.jpg)
ಪುತ್ತೂರು: ಓಝೋನ್ ಪ್ಯಾಲೇಸ್ಗೆ ಮುಟ್ಟುಗೋಲು ಎಚ್ಚರಿಕೆಯ ನೋಟೀಸ್! ಇದು 'ದಿ ನ್ಯೂಸ್ ಅವರ್' ವರದಿ ಇಂಪ್ಯಾಕ್ಟ್!
ಪುತ್ತೂರು: ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಪುತ್ತೂರು ತಾಲೂಕಿನ ಅಜೇಯನಗರದ ʼಓಝೋನ್ ಪ್ಯಾಲೇಸ್ʼಗೆ ಕೊನೆಗೂ ಪುತ್ತೂರು ನಗರಸಭೆ ಖಡಕ್ ಎಚ್ಚರಿಕೆಯ ನೋಟೀಸ್ ನೀಡಿದೆ. ಇನ್ಮುಂದೆ ಯಾವುದೇ ಕಾರ್ಯಕ್ರಮ ಆಯೋಜಿಸಿದ್ದಲ್ಲಿ ಕಾರ್ಯಕ್ರಮಕ್ಕೆ ಉಪಯೋಗಿಸಿದ ಎಲ್ಲ ವಸ್ತುಗಳನ್ನು ಮುಟ್ಟುಗೋಲು ಹಾಕಿ ಕಟ್ಟಡಕ್ಕೆ ಬೀಗ ಜಡಿಯುವುದಾಗಿ ʼಎಚ್ಚರಿಕೆ ನೋಟೀಸ್ʼ ನೀಡಿದೆ. ಈ ನೋಟೀಸ್ ಪ್ರತಿಯು ʼದಿ ನ್ಯೂಸ್ ಅವರ್ʼಗೆ ಲಭ್ಯವಾಗಿದೆ.
ಅಕ್ಟೋಬರ್
21 ರಂದು ʼದಿ ನ್ಯೂಸ್ ಅವರ್ʼ ಪಡ್ನೂರಿನ ಅಜೇಯನಗರದಲ್ಲಿರುವ ʼಓಝೋನ್ ಪ್ಯಾಲೇಸ್ʼ ಎಂಬ ಅನಧಿಕೃತ
ಸಭಾಂಗಣದ ಕುರಿತು ಸವಿವರ ವರದಿ ಪ್ರಕಟಿಸಿತ್ತು. ಶಂಸುದ್ದೀನ್ ಮಾಲೀಕತ್ವದ ಈ ಕಟ್ಟಡವು ವಸತಿ ಉದ್ದೇಶಕ್ಕೆಂದು
ಅನುಮತಿ ಪಡೆದು ಬಳಿಕ ಸಭಾಂಗಣವನ್ನಾಗಿಸಿ, ಮದುವೆ, ಮೆಹಂದಿ ಸಹಿತ ಇನ್ನಿತರ ಪಾರ್ಟಿ, ಸಂಭ್ರಮಾಚರಣೆಗಳಿಗೆ
ನೀಡುತ್ತಿದ್ದರು. ಇದರಿಂದ ಸಾರ್ವಜನಿಕರಿಗೆ ಭಾರೀ ತೊಂದರೆಯಗುತ್ತಿದ್ದರ ಬಗ್ಗೆ ವರದಿ ಪ್ರಕಟಿಸಲಾಗಿತ್ತು.
ವರದಿ ಪ್ರಕಟಗೊಂಡ ಮರುದಿನವೇ ಪುತ್ತೂರು ನಗರಸಭೆ ಕಟ್ಟಡದ ಮಾಲೀಕರಾದ ಶಂಸುದ್ದೀನ್ ಅವರಿಗೆ ನೋಟೀಸ್
ಜಾರಿಗೊಳಿಸಿತ್ತು. ಆದರೆ, ಈ ನೋಟೀಸ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದರಿಂದ ಪುತ್ತೂರು ನಗರಸಭೆ
ಆಯುಕ್ತರು ಇದೀಗ ಮುಟ್ಟುಗೋಲು ಎಚ್ಚರಿಕೆಯ ನೋಟೀಸ್ ನೀಡಿದ್ದಾರೆ.
ಇದನ್ನೂ ಓದಿ: Puttur | ಪುತ್ತೂರಿನ ಅಜೇಯನಗರದಲ್ಲಿ ಪರವಾನಿಗೆ ಇಲ್ಲದ 'ಓಝೋನ್ ಪ್ಯಾಲೇಸ್'! ನೋಟೀಸ್ ನೀಡಿದ್ರೂ ಡೋಂಟ್ ಕೇರ್!?
ಜೊತೆಗೆ ಈ ಪ್ರತಿಯನ್ನು
ಹಿರಿಯ ಆರೋಗ್ಯ ನಿರೀಕ್ಷಕರಿಗೂ, ಕಂದಾಯ ನಿರೀಕ್ಷಕರಿಗೂ ಲಗತ್ತಿಸಿದ್ದು, ಕಟ್ಟಡ ಮಾಲೀಕರಿಗೆ ನೋಟೀಸ್
ಜಾರಿಗೊಳಿಸುವಂತೆ ತಿಳಿಸಿದ್ದಾರೆ. ಒಟ್ಟಿನಲ್ಲಿ ʼದಿ ನ್ಯೂಸ್ ಅವರ್ʼ ವರದಿ ಭಾರೀ ಇಂಪ್ಯಾಕ್ಟ್
ಆಗಿದ್ದು, ಅನಧಿಕೃತ ಕಟ್ಟಡಕ್ಕೆ ಬೀಗ ಬೀಳುವ ಸಾಧ್ಯತೆ ನಿಚ್ಚಳವಾಗಿದೆ.