-->
ಮಂಗಳೂರು: ಟ್ರಾಫಿಕ್ ರಿಯಾಯಿತಿ ದಂಡ ಪಾವತಿಲು ಅಂಚೆ ಕಚೇರಿಯಲ್ಲೂ ಸಾಧ್ಯ

ಮಂಗಳೂರು: ಟ್ರಾಫಿಕ್ ರಿಯಾಯಿತಿ ದಂಡ ಪಾವತಿಲು ಅಂಚೆ ಕಚೇರಿಯಲ್ಲೂ ಸಾಧ್ಯ



ಮಂಗಳೂರು: ಕರ್ನಾಟಕ ರಾಜ್ಯಾದ್ಯಂತ ಫೆಬ್ರವರಿ 11ರ ವರೆಗೆ ಘೋಷಿಸಲಾಗಿರುವ  ಟ್ರಾಫಿಕ್‌ ದಂಡದಲ್ಲಿನ  50% ರಿಯಾಯಿತಿ ಸೌಲಭ್ಯವು ,ಮಂಗಳೂರು ನಗರ ಪೋಲೀಸ್‌ ಇ ಚಲನ್‌ ಮೂಲಕ‌ ವಿಧಿಸಿದ ದಂಡ‌ಕ್ಕೂ‌ಅನ್ವಯವಾಗಲಿದೆ. ಈ ಮೊತ್ತವನ್ನು ಸ್ಥಳೀಯ ಅಂಚೆ ಕಚೇರಿ ಮೂಲಕವೂ ಪಾವತಿಸಬಹುದಾಗಿದೆ ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕ ಶ್ರೀಹರ್ಷ ತಿಳಿಸಿದ್ದಾರೆ. 

ಮಂಗಳೂರು ನಗರ ಪೋಲೀಸ್ ನಿಂದ ಈವರೆಗೆ ಪಡೆದ‌ ಇ ಚಲಾನ್ ಗಳನ್ನು ಈ ರಿಯಾಯಿತಿ ದರದಲ್ಲಿ 11.2.2023ರವೆರೆಗೆ  ಸಾರ್ವಜನಿಕರು‌ ಕರ್ನಾಟಕದ ಯಾವುದೇ ಊರಿನಲ್ಲಿ  ತಮ್ಮ ಸಮೀಪದ ಇಲಾಖಾ ಅಂಚೆ ಕಚೇರಿಗಳಲ್ಲಿ ಪಾವತಿ ಮಾಡಬಹುದಾಗಿದೆ. ಸಾರ್ವಜನಿಕರು‌ ತಮಗೆ ಬಂದಿದ್ದ‌ ಇ ಚಲಾನ್ ಕಳೆದುಕೊಂಡಿದ್ದಲ್ಲಿ ಕೇವಲ ತಮ್ಮ ವಾಹನದ ರಿಜಿಸ್ಟ್ರೇಷನ್‌ ಸಂಖ್ಯೆಯನ್ನು ಉಲ್ಲೇಖಿಸಿ ಕೂಡ ಅಂಚೆ ಕಚೇರಿಗಳಲ್ಲಿ ದಂಡ ಪಾವತಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆದರೆ, ಅಂಚೆ ಕಚೇರಿಗಳಲ್ಲಿ ಮಂಗಳೂರು ನಗರ ಪೋಲೀಸ್‌ನಿಂದ ವಿಧಿಸಲಾದ‌ ದಂಡ ಸ್ವೀಕಾರ ಮಾತ್ರ ಸಾಧ್ಯವಿದೆ. ಬೇರೆ ನಗರಗಳ ಪೋಲಿಸ್ ವಿಧಿಸಿದ ದಂಡ‌ ಪಾವತಿಗೆ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article