
BJP: ಜೈ ಶ್ರೀರಾಮ್ ಹೇಳಿ ಶಾಲು ತಿರುಗಿಸೋದು ಹಿಂದುತ್ವ ಅಲ್ಲ: ಡಾ.ಪ್ರಸಾದ್ ಭಂಡಾರಿ
ಪುತ್ತೂರು: ಈಗಿನ ಮಕ್ಕಳಿಗೆ ಜೈ ಶ್ರೀರಾಮ್ ಅಂದ್ರೆ ಹಿಂದುತ್ವ ಅಂತಾಗಿದೆ ಆದ್ರೆ ಅದು ಹಿಂದುತ್ವ ಅಲ್ಲ.. ನಾವು ಅಂದು ಕಷ್ಟ ಪಟ್ಟದ್ದು ನಿಜವಾದ ಹಿಂದುತ್ವ ಅಂತ ಹಿರಿಯ ಬಿಜೆಪಿ ಮುಖಂಡ ಪುತ್ತೂರಿನ ಡಾ.ಎಂ.ಕೆ. ಪ್ರಸಾದ್ ಭಂಡಾರಿ ಹೇಳಿದ್ದಾರೆ.
ವಾಜಪೇಯಿ ಜನ್ಮಶತಾಬ್ದಿಯ ಹಿನ್ನಲೆಯಲ್ಲಿ ಬಿಜೆಪಿ ನಾಯಕರು ಡಾ. ಪ್ರಸಾದ್ ಭಂಡಾರಿಯವರನ್ನು ಮನೆಯಲ್ಲೇ ಸನ್ಮಾನಿಸಿದ್ದು, ಈ ವೇಳೆ ಈ ವಿಚಾರ ಪ್ರಸ್ತಾಪಿಸಿದ್ದಾರೆ. ನಿಜವಾದ ಹಿಂದುತ್ವ ಯಾರಿಗೂ ಗೊತ್ತಿಲ್ಲದೆ ಎಲ್ಲರೂ ತಾವೇ ದೊಡ್ಡ ಜನ ಅಂತ ಹೇಳ್ತಾರೆ. ಜೈ ಶ್ರೀರಾಮ್ ಅಂತ ಕೇಸರಿ ಶಾಲು ಕೈಲಿ ತಿರುಗಿಸಿದ್ರೆ ಹಿಂದುತ್ವ ಆಗುವುದಿಲ್ಲ ಅಂತ ಅವರು ಹೇಳಿದ್ದಾರೆ. ಹಿಂದುತ್ವಕ್ಕೆ ತ್ಯಾಗ ಬೇಕು , ಸರ್ವಸ್ವವನ್ನು ಧಾನ ಮಾಡುವ ಗುಣ ಇರಬೇಕು ಜೊತೆಗೆ ದೇಶದ ಮೇಲೂ ಗೌರವ ಇರಬೇಕು ಎಂದು ಅವರು ವ್ಯಾಕ್ಯಾನಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, 1991 ರಲ್ಲಿ ಪುತ್ತೂರಿನಲ್ಲಿ ಬಿಜೆಪಿ ಯಾವ ಪರಿಸ್ಥಿತಿಯಲ್ಲಿ ಇತ್ತೋ ಅದೇ ಪರಿಸ್ಥಿತಿಯಲ್ಲಿ ಈಗ ಇದೆ ಎಂದಿದ್ದಾರೆ. ಆದ್ರೆ ಅಂದು ನಮ್ಮ ಛಲದಿಂದ ಬಿಜೆಪಿ 400 ಮತಗಳಿಂದ ಗೆದ್ದು ಡಿವಿ ಸದಾನಂದ ಗೌಡರು ಶಾಸಕರಾದ್ರು. ದೈವ ಬಲ ಇದದ ಕಾರಣ ಆ ಸಮಯದಲ್ಲಿ ನಡೆದ ಜಯಂತ ರೈ ಕೊಲೆ ಕೂಡಾ ಬಿಜೆಪಿ ಗೆಲುವಿಗೆ ಪರೋಕ್ಷ ಕಾರಣ ಅಂತ ಹೇಳಿದ್ದಾರೆ. ಅಂದಿನ ಘಟನೆಯನ್ನು ನೆನಪಿಸಿದ ಪ್ರಸಾದ್ ಭಂಡಾರಿ ಜಯಂತ ರೈ ಇದ್ದಿದ್ದರೆ ಬೂತ್ ಕ್ಯಾಪ್ಚರ್ ಮಾಡಿ ಬಿಜೆಪಿಯನ್ನು ಅಂದೂ ಕೂಡಾ ಸೋಲಿಸುತ್ತಿದ್ದ ಎಂದು ಹೇಳಿದ್ದಾರೆ.