.jpg)
ಪುತ್ತೂರು: ಶೋಭಾಕ್ಕ ಸಾಹಸಕ್ಕೆ ಭಾರೀ ಮೆಚ್ಚುಗೆ; ಶಾಸಕರಿಗೆ ಜನರ ಮನವಿ ಏನು ಗೊತ್ತೇ?
Monday, November 4, 2024
ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಭಾರೀ ಸೆನ್ಸೇಶನ್ ಮೂಡಿಸಿದ ಸ್ನೇಕ್ ಶೋಭಾ ಅವರ ಕುರಿತು ಇದೀಗ ಅಪಾರ ಮೆಚ್ಚುಗೆ ವ್ಯಕ್ತವಾಗತೊಡಗಿದೆ. ಭಾರೀ ಗಾತ್ರದ ವಿಷಕಾರಿ 'ಇಂಡಿಯನ್ ರಾಕ್ ಪೈಥಾನ್' ಹಾವನ್ನ ಪಳಗಿಸಿ ಅದನ್ನ ರಕ್ಷಿಸಿದ ಸ್ನೇಕ್ ಶೋಭಾ ಅವರಿಗೆ ಅರ್ಹ ಪ್ರಶಸ್ತಿ ನೀಡಿ ಗೌರವಿಸುವಂತೆ ಪುತ್ತೂರು ಭಾಗದ ಜನರು ಒತ್ತಾಯಿಸಿದ್ದಾರೆ.
ಶೋಭಾಕ್ಕ ಅವರ ಸಾಹಸದ ಕುರಿತು ಈಗಾಗಲೇ ಜಾಲತಾಣದಲ್ಲಿ ಕಳೆದ ಎರಡು ದಿನಗಳಿಂದ ವೀಡಿಯೋ ಭಾರೀ ಸದ್ದು ಮಾಡುತ್ತಿದೆ. ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ತಿಳಿಸಿ ಶೋಭಾಕ್ಕ ಅವರಿಗೆ ಶೌರ್ಯ ಪ್ರಶಸ್ತಿ ನೀಡುವಂತೆ ಒತ್ತಾಯಿಸಬೇಕು ಎಂದು ಜಾಲತಾಣದಲ್ಲಿ ಅಭಿಪ್ರಾಯ ಕೇಳಿ ಬಂದಿದೆ. ಅಷ್ಟೇ ಅಲ್ಲದೇ, ಶಾಸಕರಿಗೆ ಈಗಾಗ್ಲೇ ಈ ವಿಷ್ಯ ತಲುಪಿರುವ ಸಾಧ್ಯತೆಯಿದ್ದು ಇಂತಹ ವಿಶೇಷ ಸಾಹಸ ಮೆರೆದ ಶೋಭಾ ಅವರನ್ನು ಶಾಸಕರು ಖಂಡಿತಾವಾಗಿಯೂ ಗುರುತಿಸುತ್ತಾರೆ ಅನ್ನೋ ಆಶಾಭಾವನೆಯನ್ನು ಜಾಲತಾಣದಲ್ಲಿ ಪುತ್ತೂರು ಭಾಗದ ಜನರು ವ್ಯಕ್ತಪಡಿಸಿದ್ದಾರೆ.