
KANTHARA: ರಿಷಬ್ ಶೆಟ್ಟಿ ಹಿಂದೆ ಇರುವ "ದೈವಿ ಶಕ್ತಿ" ಯಾವುದು ಗೊತ್ತಾ....???
ಉಡುಪಿ: ಕರಾವಳಿಯ ದೈವಾರಾಧನೆ ಆಚಾರ ವಿಚಾರ ಗಳನ್ನು ಇಟ್ಟುಕೊಂಡು ಉಡುಪಿಯ ಕುಂದಾಪುರದ ರಿಷಭ್ ಶೆಟ್ಟಿ, ನಿರ್ದೇಶನ ಮಾಡಿ ನಟಿಸಿರುವ "ಕಾಂತಾರ" ಚಿತ್ರ ರಾಜ್ಯ ಮಾತ್ರವಲ್ಲದೆ ದೇಶವಿದೇಶಗಳಲ್ಲಿ ಸಕತ್ತ್ ಸದ್ದು ಮಾಡ್ತಿದೆ. ಚಿತ್ರ ರಿಲೀಸ್ ಆದ ದಿನದಿಂದ ಎಲ್ಲಾ ಚಿತ್ರಮಂದಿರಿಗಳಲ್ಲಿಯೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ರಿಷಬ್ ಶೆಟ್ಟಿ ಈ ಹಿಂದೆ ನಿರ್ದೇಶನ ಮಾಡಿರುವ ರಿಕ್ಕಿ ಸಿನಿಮಾ ಅಷ್ಟೊಂದು ಕ್ಲಿಕ್ ಆಗದಿದ್ದರೂ, ನಂತರ ಬಂದ ರಿಷಭ್ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ ಸಿನಿ ಪ್ರೀಯರಿಗೆ ಮಾತ್ರವಲ್ಲದೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರ ನೋಡಿದವರಿಗೆ ರಿಷಭ್ ಶೆಟ್ಟಿಯ ಒಳಗೆ ಒಬ್ಬ ಅದ್ಬುತ ನಿರ್ದೇಶಕನಿದ್ದಾನೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅದರಂತೆಯೆ ರಿಷಭ್ ಶೆಟ್ಟಿ ಸಿನಿ ಪ್ರೀಯರಿಗೆ ಮತ್ತು ತನ್ನ ಅಭಿಮಾನಿಗಳಿಗೆ ಕಾಂತರ ಚಿತ್ರದ ಮೂಲಕ ಮತ್ತೊಮ್ಮೆ ರಿಷಭ್ ಒಬ್ಬ ನಿರ್ದೇಶಕ ಮಾತ್ರ ಮಾತ್ರವಲ್ಲದೆ ನಟನೆಗೂ ಸೈ ಎಂಬುವುದನ್ನು ಕಾಂತರ ಚಿತ್ರದ ಮೂಲಕ ತೋರಿಸಿ ಕೊಟ್ಟಿದ್ದಾರೆ...
ರಿಷಭ್ ಶೆಟ್ಟಿ ಯಶಸ್ಸಿನ ಹಿಂದೆ ಇದೆ ಈ "ದೈವಿ" ಶಕ್ತಿ...!!!
ಹೌದು ರಿಷಭ್ ಶೆಟ್ಟಿ ಯಾವೂದೇ ಚಿತ್ರದಲ್ಲಿ ನಟನೆ ಅಥವಾ ನಿರ್ದೇಶನ ಮಾಡುವ ಮೊದಲು ಉಡುಪಿಯ ಕೊರಂಗ್ರಪಾಡಿಯಲ್ಲಿರುವ ಶ್ರೀ ನೀಲಕಂಠ ಮಹಾ ಬಬ್ಬು ಸ್ವಾಮಿ ದೈವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿರುವ ಕೊರಗಜ್ಜ ಗುಡಿಗೆ ಭೇಟಿ ನೀಡಿ ಮುಂದಿನ ಹೆಜ್ಜೆ ಇಡುತ್ತಿದ್ದರು. ಅದರಂತೆಯ ಕಾಂತರ ಚಿತ್ರದ ಸಮಯದಲ್ಲಿಯೂ ಇದೇ ಕ್ಷೇತ್ರಕ್ಕೆ ಭೇಟಿ ಚಿತ್ರದ ಯಶಸ್ಸು ಗಾಗಿ ಪ್ರಾರ್ಥನೆ ಮಾಡಿಕೊಂಡಿದ್ದರಂತೆ. ಕಾಂತರ ಚಿತ್ರ ರಿಲೀಸ್ ಮೊದಲು ಕೂಡ ಶ್ರೀ ನೀಲಕಂಠ ಮಹಾ ಬಬ್ಬು ಸ್ವಾಮಿ ದೈವಸ್ಥಾನಕ್ಕೆ ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ಭೇಟಿಕೊಟ್ಟು ಪ್ರಾರ್ಥನೆ ಸಲ್ಲಿದ್ದಾರೆ.
ಈ ಕ್ಷೇತ್ರದ ಬಗ್ಗೆ ರಿಷಭ್ ಶೆಟ್ಟಿಗೆ ತಿಳಿಸಿದ್ದು ಉಳಿದವರು ಕಂಡತೆ ಚಿತ್ರದ "ರಕ್ಷಿತ್ ಶೆಟ್ಟಿ" ಯಂತೆ....!!!
ಇನ್ನೂ ಈ ಕ್ಷೇತ್ರದ ಬಗ್ಗೆ ರಿಷಭ್ ಶೆಟ್ಟಿಗೆ ತಿಳಿಸಿದ್ದು , ಗೆಳೆಯ ಉಳಿದವರು ಕಂಡಂತೆ ಚಿತ್ರದ ನಟ ರಕ್ಷಿತ್ ಶೆಟ್ಟಿಯಂತೆ. ಅದರ ಬಳಿಕ ಯಾವುದೇ ಒಳ್ಳೆಯ ಕೆಲಸ ಆರಂಭಿಸಯವ ಮೊದಲು ರಿಷಭ್ ಶೆಟ್ಟಿ ಇಲ್ಲಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರಂತೆ ಎಂದು ದೇವಸ್ಥಾನ ಆಡಳಿತ ಮಂಡಳಿಯವರು https://www.thenewshour.in/ ಗೆ ತಿಳಿಸಿದ್ದಾರೆ. ಒಟ್ಟಾರೆ ಕಾಂತರ ಚಿತ್ರದ ಯಶಸ್ಸಿನಲ್ಲಿ ಸಿನಿಮಾ ತಂಡದ ಶ್ರಮದ ಜೊತೆ ದೈವಿ ಶಕ್ತಿಯು ಇದೆ ಎಂಬುವುದು ಕಾಂತರ ಸಿನಿಮಾ ನೋಡಿದವರ ವಲಯದಲ್ಲಿ ಚರ್ಚೆಯಾಗುತ್ತಿರುವ ಮಾತು.