-->
Mudabidri: ಆಳ್ವಾಸ್ ಕಾಲೇಜಿನಲ್ಲಿ ತರಗತಿಗೆ ನುಗ್ಗಿ ವಿದ್ಯಾರ್ಥಿನಿಗೆ ಇರಿತ!

Mudabidri: ಆಳ್ವಾಸ್ ಕಾಲೇಜಿನಲ್ಲಿ ತರಗತಿಗೆ ನುಗ್ಗಿ ವಿದ್ಯಾರ್ಥಿನಿಗೆ ಇರಿತ!

ಮೂಡುಬಿದಿರೆ: ಪ್ರೇಮ ವೈಫಲ್ಯದಿಂದ ನೊಂದ ವಿದ್ಯಾರ್ಥಿಯೋರ್ವ ಸ್ನೇಹಿತೆಗೆ ತರಗತಿಗೆ ನುಗ್ಗಿ ಕತ್ತರಿಯಿಂದ ಇರಿದ ಘಟನೆ ಆಳ್ವಾಸ್ ಕಾಲೇಜಿನಲ್ಲಿ ಸೋಮವಾರ ನಡೆದಿದೆ. 

ತುಮಕೂರು ಮೂಲದವರಾದ ಮಂಜುನಾಥ್ ಹಾಗೂ ಯುವತಿ ಪಿಯುಸಿ ತನಕ ಜೊತೆಯಾಗಿ ವಿದ್ಯಾಭ್ಯಾಸ ನಡೆಸಿದ್ದರು ಎನ್ನಲಾಗಿದೆ. ಅನಂತರ ಯುವಕ ಕಾಲೇಜು ತೊರೆದಿದ್ದು, ಹುಡುಗಿ ಕಾಲೇಜು ಸೇರ್ಪಡಯಾಗಿದ್ದಳು‌. ಪಿಯುಸಿ ವರೆಗೆ ಜೊತೆಯಾಗಿದ್ದ ಇವರ ನಡುವೆ ಪ್ರೇಮವಿತ್ತು ಎನ್ನಲಾಗಿದೆ. ಆದರೆ, ಈ ವಿಚಾರವಾಗಿ ಗೊತ್ತಾಗಿ ಹುಡುಗಿ ಮನೆಯವರು ಆಕೆಯ ಬಳಿಯಿದ್ದ ಮೊಬೈಲ್ ವಾಪಸ್ ಪಡೆದಿದ್ದರು ಎಂದು ಗೊತ್ತಾಗಿದೆ.

ಇದರಿಂದ ಕುಪಿತನಾದ ಆರೋಪಿ ಎರಡು ದಿನಗಳ ಹಿಂದಷ್ಟೇ ಮೂಡುಬಿದಿರೆಗೆ‌ ಆಗಮಿಸಿ ಲಾಡ್ಜ್ ನಲ್ಲಿ ತಂಗಿದ್ದು, ಆಕೆಯ ಭೇಟಿಗೆ ಮುಂದಾಗಿದ್ದಾನೆ. ಸಾಧ್ಯವಾಗದೇ ಹೋದಾಗ ಸೋಮವಾರ ಬೆಳಗ್ಗೆ ಕಾಲೇಜಿಗೆ ತೆರಳಿ ಹುಡುಗಿ ಇದ್ದ ತರಗತಿಗೆ ನುಗ್ಗಿ ಕತ್ತರಿಯಲ್ಲಿ ಇರಿದಿದ್ದಾನೆ. ಕೂಡಲೇ ಅಲ್ಲಿದ್ದ ಇತರೆ ವಿದ್ಯಾರ್ಥಿಗಳು ಆತನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದು, ಆರೋಪಿ ವಿರುದ್ಧ ಮೂಡುಬಿದಿರೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಗಂಭೀರ ಗಾಯಗೊಂಡ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Ads on article

Advertise in articles 1

advertising articles 2

Advertise under the article