-->
PUTTUR: ಹತ್ತೂರ ಒಡೆಯನ ಸನ್ನಿಧಿಯಲ್ಲಿ ವಸ್ತ್ರ ಸಂಹಿತೆ ಜಾರಿ!?

PUTTUR: ಹತ್ತೂರ ಒಡೆಯನ ಸನ್ನಿಧಿಯಲ್ಲಿ ವಸ್ತ್ರ ಸಂಹಿತೆ ಜಾರಿ!?


ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ನಿಯಮ ಜಾರಿಯಾಗಿದೆ. ಹಿಂದೂಪರ ಸಂಘಟನೆಗಳು ಕಳೆದ ಹಲವು ವರ್ಷಗಳಿಂದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಗೆ ಮನವಿ ಮಾಡಿತ್ತು. ಇದೀಗ ಆ ಮನವಿಗೆ ದೇವಸ್ಥಾನದ ಆಡಳಿತ ದೇವಳದ ಮುಖ್ಯ ದ್ವಾರದ ಬಳಿಯೇ ಸೂಚನಾ ಫಲಕನ್ನು ಹಾಕಲಾಗಿದೆ. ಹೆಚ್ಚಾಗಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಈ ವಸ್ತ್ರಸಂಹಿತೆ ಅಳವಡಿಸಲಾಗಿದೆ. 


ಹೌದು ಇನ್ನು ಮುಂದೆ ತಮಗೆ ತೋಚಿದ ಡ್ರೆಸ್ ಹಾಕಿಕೊಂಡು‌ ದೇವರ ದರ್ಶನ ಪಡೆಯುವಂತಿಲ್ಲ. ಪುರುಷರು ಪ್ಯಾಂಟ್ ಮತ್ತು ಅಂಗಿ ಅಥವಾ ಲುಂಗಿ ಮತ್ತು ಅಂಗಿ ಧರಿಸಿ‌ ದೇವಸ್ಥಾನದ ಒಳಗೆ ಪ್ರವೇಶಿಸಬೇಕು. ಅದೇ ರೀತಿ ಮಹಿಳೆಯರು ಚೂಡಿದಾರ್ ಅಥವಾ  ಸೀರೆ ಹಾಕಿಕೊಂಡು ದೇವರ ದರ್ಶನ ಪಡೆಯಬೇಕು. ಈ ಮೂಲಕ ಕಳೆದ ಹಲವು ವರ್ಷಗಳಿಂದ ಹತ್ತೂರಿನ ಒಡೆಯ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಭಕ್ತರ ಮತ್ತು ಹಿಂದೂಪರ ಸಂಘಟನೆಗಳ ಮನವಿಗೆ ಇದೀಗ ಸ್ಪಂದನೆ ಸಿಕ್ಕಿದೆ.


ದೇವಸ್ಥಾನದ ಒಳಗೆ ಬರುವ ಭಕ್ತರಿಗೆ ವಸ್ತ್ರಸಂಹಿತೆ  ಜಾರಿ ಮಾಡಬೇಕೆಂದು ಸಂಘಟನೆಗಳು ಮತ್ತು ಭಕ್ತರು ಹಲವಾರು ಬಾರಿ ದೇವಸ್ಥಾನಕ್ಕೆ ಮನವಿ ಮಾಡಿಕೊಂಡ ಬರುತ್ತಿದ್ದವು. ದೇವಸ್ಥಾನದ ಈ ಹಿಂದಿನ ವ್ಯವಸ್ಥಾಪನಾ ಸಮಿತಿ ಈ ಸಂಬಂಧ ದೇವಸ್ಥಾನದ ಪ್ರವೇಶ ದ್ವಾರದ ಬಳಿ  ಒಂದು ಸೂಚನಾ ಫಲಕವನ್ನೂ ಅಳವಡಿಸಿತ್ತು. ಆದರೆ ಕೆಲವೇ ದಿನಗಳಲ್ಲಿ ಆ ಸೂಚನಾ ಫಲಕ ಮೂಲೆ ಗುಂಪಾಗಿತ್ತು. ಆದರೆ ಇದೀಗ ದೊಡ್ಡ ಬೋರ್ಡನ್ನು ಮುಖ್ಯ ದ್ವಾರದ ಬಳಿ ಅಳವಡಿಸಲಾಗಿದ್ದು, ಭಕ್ತರು ಈ ಫಲಕದಲ್ಲಿರುವ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ. 

