ಮಂಗಳೂರು: ಆಶಿತ್ ಪಿರೇರಾ ಪರ ಡಿಕೆಶಿ ಜೊತೆ ಪೂಜಾರಿ ಮಾತುಕತೆ; ಲೋಬೋಗೆ ‘ಕೈ‘ ತಪ್ಪುತ್ತಾ ಟಿಕೆಟ್!?
ಮಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ಯೂತ್ ಕಾಂಗ್ರೆಸ್ ಮುಖಂಡ ಆಶಿತ್ ಪಿರೇರಾ ಪರ ಕೆಪಿಸಿಸಿ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿದ್ದು, ಹೊಸ ಚರ್ಚೆಗೆ ನಾಂದಿ ಹಾಕಿದೆ.
ಹೀಗಾಗಿ
ಮಂಗಳೂರು ದಕ್ಷಿಣದಲ್ಲಿ ಲೋಬೋಗೆ ತನ್ನದೇ ಪಕ್ಷದಲ್ಲಿ ಪ್ರತಿಸ್ಪರ್ಧಿ ಎದುರಾಗಿದ್ದು ಬದಲಾವಣೆಯನ್ನು ನಿರೀಕ್ಷಿಸುವಂತಾಗಿದೆ. ಕಾಂಗ್ರೆಸ್ ಪಕ್ಷದ ಪಾಲಿಗೆ ಕ್ರೈಸ್ತ ಮೀಸಲಿನಂತಿರುವ
ಮಂಗಳೂರು ದಕ್ಷಿಣದಲ್ಲಿ ಮಾಜಿ ಶಾಸಕ ಜೆಆರ್ ಲೋಬೋ ಸಹಿತ ಹಲವು ಪ್ರಬಲ ಆಕಾಂಕ್ಷಿಗಳಿದ್ದಾರೆ. ಆದರೆ,
ಈ ಮಧ್ಯೆ ಕಾಂಗ್ರೆಸ್ ಯುವಕರಿಗೆ ಮಣೆ ಹಾಕುವ ಸಾಧ್ಯತೆ ಹಿನ್ನೆಲೆ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಶೀತ್ ಪಿರೇರಾ ಟಿಕೆಟ್ ಗಾಗಿ ದೊಡ್ಡ ಮಟ್ಟದಲ್ಲಿ ಕಸರತ್ತು ನಡೆಸಿದ್ದಾರೆ.
ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಪ್ರಭಾವ ಬಳಸಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಅವರಿಗೆ ಕರೆ ಮಾಡಿಸಿ ಟಿಕೆಟ್ ಕೊಡಿಸಲು ಮನವಿ ಮಾಡಿದ್ದಾರೆ. ಈ ಕುರಿತ ವೀಡಿಯೋ ತುಣುಕು ಕೂಡಾ ವೈರಲ್ ಆಗಿದ್ದು, ಹಿರಿಯ ನಾಯಕನ ಮಾತಿಗೆ ಮಣೆ ಹಾಕಿದ್ದಲ್ಲಿ ಸುಲಭವಾಗಿ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿ ಆಶಿತ್ ಪಿರೇರಾ ಇದ್ದಾರೆ.
‘‘ನನ್ನಲ್ಲಿಗೆ
ಯೂತ್ ಕಾಂಗ್ರೆಸ್ ಲೀಡರ್ ಆಶೀತ್ ಪಿರೇರಾ ಬಂದಿದ್ದಾರೆ. ಅವರಿಗೆ ಮಂಗಳೂರು ದಕ್ಷಿಣಕ್ಕೆ ಏನಾದ್ರೂ ಸಹಾಯ ಮಾಡಲು ಸಾಧ್ಯ ಉಂಟಾ? ನೀವೇ ಸುಧಾರಿಸಿ, ಜೆ.ಆರ್.ಲೋಬೋ
ಸ್ಥಾನಕ್ಕೆ, ಆಶೀತ್ ಪಿರೇರಾ ಕೂಡ ಕ್ರಿಶ್ಚಿಯನ್..‘‘ ಎಂದು ಮಾತುಕತಡ ನಡೆಸಿದ್ದಾರೆ. ಇದಕ್ಕೆ
ಡಿಕೆಶಿ ಕೂಡಾ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ
ಎನ್ನಲಾಗಿದೆ.
Also Read: ಮಂಗಳೂರು ದಕ್ಷಿಣ: ಲೋಬೋಗೆ ಟಿಕೆಟ್ ಕೊಟ್ಟರೆ ಕಾಮತ್ ಗೆ ಲಾಭ!?
ಸದ್ಯ ಮಂಗಳೂರು ದಕ್ಷಿಣ ಟಿಕೆಟ್ ಆಕಾಂಕ್ಷಿಗಳಾಗಿರುವ ಮಾಜಿ ಶಾಸಕ ಜೆ.ಆರ್.ಲೋಬೋ ಮತ್ತು ಐವನ್ ಡಿಸೋಜಾ, ಶಾಲೆಟ್ ಪಿಂಟೋ ಹಾದಿಯಲ್ಲಿ ಆಶಿತ್ ಪಿರೇರಾ ಕೂಡಾ ಪ್ರಬಲ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದಾರೆ. ಜೆಆರ್ ಲೋಬೋ ಕಳೆದ ಅವಧಿಯಲ್ಲಿ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ವಿರುದ್ಧ ಪರಾಭವಗೊಂಡಿದ್ದರು. ಈ ಬಾರಿ ಮತ್ತೆ ಲೋಬೋಗೆ ಟಿಕೆಟ್ ನೀಡಿದ್ದಲ್ಲಿ ಸೋಲುವುದಾಗಿ ಹಲವು ಕಾಂಗ್ರೆಸ್ ನಾಯಕರೇ ಹೇಳಿಕೊಂಡು ಬರುತ್ತಿದ್ದಾರೆ ಎನ್ನಲಾಗಿದೆ.
ವೀಡಿಯೋ ವೀಕ್ಷಿಸಿ