ಬೆಳ್ತಂಗಡಿ: ನಯವಂಚಕನ ಬಣ್ಣದ ಮಾತಿಗೆ ಲಕ್ಷ ಕಳೆದುಕೊಂಡ ಸಂತ್ರಸ್ತರಿಗೆ ಲೆಕ್ಕವಿಲ್ಲ! ಬೀ ಕೇರ್‌ಫುಲ್!
Tuesday, November 5, 2024
ಪುತ್ತೂರು: ಬೆಳ್ತಂಗಡಿ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ, ಪ್ರಸ್ತುತ ದುಬೈನಲ್ಲಿರುವ ಜಾರಿಗೆಬೈಲ್ ಉಬೈದ್ ಎಂಬಾತನ ನಯವಂಚನೆಯ ಕಥೆಯನ್ನ 'ದಿ ನ್ಯೂಸ್ ಅವರ್'ಗೆ ಸಂತ್ರಸ್ತರು ತಲುಪಿಸಿದ್ದಾರೆ. 3 ದಿನಗಳ ಹಿಂದಷ್ಟೇ 'ದಿ ನ್ಯೂಸ್ ಅವರ್' ಸಂಪರ್ಕಿಸಿದ್ದ ಉಬೈದ್‌ನ ಆಪ್ತರೊಬ್ಬರು, ಆತನೊಬ್ಬ ಸಾಮಾಜಿಕ ಚಿಂತನೆಯುಳ್ಳ ವ್ಯಕ್ತಿಯಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇದೀಗ ಆತನಿಂದ ವಂಚನೆಗೊಳಗಾದ ಕೆಲವು ವ್ಯಕ್ತಿಗಳು ಉಬೈದ್‌ನ ಕರ್ಮಕಾಂಡವನ್ನು 'ದಿ ನ್ಯೂಸ್ ಅವರ್' ಗಮನಕ್ಕೆ ತಂದಿದ್ದಾರೆ.
ನವಾಝ್ ವಿಟ್ಲ ಎಂಬವರು ಸಿದ್ಧಪಡಿಸಿದ ಪೋಸ್ಟರ್ ಕೂಡಾ ಹಂಚಿಕೊಂಡಿದ್ದು, ಜಾಲತಾಣಗಳಲ್ಲಿ ಹರಿದಾಡಿದಂತೆ ಆತ ವೇಶ್ಯಾವೃತ್ತಿ ನಡೆಸುತ್ತಿರಲಿಲ್ಲ. ಆದರೆ, ಅದೆಷ್ಟೋ ಮಂದಿಗೆ ತನ್ನ ಬಣ್ಣ ಬಣ್ಣದ ಮಾತುಗಳಿಂದ ಲಕ್ಷ ಲಕ್ಷ ರೂಪಾಯಿ ಹಣವನ್ನು ಹಿಂದೆಯೂ ದೋಚಿದ್ದು, ಈಗಲೂ ವಂಚಿಸುವ ಕಾಯಕದಲ್ಲಿ ತೊಡಗಿದ್ದಾನೆ ಎಂದು ನವಾಝ್ ವಿಟ್ಲ ತಿಳಿಸಿದ್ದಾರೆ.
ಅಷ್ಟೇ ಅಲ್ಲ, ದುಬೈಯಲ್ಲಿ ಉದ್ಯೋಗದ ಹಾಗೂ ಇನ್ನಿತರ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿರುವ ನಯವಂಚಕ ಉಬೈದ್ ವಿರುದ್ಧ ಸಂತ್ರಸ್ತರು ತಮ್ಮ ಬಳಿ ಇರುವ ಸೂಕ್ತ ದಾಖಲೆಗಳೊಂದಿಗೆ ಸ್ಥಳೀಯ ಠಾಣೆಗೆ ತೆರಳಿ ದೂರು ನೀಡುವಂತೆಯೂ, ಉಬೈದ್ ಆಪ್ತ ವಲಯದಲ್ಲಿ ಗುರುತಿಸಿಕೊಂಡವರೇ ತಿಳಿಸಿದ್ದಾರೆ.