.jpg)
Puttur | ಪುತ್ತೂರಿನ ಅಜೇಯನಗರದಲ್ಲಿ ಪರವಾನಿಗೆ ಇಲ್ಲದ 'ಓಝೋನ್ ಪ್ಯಾಲೇಸ್'! ನೋಟೀಸ್ ನೀಡಿದ್ರೂ ಡೋಂಟ್ ಕೇರ್!?
ಪುತ್ತೂರು: ಇಲ್ಲಿನ
ಪಡ್ನೂರು ಗ್ರಾಮದ ಜನವಸತಿ ಪ್ರದೇಶದಲ್ಲಿರುವ ಸಭಾಂಗಣವೊಂದು 4 ವರ್ಷಗಳಿಂದ ಅನಧಿಕೃತವಾಗಿ ನಡೆಯುತ್ತಿದ್ದು,
ಪುತ್ತೂರು ನಗರಸಭೆಯ ನೋಟೀಸ್ ಬಳಿಕವೂ ತನ್ನ ಕಾರ್ಯ ಚಟುವಟಿಕೆ ಮುಂದುವರೆಸಿದ್ದು, ಆ ಭಾಗದ ಗ್ರಾಮಸ್ಥರು
ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಪುತ್ತೂರು ಸಹಾಯಕ ಆಯುಕ್ತ, ಪುತ್ತೂರು
ನಗರಸಭೆ ಪೌರಾಯುಕ್ತರಿಗೆ ಸಾರ್ವಜನಿಕರು ಅಜೇಯನಗರದ ʼಓಝೋನ್ ಪ್ಯಾಲೇಸ್ʼ ಸಭಾಂಗಣದ ವಿರುದ್ಧ ದೂರು
ನೀಡಿದ್ದರು. ಈ ಸಭಾಂಗಣದಿಂದ ಪರಿಸರದಲ್ಲಿ ಅನಗತ್ಯ ಅಶಾಂತಿ ಹಾಗೂ ಪರಿಸರ ಮಾಲಿನ್ಯ ಹೆಚ್ಚಿದೆ ಎಂದು
ಲಿಖಿತವಾಗಿ ದೂರಿತ್ತಿದ್ದರು.
ಈ ಕುರಿತಂತೆ
ಕಳೆದ ಸೆಪ್ಟಂಬರ್ 21 ರಂದು ಓಝೋನ್ ಪ್ಯಾಲೇಸ್ ಮಾಲೀಕ ಸಂಶುದ್ದೀನ್ ಎಂಬವರಿಗೆ ನಗರಸಭೆ ಪೌರಾಯುಕ್ತರು
ನೀಡಲಾದ ನೋಟೀಸಿನಂತೆ ತಕ್ಷಣವೇ ಅನಧಿಕೃತ ಕಟ್ಟಡವಾದ ಓಝೋನ್ ಪ್ಯಾಲೇಸ್/ಹೌಸ್‌ನಲ್ಲಿ ಯಾವುದೇ ಚಟುವಟಿಕೆ
ನಡೆಸದಂತೆ ಸೂಚನೆ ನೀಡಿದ್ದರು. ಆದರೆ, ಅದಾಗ್ಯೂ ಈಗಲೂ ಸದರಿ ಇರುವಂತಹ ಪರವಾನಿಗೆ ರಹಿತ ಕಟ್ಟಡ ʼಓಝೋನ್
ಪ್ಯಾಲೇಸ್ʼ ಸಭಾಂಗಣದಲ್ಲಿ ಮದುವೆ, ಮೆಹಂದಿ, ಬರ್ತ್ ಡೇ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆಯುತ್ತಿವೆ
ಎಂದು ಅಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ. ಅದಕ್ಕೆ ಪೂರಕ ದಾಖಲೆಗಳನ್ನು ʼದಿ ನ್ಯೂಸ್ ಅವರ್ʼಗೆ
ನೀಡಿದ್ದಾರೆ.