ಇದೀಗ ದೇವಸ್ಥಾನದಲ್ಲಿ ಹಾಕಿರುವ ವಸ್ತ್ರಸಂಹಿತೆಯ ಫಲಕಕ್ಕೆ ಭಕ್ತರೂ ಕೂಡ ಸ್ಪಂದಿಸುತ್ತಿದ್ದು, ಸ್ಥಳೀಯರು ಆದಷ್ಟು ಇದೇ ರೀತಿಯ ಡ್ರೆಸ್ ಮೂಲಕವೇ ದೇವಸ್ಥಾನಕ್ಕೆ ಬರಲಾರಂಭಿಸಿದ್ದಾರೆ. ಹಿಂದೂ ಸಂಪ್ರದಾಯಗಳನ್ನು ದೇವಸ್ಥಾನದಲ್ಲಿ ಪಾಲಿಸೋದ್ರಲ್ಲಿ ಯಾವುದೇ ತಪ್ಪಿಲ್ಲ. ದೇವಸ್ಥಾನಕ್ಕೆ ಬರುವಾಗ ಪರಿಶುದ್ಧವಾಗಿ, ಸಂಪ್ರದಾಯಿಕ ಬಟ್ಟೆಗಳನ್ನು ಧರಿಸಿ ಬರುವ ಅಗತ್ಯವಿದೆ. ಅದನ್ನು ಬಿಟ್ಟು ಬೀಚ್ ಗೋ, ಶಾಪಿಂಗ್ ಗೋ ಹೋಗುವಂತೆ ಡ್ರೆಸ್ ಹಾಕಿದಲ್ಲಿ, ಅದು ಭಕ್ತರ ಏಕಾಗ್ರತೆಯನ್ನು ಕೆಡಿಸುತ್ತದೆ ಎನ್ನುವ ಆರೋಪವೂ ಭಕ್ತರದ್ದಾಗಿದೆ. ಅದರಲ್ಲೂ ಮಹಿಳೆಯರು ಈ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎನ್ನುವುದು ಭಕ್ತರ ಆಗ್ರಹವೂ ಆಗಿದೆ. ಕೇವಲ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾತ್ರವಲ್ಲದೆ, ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲೂ ಈ ನಿಯಮ ಜಾರಿಗೆ ಬಂದರೆ ಉತ್ತಮ ಎಂದಿದ್ದಾರೆ.

ಈ ನಡುವೆ ಬೇರೆ ಎಲ್ಲಾ ಧರ್ಮಗಳ ಧಾರ್ಮಿಕ ಕೇಂದ್ರಗಳನ್ನು ಪ್ರವೇಶಿಸುವಾಗ ವಸ್ತ್ರಸಂಹಿತೆಯನ್ನು ಪಾಲಿಸಲಾಗುತ್ತದೆ. ಆದರೆ ಹಿಂದೂ ದೇವಸ್ಥಾನಗಳಲ್ಲಿ ಈ ನಿಯಮಗಳು ಇಲ್ಲದ ಕಾರಣ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ವಿಷಯದಲ್ಲಿ ಗೊಂದಲವೂ ಏರ್ಪಡುತ್ತಿದೆ ಎನ್ನುವ ಆರೋಪವೂ ಕೇಳಿ ಬರುತ್ತಿದೆ.

Ads on article

Advertise in articles 1

advertising articles 2

Advertise under the article