
PUTTUR: ಪುತ್ತೂರು ಜಿ.ಎಲ್. ಕಾಂಪ್ಲೆಕ್ಸ್ ನಲ್ಲಿ `ಬೆಡ್ ಸೆಂಟರ್' ಶುಭಾರಂಭ
ಪುತ್ತೂರು: ಕಳೆದ 47 ವರ್ಷಗಳಿಂದ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ತೌಸಿಫ್ ಬಪ್ಪಳಿಗೆ ಮಾಲಕತ್ವದ `ಬೆಡ್ ಸೆಂಟರ್' ಇದೀಗ ಜಿ.ಎಲ್. ಕಾಂಪ್ಲೆಕ್ಸ್‍ಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ.
ನೂತನ `ಬೆಡ್ ಸೆಂಟರ್' ಮಳಿಗೆಯನ್ನ ಜಿ.ಎಲ್. ಗ್ರೂಫ್ ಆಫ್ ಕಂಪೆನಿಯ ಅಧ್ಯಕ್ಷ ಬಲರಾಮ್ ಆಚಾರ್ಯ ಜಿ.ಎಲ್. ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಪುತ್ತೂರಿನಲ್ಲಿ ತನ್ನದೇ ಆದ ಬ್ರ್ಯಾಂಡ್ ನ್ನ ಉಳಿಸಿಕೊಂಡು ಜನ ಮೆಚ್ಚುಗೆ ಪಡೆದಂತ ಬೆಡ್ ಸೆಂಟರ್ ಮುಂದೆಯೂ ಉತ್ತಮ ಬೇಡಿಕೆಯನ್ನ ಪಡೆಯುವಂತಾಗಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ ಮಾತನಾಡಿ, ತೌಸಿಫ್ ಮಾಲಕತ್ವದ ಬೆಡ್ ಸೆಂಟರ್ ರನ್ನ ಎಲ್ಲರೂ ಮೆಚ್ಚುತ್ತಾರೆ. ಅಲ್ಲಿನ ಗೃಹಪಯೋಗಿ ವಸ್ತುಗಳ ಗುಣಮಟ್ಟ ಚೆನ್ನಾಗಿರುತ್ತದೆ. ಪುತ್ತೂರಿನಲ್ಲಿ ಅದೆಷ್ಟೋ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಬೆಡ್ ಸೆಂಟರ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಪುತ್ತೂರು ನಗರ ಠಾಣೆ ಉಪನಿರೀಕ್ಷಕ ಆಂಜನೇಯ ರೆಡ್ಡಿ ಮಾತನಾಡಿ, ನೂತನವಾಗಿ ಶುಭಾರಂಭಗೊಂಡ ಬೆಡ್ ಸೆಂಟರ್ ಪುತ್ತೂರಿನ ಯುವ ಜನತೆಗೆ ಒಂದು ಮಾದರಿ ಅಂತ ಹೇಳಬಹುದು. ಉದ್ಯಮ ಕ್ಷೇತ್ರ ಅನ್ನೋದು ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಯುವಕರು ಇನ್ನಷ್ಟು ಉದ್ಯಮದಲ್ಲಿ ತೊಡಗಿಕೊಂಡು ವಿವಿಧ ರೀತಿಯಲ್ಲಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಪ್ಪಳಿಗೆ ಮಸೀದಿ ಖತೀಬರಾದ ಸಿರಾಜುದ್ದೀನ್ ಫೈಝಿ ಅಧ್ಯಕ್ಷತೆಯನ್ನ ವಹಿಸಿದ್ದರು. ಪುತ್ತೂರು ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ದುಆ ನೆರವೇರಿಸಿದರು. ಪುತ್ತೂರು ಎಸ್ ಜಿ ಕಾರ್ಪೊರೇಟ್ಸ್ ವ್ಯವಸ್ಥಾಪಕ ನಿರ್ದೇಶಕ ಸತ್ಯಶಂಕರ್ ಕೆ., ಪುತ್ತೂರು ಸಂಯುಕ್ತ ಜಮಾಅತ್ ನ ಪ್ರಧಾನ ಕಾರ್ಯದರ್ಶಿ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ, ಗಣೇಶ್ ಪ್ರಸಾದ್ ಹೊಟೇಲ್ ಮಾಲೀಕ ಗೋಪಾಲಕೃಷ್ಣ ಹೇರಳೆ, ಮಕ್ಕಳ ತಜ್ಞ ಡಾ.ಬಿ. ಮಂಜುನಾಥ ಶೆಟ್ಟಿ, ವಕೀಲರಾದ ನೂರುದ್ದೀನ್ ಸಾಲ್ಮರ, ಜಿ.ಎಲ್.ಗ್ರೂಫ್ ಆಫ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾದ ಲಕ್ಷ್ಮೀಕಾಂತ್ ಬಿ. ಆಚಾರ್ಯ, ಸುಧನ್ವ ಬಿ. ಆಚಾರ್ಯ, ಪುತ್ತೂರು ಮೇಘ ಫ್ರೂಟ್ ಪ್ರೊಸೆಸಿಂಗ್ ಪ್ರೈವೆಟ್ ಲಿಮಿಟೆಡ್ ನ ನಿರ್ವಹಣೆ ಮತ್ತು ಸಂಗ್ರಹಣೆ ಮುಖ್ಯಸ್ಥ ನಾಗರಾಜ್ ರಾವ್, ಸೋಜ ಮೆಟಲ್ ನ ಜೋನ್ ಕುಟಿನ್ಹಾ, ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಎಚ್,ರಝಾಕ್ ಬಪ್ಪಳಿಗೆ, ಬಪ್ಪಳಿಗೆ ಮಸೀದಿ ಅಧ್ಯಕ್ಷ ದಾವೂದ್ ಬಪ್ಪಳಿಗೆ, ಯುವ ಕಾಂಗ್ರೆಸ್ ಮುಖಂಡ ಮೋನು ಬಪ್ಪಳಿಗೆ, ಇಬ್ರಾಹಿಂ ಬಪ್ಪಳಿಗೆ ಮೊದಲಾದವರು ಉಪಸ್ಥಿತರಿದ್ದರು. ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.