ಸದ್ಯದ ಬೆಳವಣಿಗೆಯಲ್ಲಿ ಈ ಕಟ್ಟಡದ ಮಾಲೀಕ ಸಂಶುದ್ದೀನ್ ವಾಣಿಜ್ಯ ಉದ್ದೇಶಕ್ಕಾಗಿ ಅನುಮತಿ ಕೋರಿ ಅರ್ಜಿ ಸಲ್ಲಿಸಿರುತ್ತಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಭೂ ಪರಿವರ್ತನೆಗೊಳಿಸಿ ವಾಣಿಜ್ಯ ಬಳಕೆಗೆ ಅವಕಾಶ ನೀಡದಂತೆ ಸದ್ರಿ ಕಟ್ಟಡದ ವಿರುದ್ಧ ಅಜೇಯನಗರದ ಜನರು ಪುತ್ತೂರು ನಗರಸಭೆ ಪೌರಾಯುಕ್ತ, ಪುತ್ತೂರು ತಹಶೀಲ್ದಾರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಸ್ಥಳೀಯರ ಆತಂಕವೇನು?
ಪಡ್ನೂರು ಗ್ರಾಮದ
ಅಜೇಯನಗರವು ಸುಮಾರು 50 ರಷ್ಟು ಮನೆಗಳನ್ನು ಹೊಂದಿರುವಂತಹ ಜನವಸತಿ ಪ್ರದೇಶವಾಗಿದೆ. ʼಓಝೋನ್ ಪ್ಯಾಲೇಸ್ʼನಲ್ಲಿ
ರಾತ್ರಿ ಹೊತ್ತು ಹೆಚ್ಚಾಗಿ ಕಾರ್ಯಕ್ರಮಗಳು ಆಯೋಜಿಸಲಾಗುತ್ತಿದ್ದು, ತಡರಾತ್ರಿವರೆಗೆ ಡಿಜೆ ಸಂಗೀತ,
ನೃತ್ಯಗಳು ನಡೆಯುತ್ತದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು, ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಲೇ
ಇದೆ. ಜೊತೆಗೆ ವಾಹನಗಳ ಸಂಚಾರದಿಂದ ಅನಗತ್ಯ ದಟ್ಟಣೆ, ಕರ್ಕಶ ಹಾರ್ನ್, ನೀರಿನ ಬಾಟಲಿ ಹಾಗೂ ಮದ್ಯದ
ಬಾಟಲಿಗಳನ್ನು ಪರಿಸರದ ಎಲ್ಲೆಂದರಲ್ಲಿ ಎಸೆಯುವುದನ್ನು ಮಾಡುತ್ತಿದ್ದು, ಇದು ಪರಿಸರದ ನೈರ್ಮಲ್ಯವನ್ನು
ಕೆಡಿಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹಾಗಾಗಿ ಈ ಪರವಾನಿಗೆ ಇಲ್ಲದ ʼಓಝೋನ್ ಪ್ಯಾಲೇಸ್ʼ
ಮುಚ್ಚಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಸಂಶುದ್ದೀನ್
ಅವರು ʼಓಝೋನ್ ಹೌಸ್ʼ ಹೆಸರಿನಲ್ಲಿ ನಿರ್ಮಿಸಿದ ಕಟ್ಟಡವನ್ನೇ 4 ವರ್ಷಗಳ ಹಿಂದೆ ʼಓಝೋನ್ ಪ್ಯಾಲೇಸ್ʼ
ಆಗಿಸಿ ಅನಧಿಕೃತವಾಗಿ ಅದರಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಬಾಡಿಗೆ ನೀಡುತ್ತಾ ಬರುತ್ತಿದ್ದಾರೆ ಅನ್ನೋದು
ಸಾರ್ವಜನಿಕರ ಗಂಭೀರ ಆರೋಪವಾಗಿದೆ.