
SOUDI AREBIA: ಕೆ.ಸಿ.ಎಫ್ ಸೌದಿ ಅರೇಬಿಯಾ ಉನೈಝಾ ವಲಯ ಮಹಾಸಭೆ
ಸೌದಿ ಅರೇಬಿಯಾ: ಕೆಸಿಎಫ್ ಸೌದಿ ಅರೇಬಿಯಾ ಅಲ್ ಕಸೀಮ್ ವಲಯದ ಅಧೀನದಲ್ಲಿರುವ ಉನೈಝಾ ಸೆಕ್ಟರ್ ನ ಮಹಾಸಭೆ ಕೆಸಿಎಫ್ ಉನೈಝಾ ಯೂನಿಟ್ ಕಚೇರಿಯಲ್ಲಿ ಗುರುವಾರ ನಡೆಯಿತು. ಕಾರ್ಯಕ್ರಮವನ್ನು ಕೆಸಿಎಫ್ ಗಸೀಂ ವಲಯದ ಇಹ್ಸಾನ್ ಇಲಾಖೆ ಅಧ್ಯಕ್ಷ ಫೈಝಲ್ ಮಠ ಉದ್ಘಾಟಿಸಿದರು. ಕೆಸಿಎಫ್ ವಲಯದ ಪ್ರಾದೇಶಿಕ ಅಧಿಕಾರಿಯಾಗಿ ಅಬ್ದುಲ್ ಕರೀಂ ಇಮ್ದಾದಿ ಹಾಗೂ ಮುಸ್ತಫಾ ಹಾಸನ ಆಗಮಿಸಿದ ಅವರು, ಸಾಂಘಿಕ ಕಾರ್ಯಚರಣೆ ಕುರಿತು ವಲಯದ ಕೌನ್ಸಿಲರ್ಸ್ ಗಳಿಗೆ ಮಾಹಿತಿ ನೀಡಿದರು.
ಕೆಸಿಎಫ್ ವಲಯ ನಾಯಕರಾದ ರಶೀದ್ ಬೆಳ್ಳಾರೆ, ಫೈಝಲ್ ಮಠ, ಇಬ್ರಾಹಿಂ ಬೆಂಗರೆ, ರಶೀದ್ ಸೂರಿಂಜೆ, ಯೂಸುಫ್ ಉಚ್ಚಿಲ, ಇಕ್ಬಾಲ್ ಪಾನೇಲ,ಅಶ್ರಫ್ ಮೂಡಬಿದಿರೆ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಉನೈಝಾ ವಲಯ ಕಾರ್ಯದರ್ಶಿ ಮೌಯ್ದಿನ್ ಶಿವಮೊಗ್ಗ ಸ್ವಾಗತಿಸಿದರು. ಸಿದ್ಧೀಕ್ ಸಖಾಫಿ ಪ್ರಾರ್ಥಿಸಿದರು.
ಬಳಿಕ ಮಹಾಸಭೆಯಲ್ಲಿ ಕೆಸಿಎಫ್ ನ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಮೌಯ್ದಿನ್ ಶಿವಮೊಗ್ಗ ಹಾಗೂಪ್ರಧಾನ ಕಾರ್ಯದರ್ಶಿಯಾಗಿ ನಿಸಾರ್ ಮಂಗಳೂರು ಅವರನ್ನ ಆಯ್ಕೆ ಮಾಡಲಾಯಿತು. ಇನ್ನುಳಿದಂತೆ ಕೋಶಾಧಿಕಾರಿಯಾಗಿಯೂಸುಫ್ ಉಚ್ಚಿಲ ಅವರನ್ನ ಆಯ್ಕೆ ಮಾಡಲಾಯಿತು.
ಸಂಘಟನಾ ಇಲಾಖೆಯ ಅಧ್ಯಕ್ಷರಾಗಿ ಇಸ್ಹಾಖ್ ಎಣ್ಣೆಹೊಳೆ, ಕಾರ್ಯದರ್ಶಿಯಾಗಿ ಇಬ್ರಾಹಿಂ ಬೆಂಗರೆ, ಶಿಕ್ಷಣ ಇಲಾಖೆ ಅಧ್ಯಕ್ಷರಾಗಿ ರಹೀಂ ನಿಝಾಮಿ ಯಾದಗಿರಿ, ಕಾರ್ಯದರ್ಶಿಯಾಗಿ ಶಂಶುದ್ಧೀನ್ ಉಜಿರೆಬೆಟ್ಟು, ಸಾಂತ್ವನ ಇಲಾಖೆಯ ಅಧ್ಯಕ್ಷರಾಗಿ ಆಸೀಫ್ ದೇರಳಕಟ್ಟೆ, ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಬೆಂಜನಪದವು, ಪ್ರಕಾಶನ ಇಲಾಖೆಯ ಅಧ್ಯಕ್ಷರಾಗಿ ಆದಂ ತೋಡಾರ್, ಕಾರ್ಯದರ್ಶಿಯಾಗಿ ನೌಷದ್ ಉನೈಝಾ, ಅಡ್ಮಿನ್ ಇಲಾಖೆಯ ಅಧ್ಯಕ್ಷರಾಗಿ ಆಸೀಫ್ ಅಜಿಲಮೊಗರು, ಕಾರ್ಯದರ್ಶಿಯಾಗಿ ಮಜೀದ್ ಬೆಳ್ಳಾರೆ, ಇಹ್ಸಾನ್ ಇಲಾಖೆಯ ಅಧ್ಯಕ್ಷರಾಗಿ ನಝೀರ್ ಅಳಕೆಮಜಲು, ಕಾರ್ಯದರ್ಶಿಯಾಗಿ ಝೈದ್ ಪುತ್ತೂರು ಆಯ್ಕೆಯಾದರು.
ಕಾರ್ಯನಿರ್ವಾಹಕರಾಗಿ ಅಬೂಬಕ್ಕರ್, ಹನೀಫ್ ಹಾಜಿ, ಆಶಿಖ್, ಅಝೀಮ್, ಅಬ್ದುಲ್ಲಾ ಮಂಜನಾಡಿ, ಅಶ್ರಪ್, ಸಿದ್ದೀಕ್ ಸಖಾಫಿ, ವಲಯ ಕೌನ್ಸಿಲರ್ ಗಳಾಗಿ ಫೈಝಲ್ ಮಠ, ರಶೀದ್ ಬೆಳ್ಳಾರೆ, ಇಕ್ಬಾಲ್ ಪಾನೇಲ, ಅಶ್ರಫ್ ಮೂಡಬಿದಿರೆ, ಹಸನ್ ಮದನಿ ಮಂಡೆಕೋಲು, ರಶೀದ್ ಸೂರಿಂಜೆ, ರಹೀಂ ಎಣ್ಣೆಹೊಳೆ ಅವರು ಆಯ್ಕೆಯಾದರು. ಬಳಿಕ ನೂತನ ಅಧ್ಯಕ್ಷ ಮೌಯ್ದಿನ್ ಶಿವಮೊಗ್ಗ ಹೊಸ ಕೆಸಿಎಫ್ ವಲಯದಮುಂದಿನ ಕಾರ್ಯಾಗಳ ಬಗ್ಗೆ ತಿಳಿಸಿದರು. ಸಮಾರೋಪದಲ್ಲಿ ಅಸ್ಮಾ ಉಲ್ ಉಸ್ನ ಪ್ರಾರ್ಥಿಸಿದರು. ನಿಸಾರ್ ಮಂಗಳೂರು ಧನ್ಯವಾದ ಸಲ್ಲಿಸಿದರು.