
ಸಹಪಾಠಿಯ ಕಿರುಕುಳ | ನಾಲ್ಕನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ
Saturday, October 22, 2022
ಉತ್ತರ ಪ್ರದೇಶ: ಸಹಪಾಠಿಯೋರ್ವಳ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿನಿಯೊಬ್ಬಳು ಕಾಲೇಜಿನ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೀರತ್ ನ ಸುಭರ್ತಿ ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ದ್ವಿತೀಯ ವರ್ಷದ ಬಿಡಿಎಸ್ ವಿದ್ಯಾರ್ಥಿನಿ ವಾನಿಯಾ ಶೇಖ್ ಮೃತಪಟ್ಟ ದುರ್ದೈವಿ.
ವಾನಿಯಾ ಶೇಖ್ ಸಹಪಾಠಿಯಾದ ಸಿದ್ಧಾಂತ್ ಪನ್ವಾರ್ ಎಂಬಾತ ಆಕೆಗೆ ನಿರಂತರ ಕಿರುಕುಳ ನೀಡುತ್ತಿದ್ದನು ಎಂದು ಆರೋಪಿಸಲಾಗಿದೆ. ಬುಧವಾರ ಅವಳು ಅದನ್ನು ಪ್ರತಿರೋಧಿಸಿದಾಗ ಎಲ್ಲರ ಮಂದೆ ಕಪಾಳಕ್ಕೆ ಹೊಡೆದಿದ್ದನು ಎನ್ನಲಾಗಿದೆ. ಇದರಿಂದ ಅವಮಾನಿತಳಾದ ಯುವತಿ ವಿಶ್ವವಿದ್ಯಾಲಯದ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಬಾಲಕಿಯ ತಂದೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿದ ನಂತರ ಪೊಲೀಸರು ಗುರುವಾರ ಆರೋಪಿ ಸಿದ್ಧಾಂತ್ ಕುಮಾರ್ ಪನ್ವಾರ್ ಬಂಧಿಸಿದ್ದಾರೆ.