ಬಂಟ್ವಾಳ: ಕಂಚಿನಡ್ಕಪದವಿನಲ್ಲಿ ಅನೈತಿಕ ಪೊಲೀಸ್‌ಗಿರಿ; ಕಂಬಕ್ಕೆ ಕಟ್ಟಿ ಯುವಕನಿಗೆ ಥಳಿತ! 6 ಮಂದಿ ಅರೆಸ್ಟ್!
Sunday, November 10, 2024
ಬಂಟ್ವಾಳ: ಹುಡುಗಿಯನ್ನು ಭೇಟಿಯಾಗಲು ಬಂದ ಯುವಕನೋರ್ವನನ್ನು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಕಳೆದ ಗುರುವಾರ ತಡರಾತ್ರಿ ನಡೆದಿದೆ. ಘಟನೆ ಸಂಬಂಧ ವೀಡಿಯೋ ಇದೀಗ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಂಬಕ್ಕೆ ಕಟ್ಟಿ ಹಾಕಿ ರಕ್ತ ಚಿಮ್ಮುವಂತೆ ಯುವಕರ ತಂಡವೊಂದು ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿರುವುದು ಗೊತ್ತಾಗಿದೆ.
ಹಲ್ಲೆಯಿಂದ ತೀವ್ರ ತರಹದ ಗಾಯಗೊಂಡ ಮಹಮ್ಮದ್ ಮುಸ್ತಾಪ(21)ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಸ್ತಾಪನ ಸಂಬಂಧಿ ಹುಡುಗಿಯೊಬ್ಬಳು ಸಜೀಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ಮನೆಗೆ ಬರಲು ಹೇಳಿದಂತೆ ಸಜೀಪನಡು ಕಂಚಿನಡ್ಕಪದವು ಎಂಬಲ್ಲಿಗೆ ಬಂದಾಗ ಆರೋಪಿಗಳು ಮಹಮ್ಮದ್ ಮುಸ್ತಾಫನ ಬಗ್ಗೆ ಸಂಶಯ ವ್ಯಕ್ತಪಡಿಸಿ ಗುಂಪು ಸೇರಿಕೊಂಡು ಕಂಬಕ್ಕೆ ಹಗ್ಗದಿಂದ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾಗಿ ದೂರಲಾಗಿದೆ.
ಘಟನೆ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
1. ಮಹಮ್ಮದ್ ಸಪ್ವಾನ್ ಪ್ರಾಯ:25 ವರ್ಷ ತಂದೆ:ಎಸ್.ಬಿ.ಹುಸೈನ್
2.ಮಹಮ್ಮದ್ ರಿಜ್ವಾನ್ ಪ್ರಾಯ:25 ವರ್ಷ ತಂದೆ:ಎಸ್.ಬಿ.ಹುಸೈನ್
3.ಇರ್ಪಾನ್(27) ತಂದೆ: ಇಬ್ರಾಹಿಂ
4.ಅನೀಸ್ ಅಹಮ್ಮದ್ (19) ತಂದೆ: ಅಶ್ರಫ್
5.ನಾಸೀರ್ (27) ತಂದೆ: ಇಬ್ರಾಹಿಂ
6.ಶಾಕೀರ್ (18) ತಂದೆ: ಯಾಕೂಬ್
ಈ ಆರು ಆರೋಪಿಗಳನ್ನು ಬಂಧಿಸಲಾಗಿದ್ದು, ಕೊಲೆಯತ್ನ ಪ್ರಕರಣ ದಾಖಲಾಗಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.