ಮಂಗಳೂರು: ಪ್ಯಾಲೆಸ್ತೀನ್ ಪರ ಪ್ರತಿಭಟನೆ ನಡೆಸಿದ ಕಮ್ಯುನಿಸ್ಟ್ ನಾಯಕರ ಮೇಲೆ FIR!
Wednesday, November 6, 2024
ಮಂಗಳೂರು: ಪ್ಯಾಲೇಸ್ತೀನ್ ಪರ ಪ್ರತಿಭಟನೆ ನಡೆಸಿದ ಎಡಪಕ್ಷ ಹಾಗೂ ಚಳವಳಿಯ ನಾಯಕರ ಮೇಲೆ ನಗರದ ಪಾಂಡೇಶ್ವರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ನವೆಂಬರ್ 4ರ ಸೋಮವಾರದಂದು ನಗರದ ಮಿನಿ ವಿಧಾನಸೌಧದ ಮುಂಭಾಗ ಸಿಪಿಐಎಂ ಪಕ್ಷದ ವತಿಯಿಂದ ಇಸ್ರೇಲ್ ಪ್ಯಾಲೆಸ್ತೀನ್ ಮೇಲೆ ನಡೆಸುತ್ತಿರುವ ಯುದ್ಧವನ್ನು ಕೊನೆಗೊಳಿಸುವಂತೆ, ಪ್ಯಾಲೆಸ್ತೀನಿಯರಿಗೆ ಮಾನವೀಯ ನೆರವು ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿತ್ತು.
ಪ್ರತಿಭಟನೆ ಆರಂಭಕ್ಕೂ ಮುನ್ನವೇ ಪೊಲೀಸರು ಅಡ್ಡಿಪಡಿಸಿದ್ದರು. ಪ್ರತಿಭಟನಾಕಾರರು ಧ್ವನಿವರ್ಧಕ ಬಳಸದೇ ಪ್ರತಿಭಟನೆ ನಡೆಸಿದ್ದರು.
ಎಎಸ್‌ಐ ಪ್ರವೀಣ್ ನೀಡಿದ ದೂರಿನಂತೆ, ವಸಂತ ಆಚಾರಿ, ಯಾದವ ಶೆಟ್ಟಿ, ಮುನೀರ್ ಕಾಟಿಪಳ್ಳ, ಸುನಿಲ್ ಕುಮಾರ್ ಬಜಾಲ್, ನಾಗೇಶ್ ಕೋಟ್ಯಾನ್, ಇಮ್ತಿಯಾಝ್, ಸಂತೋಷ್ ಬಜಾಲ್, ಸುಕುಮಾರ್, ಯೋಗೇಶ್, ಹಯವದನ, ಸೀತರಾಮ ಹೀಗೆ 11 ಮಂದಿಯ ವಿರುದ್ಧ ಸುಮೊಟೋ ಕೇಸು ದಾಖಲಿಸಲಾಗಿದೆ.