
ಪುತ್ತೂರು: ಕಾಂಗ್ರೆಸ್ ಕಾರ್ಯಕರ್ತನಿಗೆ ಕೊಲೆ ಬೆದರಿಕೆ; ಶಾಸಕರ ಆಪ್ತರ ವಿರುದ್ಧ ಎಫ್‌ಐಆರ್!
Tuesday, December 31, 2024
ಪುತ್ತೂರು: ಕಾಂಗ್ರೆಸ್
ಕಾರ್ಯಕರ್ತ ಹಕೀಮ್ ಕೂರ್ನಡ್ಕ ವಿರುದ್ಧ ಕೊಲೆ ಬೆದರಿಕೆಯೊಡ್ಡಿದ್ದ ಶಾಸಕರ ಆಪ್ತರಿಬ್ಬರ ಮೇಲೆ ಎಫ್‌ಐಆರ್
ದಾಖಲಿಸಲಾಗಿದೆ. ಕೆಲವು ದಿನಗಳ ಹಿಂದೆ ಹಕೀಮ್ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ವಿರುದ್ಧ
ಟೀಕಿಸಿ ಮಾತನಾಡಿದ್ದರು. ಇದನ್ನೇ ನೆಪವಾಗಿಸಿಕೊಂಡು ಈಶ್ವರಮಂಗಲದ ದೀಚು ರೈ ಹಾಗೂ ಅದ್ದು ಪಡೀಲ್
ಎಂಬವರು ವಾಟ್ಸಾಪ್ ಸಂದೇಶದ ಮೂಲಕ ಕೊಲೆ ಬೆದರಿಕೆಯೊಡ್ಡಿದ್ದರು.
ಈ ಕುರಿತಂತೆ
ಹಕೀಮ್ ಕೂರ್ನಡ್ಕ ಅವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಳ್ಳಲು
ಪೊಲೀಸರು ನ್ಯಾಯಾಲಯದ ಅನುಮತಿ ಕೇಳಿದ್ದರು. ಇದೀಗ ಪುತ್ತೂರು ನ್ಯಾಯಾಲಯದ ನಿರ್ದೇಶನದಂತೆ ದೀಚು ರೈ
ಹಾಗೂ ಅದ್ದು ಪಡೀಲ್ ವಿರುದ್ಧ ಪುತ್ತೂರು ನಗರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.