ಮಂಗಳೂರು: 'ಡ್ರೀಮ್ ಡೀಲ್' ಬಂಪರ್ ಡ್ರಾದಲ್ಲಿ ಅವ್ಯವಹಾರ ಆರೋಪ; ಗ್ರಾಹಕರು ಗರಂ!
Tuesday, November 19, 2024
ಮಂಗಳೂರು: ಕರಾವಳಿಯಲ್ಲಿ ಭಾರೀ ಜನಪ್ರಿಯತೆ ಪಡೆದಿದ್ದ 'ಡ್ರೀಮ್ ಗೋಲ್ಡ್' ಗ್ರೂಪ್ನ ಲಕ್ಕಿ ಡ್ರಾವೊಂದು ಇದೀಗ ಕರಾವಳಿಯಲ್ಲಿ ತಲ್ಲಣ ಮೂಡಿಸಿದೆ. ಲೈವ್ ಡ್ರಾವೊಂದರಲ್ಲಿ ಸಿಬ್ಬಂದಿಯೊಬ್ಬ ಪ್ಯಾಂಟ್ ಪಾಕೆಟ್ನಲ್ಲಿ ತೆಗೆದಿರಿಸಿದ್ದ ಕಾಯಿನ್ ನೀಡುವ ಮೂಲಕ ಅದೇ ಸಂಖ್ಯೆ ಬರುವಂತೆ ಮಾಡಿದ್ದಾನೆ ಅನ್ನೋ ಆರೋಪ ಕೇಳಿ ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ವೀಡಿಯೋ ಕೂಡಾ ವೈರಲ್ ಆಗಿದ್ದು, ಡ್ರೀಮ್ ಗೋಲ್ಡ್ ಮುಖ್ಯಸ್ಥರು ನಿನ್ನೆ ರಾತ್ರಿಯೇ ಮತ್ತೊಂದು ಡ್ರಾ ನಡೆಸಿ ಗ್ರಾಹಕರಿಗೆ ಸ್ಪಷ್ಟನೆ ನೀಡುವ ಪ್ರಯತ್ನಪಟ್ಟಿದ್ದಾರೆ. ಅದರಲ್ಲಿ ವಿಜೇತರಾದವರಿಗೂ ಮಹೀಂದ್ರಾ ಥಾರ್ ಕಾರನ್ನೇ ಬಹುಮಾನವಾಗಿ ನೀಡುವುದಾಗಿ ಘೋಷಿಸಿದ್ದಾರೆ. ಆದರೆ, ಈ ಕುರಿತಂತೆ ಜಾಲತಾಣದಲ್ಲಿ ವ್ಯಾಪಕ ಅಪಪ್ರಚಾರ ಕೇಳಿ ಬರುತ್ತಿದ್ದು, ಎಲ್ಲವೂ ಗೊಂದಲದ ಗೂಡಾಗಿದೆ.
ಲಕ್ಕಿ ಸ್ಕೀಂಗಳು ಇತ್ತೀಚಿನ ದಿನಗಳಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಿರುವ ಸಮಯದಲ್ಲೇ ಇಂತಹ ಬೆಳವಣಿಗೆ ನಡೆದಿದ್ದು ಗ್ರಾಹಕರು ಡ್ರೀಮ್ ಡೀಲ್ ಗ್ರೂಪ್ ಬಂಪರ್ ಡ್ರಾ ಕುರಿತು ವಿಶ್ವಾಸ ಕಳೆದುಕೊಳ್ಳುವಂತಾಗಿದೆ.
ಇನ್ನು ಈ ವೀಡಿಯೋ ಕುರಿತ ಸ್ಪಷ್ಟನೆಗಾಗಿ 'ದಿ ನ್ಯೂಸ್ ಅವರ್' ಡ್ರೀಮ್ ಗೋಲ್ಡ್ ಮುಖ್ಯಸ್ಥ ಸುಹೇಲ್ ಅವರನ್ನು ಸಂಪರ್ಕಿಸಿದ್ದು, ಕರೆ ಸ್ವೀಕರಿಸಿಲ್ಲ.