.jpg)
CRICKET: ಬಂಟ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಜಾರಿ ಬಿದ್ದ ಅಶೋಕ್ ರೈ!!
ಪುತ್ತೂರು: ರನ್ ಕಸಿಯುವ ಧಾವಂತದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಎಡವಿ ಬಿದ್ದ ಘಟನೆ ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆದಿದೆ. ಇಂದು ಬಂಟ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಶಾಸಕ ಅಶೋಕ್ ರೈ ಅವರು ಭಾಗವಹಿಸಿದ್ದರು. ಯುವಕರು ನಾಚುವಂತೆ ಶಾಸಕ ಅಶೋಕ್ ರೈ ಮಿಂಚಿದ್ದರು.
ಮೈದಾನ ಸುತ್ತಲೂ ಅಶೋಕ್ ರೈ ಅವರ ಆಟವನ್ನ ನೋಡಲು ಅವರ ಅಭಿಮಾನಿಗಳು ಸೇರಿದ್ದರು. ಅದರಂತೆ ಅಶೋಕ್ ರೈ ಅವರು ಬ್ಯಾಟಿಂಗ್ ಗಾಗಿ ಕ್ರೀಸಿಗಿಳಿದಿದ್ದರು. ಉತ್ತಮ ಆಟವನ್ನೇ ಪ್ರಾರಂಭದಲ್ಲಿ ಆರಂಭಿಸಿದ್ದರು. ಬಳಿಕ ರನ್ ಕಸಿಯುವ ರಭಸದಲ್ಲಿ ಎಡವಿ ಬಿದ್ದ ಘಟನೆ ನಡೆಯಿತು. ತಕ್ಷಣ ಎದುರಾಳಿ ತಂಡದ ಆಟಗಾರರು ಅಶೋಕ್ ರೈ ಅವರನ್ನ ಮೇಲೆತ್ತುವಲ್ಲಿ ಸಹಕರಿಸಿದರು. ಮತ್ತೆ ಪುನಃ ಬ್ಯಾಟಿಂಗ್ ಆರಂಭಿಸಿ ಇತರರೆ ಆಟಗಾರರಿಗೆ ಹುರುದುಂಬಿಸಿದರು.
ಅಶೋಕ್ ರೈ ಅವರ ಕ್ರಿಕೆಟ್ ನ ಗತ್ತು ಟೀಂ ಇಂಡಿಯಾ ಆಟಗಾರರನ್ನೇ ಮೀರಿಸುವಂತಿತ್ತು. ಅಶೋಕ್ ರೈ ಅವರ ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ನ ವೀಡಿಯೋ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ.