ಕೊನೆಗೂ ಶಿಹಾಬ್ ಚೊಟ್ಟೂರಿಗೆ ಪಾಕ್ ವೀಸಾ; ನಾಳೆಯಿಂದಲೇ ಮಕ್ಕಾ ಯಾತ್ರೆ ಮರು ಆರಂಭ
Sunday, February 5, 2023
ದೆಹಲಿ: ವೀಸಾ ಸಮಸ್ಯೆಯಿಂದಾಗಿ ತಿಂಗಳ ಕಾಲ ಪಾಕಿಸ್ತಾನ ಗಡಿ ಪ್ರದೇಶವಾದ ಪಂಜಾಬ್ ನಲ್ಲೇ ಬಾಕಿಯಾಗಿದ್ದ ಕೇರಳ ಮೂಲದ ಮಕ್ಕಾ ಯಾತ್ರಿ ಶಿಹಾಬ್ ಚೊಟ್ಟೂರು ನಾಳೆಯಿಂದ ಮತ್ತೆ ತನ್ನ ಕಾಲ್ನಡಿಗೆ ಪಯಣವನ್ನು ಮುಂದುವರೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ವರ್ಷ ಜೂನ್ ನಿಂದ ಆರಂಭವಾಗಿದ್ದ ಕಾಲ್ನಡಿಗೆ ಯಾತ್ರೆಯು ವರ್ಷಾಂತ್ಯಕ್ಕೆ ಮೊದಲೇ ಪಾಕಿಸ್ತಾನ ಗಡಿ ತಲುಪಿತ್ತು. ಆದರೆ ಪಾಕಿಸ್ತಾನದಿಂದ ವೀಸಾ ನಿರಾಕರಿಸಲ್ಪಟ್ಟ ಹಿನ್ನೆಲೆ ಗಡಿ ರಾಜ್ಯವಾದ ಭಾರತದ ಪಂಜಾಬ್ ನಲ್ಲಿ ಉಳಿಯುವಂತಾಗಿತ್ತು. ಇದೀಗ ಕೊನೆಗೂ ಶಿಹಾಬ್ ಅವರಿಗೆ ವೀಸಾ ಸಿಕ್ಕಿರುವ ಮಾಹಿತಿ ದೊರೆತಿದ್ದು, ಸೋಮವಾರದಿಂದಲೇ ಅವರ ಪಯಣ ಮುಂದುವರೆಯಲಿದೆ ಎನ್ನಲಾಗಿದೆ.
ಶಿಹಾಬ್ ಅವರು ಭಾರತ, ಪಾಕಿಸ್ತಾನ, ಇರಾನ್, ಇರಾಕ್, ಕುವೈಟ್ ಮೂಲಕ ಸೌದಿ ಅರೇಬಿಯಾ ಪ್ರವೇಶಿಸಿ ಈ ವರ್ಷದ ಹಜ್ಜ್ ಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಅತ್ಯಂತ ಸುದೀರ್ಘ 8640 ಕಿಲೋ ಮೀಟರ್ ಇದಕ್ಕಾಗಿ ಅವರು ಕಾಲ್ನಡಿಗೆಯಲ್ಲಿ ಕ್ರಮಿಸಬೇಕಿದೆ.