ್ನನ್ನು ಡಿವೈಎಸ್ಪಿ ಕಚೇರಿಯಲ್ಲಿ ಇರಿಸಿದ್ದರು. ಬಳಿಕ ಕೆಲ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ಬಂದ ನಂತರ ನನ್ನನ್ನ ಮನೆಗೆ ಕಳುಹಿಸಿದ್ದಾರೆ ಎಂದು ಮಾಧ್ಯಮದ ಮುಂದೆ ಹೇಳಿಕೆಯನ್ನ ನೀಡಿದ್ದಾರೆ.