
RAGGING: ಚಡ್ಡಿ ಬಿಚ್ಚುವಂತೆ ನರ್ಸಿಂಗ್ ವಿದ್ಯಾರ್ಥಿಗೆ ರ್ಯಾಗಿಂಗ್!!
ಮಂಗಳೂರು: ನಗರದ ಹೊರವಲಯದ ಪ್ರತಿಷ್ಠಿತ ಕಾಲೆಜೊಂದರಲ್ಲಿ ನರ್ಸಿಂಗ್ ವಿದ್ಯಾರ್ಥಿಯೋರ್ವನಿಗೆ ಹಿರಿಯ ವಿದ್ಯಾರ್ಥಿಗಳು ಸೇರಿ ರ್ಯಾಗಿಂಗ್ ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ. ನರ್ಸಿಂಗ್ ವಿದ್ಯಾರ್ಥಿಯನ್ನ ಡ್ಯಾನ್ಸ್ ಮಾಡಲು ಹೇಳಿದ ಹಿರಿಯ ವಿದ್ಯಾರ್ಥಿಗಳು ಬಳಿಕ ಚಡ್ಡಿ ಬಿಚ್ಚುವಂತೆ ಹೇಳಿ ತೀರಾ ಅಮಾನುಷವಾಗಿ ನಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ರ್ಯಾಗಿಂಗ್ ಗೆ ಒಳಗಾದ ವಿದ್ಯಾರ್ಥಿ ಹಾಗೂ ಕಾಲೇಜಿನ ಕೆಲ ವಿದ್ಯಾರ್ಥಿಗಳು ಸೇರಿ ದೂರು ನೀಡಿದ್ದಾರೆ. ಇದಾದ ಬಳಿಕ ರ್ಯಾಗಿಂಗ್ ಮಾಡಿದ ವಿದ್ಯಾರ್ಥಿಗಳನ್ನ ಪೊಲೀಸ್ ಠಾಣೆಗೆ ಕರೆಸಿಕೊಂಡಿದ್ದಾರೆ. ಪೊಲೀಸರು ರ್ಯಾಗಿಂಗ್ ಮಾಡಿದ ವಿದ್ಯಾರ್ಥಿಗಳನ್ನ ಸರಿಯಾಗಿ ಬೆಂಡೆತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಾಲೇಜಿನಲ್ಲಿ ಚಡ್ಡಿ ತೆಗೆಯುವಂತೆ ಹೇಳಿದ ಹಿರಿಯ ವಿದ್ಯಾರ್ಥಿಗಳನ್ನ ಪೊಲೀಸ್ ಠಾಣೆಯಲ್ಲಿ ಚಡ್ಡಿಯಲ್ಲಿ ಕುಳ್ಳಿರಿಸಲಾಗಿದೆ ಎಂದು ತಿಳಿದುಬಂದಿದೆ. ರ್ಯಾಗಿಂಗ್ ಗೆ ಒಳಗಾದ ನರ್ಸಿಂಗ್ ವಿದ್ಯಾರ್ಥಿಯ ಸಂಬಂಧಿಕರೋರ್ವರು ಪೊಲೀಸ್ ಅಧಿಕಾರಿಯಾಗಿದ್ದಾರೆ.