.jpeg)
ಮಂಗಳೂರು: ಹರೇಕಳ ಬಿಜೆಪಿ ಬೂತ್ ಅಧ್ಯಕ್ಷನ ಮೇಲೆ ಹಲ್ಲೆ; ಎಂಎಲ್ಸಿ ಕಿಶೋರ್ ಕುಮಾರ್ ತೀವ್ರ ಖಂಡನೆ
ಮಂಗಳೂರು: ಭಾರತೀಯ ಜನತಾ ಪಕ್ಷದ ಹರೇಕಳ ಬೂತ್ ಅಧ್ಯಕ್ಷ ಶರತ್ ಕುಮಾರ್ ಗಟ್ಟಿ ಎಂಬವರ ಮೇಲೆ ಗುಂಪೊಂದು ನಡೆಸಿರುವ ಹಲ್ಲೆ ಪ್ರಕರಣವನ್ನು ವಿಧಾನ
ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ತೀವ್ರವಾಗಿ ಖಂಡಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳು ಶರತ್ ಕುಮಾರ್
ಭೇಟಿಯಾಗಿ ಧೈರ್ಯ ತುಂಬಿದ ಕಿಶೋರ್ ಕುಮಾರ್, ಮತಾಂಧ ಗುಂಪು ನಡೆಸಿರುವ ದಾಳಿಯ ವಿರುದ್ಧ ಆಕ್ರೋಶ
ವ್ಯಕ್ತಪಡಿಸಿದರು. ಕೂಡಲೇ ಗೃಹ ಇಲಾಖೆ ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಸೂಚನೆ ನೀಡಬೇಕು. ಇಲ್ಲದೇ
ಹೋದಲ್ಲಿ ಹಿಂದೂ ಸಮಾಜ ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಿದೆ ಎಂದು ಎಚ್ಚರಿಸಿದ್ದಾರೆ.
ಸುಮಾರು
15-20 ಜನರಿದ್ದ ಗುಂಪೊಂದು ಶುಕ್ರವಾರ ಮಸೀದಿಯಿಂದ ನೇರವಾಗಿ ಶರತ್ ಕುಮಾರ್ ಗಟ್ಟಿ ಅವರ ಮನೆಗೆ
ನುಗ್ಗಿ ಕ್ಷುಲ್ಲಕ ಕಾರಣ ಮುಂದಿಟ್ಟು ಹಲ್ಲೆ ನಡೆಸಿದೆ. ಈ ವೇಳೆ ತಡೆಯಲು ಬಂದ ಶರತ್ ಕುಮಾರ್ ಅವರ
ಅಜ್ಜಿಯನ್ನು ದೂಡಿ ದಬ್ಬಾಳಿಕೆ ನಡೆಸಿದ್ದಾರೆ. ಹರೇಕಳ, ಪಾವೂರು ವ್ಯಾಪ್ತಿಯಲ್ಲಿ ಹಿಂದೂಗಳು ಅಲ್ಪಸಂಖ್ಯಾತರಿರುವುದು
ನಿಜ. ಹಾಗಂತ ಯಾವುದೇ ದಬ್ಬಾಳಿಕೆಗೆ ಹಿಂದೂ ಸಮಾಜ ಸುಮ್ಮನಿರದು. ಹಿಂದೂಗಳು ಪ್ರತ್ಯುತ್ತರ ನೀಡಲು
ಮುಂದಾದರೆ ಅಲ್ಪಸಂಖ್ಯಾತ ಸಮಾಜ ಊರನ್ನ ಬಿಟ್ಟು ಓಡಬೇಕಾದೀತು ಎಂದು ಕಿಶೋರ್ ಕುಮಾರ್ ಎಚ್ಚರಿಸಿದ್ದಾರೆ.