.jpg)
ಪುತ್ತೂರು: ಶಾಸಕ ಅಶೋಕ್ ರೈ ಕಾರ್ಯವೈಖರಿಗೆ ಪಕ್ಷದ ಕಾರ್ಯಕರ್ತರಿಂದಲೇ ತರಾಟೆ!
Friday, December 13, 2024
ಪುತ್ತೂರು: ಶಾಸಕ ಅಶೋಕ್ ರೈ ಕಾರ್ಯವೈಖರಿ ಬಗ್ಗೆ ಖುದ್ದು ಕಾಂಗ್ರೆಸ್ ಕಾರ್ಯಕರ್ತರೇ ಅಸಮಾಧಾನಿತರಾಗಿದ್ದಾರೆ. ಪಕ್ಷದ ಕಾರ್ಯಕರ್ತ ಹಕೀಮ್ ಕೂರ್ನಡ್ಕ ಅವರದ್ದು ಎನ್ನಲಾದ ಆಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಾಸಕರ ಕಾರ್ಯವೈಖರಿ ಬಗ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಸಕರು ರಸ್ತೆ, ಸರಕಾರಿ ಆಸ್ಪತ್ರೆಗಳ ಸಮಸ್ಯೆ ಬಗೆಹರಿಸುವ ಬದಲು ಮೆಡಿಕಲ್ ಕಾಲೇಜು, ಎಸ್ಪಿ ಕಚೇರಿ ಬಗ್ಗೆ ಸುಮ್ಮನೆ ಗಿಮಿಕ್ ಮಾತನ್ನಾಡುತ್ತಿದ್ದಾರೆ. ಪುತ್ತೂರು ನಗರಕ್ಕೆ ಸಂಪರ್ಕಿಸುವ ರಸ್ತೆಗಳು ಸರಿಯಾಗಿಲ್ಲ. ಅಶೋಕ್ ರೈ ಅವರು ಮಾಜಿ ಶಾಸಕ ಸಂಜೀವ ಮಠಂದೂರು ಅವರನ್ನ ನೋಡಿ ಕಲಿಯಬೇಕು.
ಇದೇ ರೀತಿ ಮುಂದುವರೆದರೆ ಇನ್ನು ಜನ್ಮದಲ್ಲಿ ಪುತ್ತೂರಿನಲ್ಲಿ ಕಾಂಗ್ರೆಸ್ ಗೆಲ್ಲಲ್ಲ. ಅಶೋಕ್ ರೈ ಅವರನ್ನ ಗೆಲ್ಲಿಸಿದ್ದಕ್ಕೆ ನಮಗೆ ಬೇಜಾರಾಗ್ತಿದೆ. ನಮ್ಮ ತಲೆಗೆ ನಾವೇ ಹೊಡೆಯುವ ಹಾಗಿದೆ. ಪಾರ್ಟ್ ಟೈಂ ರಾಜಕಾರಣಿಯಾದರೆ ಇದೇ ಅವಸ್ಥೆ. ಪಕ್ಷದ ಕಾರ್ಯಕರ್ತರು ಇವರ ಜೊತೆಗಿಲ್ಲ. ಯಾರನ್ನೋ ಜೊತೆಗಿಟ್ಟು ತಿರುಗಾಡುತ್ತಿದ್ದಾರೆ ಎಂದು ದೂರಿದ್ದಾರೆ.