.jpeg)
BELTHANGADY: ಬೆಳ್ತಂಗಡಿಯ ಪ್ರಸನ್ನ ಎಜುಕೇಷನ್ ಟ್ರಸ್ಟ್ ನಿಂದ ಅಕ್ರಮ ಗಣಿಗಾರಿಕೆ!!
ಬೆಳ್ತಂಗಡಿ: ಕಾಂಗ್ರೆಸ್ ಮುಖಂಡನ ದರ್ಬಾರ್ ನಿಂದ ಅಕ್ರಮ ಕಲ್ಲು ಗಣಿಗಾರಿಕೆ ಕೆಲಸದಿಂದ ಹಲವು ಮನೆಗಳಿಗೆ ಹಾನಿಯಾದ ಘಟನೆ ಪ್ರಸನ್ನ ಬಳಿ ನಡೆದಿದೆ. ಈ ಬಗ್ಗೆ ಲಾಯಿಲ ಗ್ರಾಮ ಪಂಚಾಯತಿಗೆ ದೂರು ನೀಡಿದ್ರೂ ಕ್ಯಾರೆ ಮಾಡುತ್ತಿಲ್ಲ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದಲ್ಲಿರುವ ಪ್ರಸನ್ನ ಎಜುಕೇಶನ್ ಟ್ರಸ್ಟ್ (ರಿ) ಆಡಳಿತ ಮಂಡಳಿ ಮಹಿಳಾ ಹಾಸ್ಟೆಲ್ ಕಟ್ಟಡ ನಿರ್ಮಾಣ ಮಾಡಲು ಕಲ್ಲುಗಳನ್ನು ಅಕ್ರಮವಾಗಿ ಜಿಲೆಟಿನ್ ಕಡ್ಡಿಗಳನ್ನು ಬಳಸಿ ಸ್ಫೋಟ ಮಾಡಿ ಸಮತಟ್ಟು ಮಾಡುತ್ತಿದ್ದೆ ಇದರಿಂದ ಸ್ಥಳೀಯ ಹಲವು ಮನೆಗಳು ಬಿರುಕು ಬಿಟ್ಟಿದ್ದು. ಬಾವಿ ಕೂಡ ಕುಸಿದು ಬಿದ್ದಿದೆ. ಪಂಚಾಯತ್ ಹಾಗೂ ಇತರ ಅಧಿಕಾರಿಗಳಿಗೆ ದೂರು ನೀಡಿದ್ರೂ ಕ್ಯಾರೆ ಮಾಡಿತ್ತಿಲ್ಲ ಎನ್ನುತ್ತಾರೆ ಊರವರು. ಈ ಬಗ್ಗೆ ಟ್ರಸ್ಟ್ ನ ಮುಖ್ಯಸ್ಥ ಕಾಂಗ್ರೆಸ್ ಮುಖಂಡ ಗಂಗಾಧರ ಗೌಡರ ಬಳಿ ಮನೆ ಮಂದಿ ಹೋಗಿ ವಿಚಾರ ತಿಳಿಸಿದಾಗ ನೀವು ನಿಮ್ಮ ಮನೆಯ ಕೆಲಸ ಮಾಡಿಸಿ 10,000 ಕೊಡುತ್ತೇನೆ ಎಂದಿದ್ದಾರಂತೆ ಆದ್ರೆ ಇವರ ಮನೆ ಕೆಲಸಕ್ಕೆ ಜಾಸ್ತಿ ಖರ್ಚು ಇದ್ದು ಇದನ್ನು ಯಾರು ಭರಿಸಬೇಕು ಎಂಬುವುದು ನೊಂದ ಮನೆಯವರ ಅಳಲು.ಮಹಿಳಾ ಹಾಸ್ಟೆಲ್ ಕಟ್ಟಡ ನಿರ್ಮಾಣ ಮಾಡಲು ಗ್ರಾಮ ಪಂಚಾಯತಿನಿಂದ ಅನುಮತಿ ಪತ್ರ ಪಡೆದುಕೊಂಡಿಲ್ಲ ಎನ್ನಲಾಗಿದೆ.
ಅಕ್ರಮ ಗಣಿಗಾರಿಕೆ ಪಕ್ಕದಲ್ಲಿರುವ ರವಿ ನಾಯ್ಕ ಅವರ ಬಾವಿ ಜಿಲೆಟಿನ್ ಸ್ಫೋಟದಿಂದ ಕುಸಿದು ಬಿದ್ದಿದ್ದು .ಮನೆ ಗೋಡೆ ಕೂಡ ಬಿರುಕು ಬಿಟ್ಟಿದೆ ಅದರ ಪಕ್ಕದ ಲತೀಫ್ ಅವರ ಮನೆಯ ಗೋಡೆ , ಸಿಮೆಂಟ್ ಸೀಟ್ ಕೂಡ ಬಿರುಕು ಬಿಟ್ಟು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ.
ಊರವರ ದೂರಿನ ಮೇರೆಗೆ ಘಟನಾ ಸ್ಥಳಕ್ಕೆ ಫೆ.19 ರಂದು ಬೆಳ್ತಂಗಡಿ ತಹಶಿಲ್ದಾರ್ ಪೃಥ್ವಿ ಸಾನಿಕಂ ಭೇಟಿ ನೀಡಿ ವರದಿ ಮಾಡಿಕೊಂಡಿದ್ದು. ಈ ಬಗ್ಗೆ ಗಣಿ & ಭೂ ಇಲಾಖೆಗೆ ಹಾಗೂ ಲಾಯಿಲ ಗ್ರಾಮ ಪಂಚಾಯತ್ ಗೆ ವರದಿ ಕಳುಹಿಸಿದ್ದಾರೆ.
ಗಣಿ, ಪೊಲೀಸ್ ಇಲಾಖೆ ಜಂಟಿ ಸ್ಥಳ ಪರಿಶೀಲನೆ:
ಅಕ್ರಮ ಕಲ್ಲು ಗಣಿಗಾರಿಕೆ ಕೆಲಸದಿಂದ ಹಲವು ಮನೆಗಳಿಗೆ ಹಾನಿಯಾದ ಘಟನಾ ಸ್ಥಳಕ್ಕೆ ಗಣಿ ಇಲಾಖೆ , ಬೆಳ್ತಂಗಡಿ ಪೊಲೀಸರು, ಪಂಚಾಯತ್ ಅಧಿಕಾರಿಯಳು ಜಂಟಿಯಾಗಿ ಫೆ.20 ರಂದು ಪರಿಶೀಲನೆ ಮಾಡಿ ಮಹಜರು ನಡೆಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದಲ್ಲಿರುವ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಗಂಗಾಧರ ಗೌಡರ ಪ್ರಸನ್ನ ಎಜುಕೇಶನ್ ಟ್ರಸ್ಟ್ (ರಿ) ಆಡಳಿತ ಮಂಡಳಿ ಗ್ರಾಮ ಪಂಚಾಯತ್ ನಿಂದ ಅನುಮತಿ ಪಡೆಯದೆ ಮಹಿಳಾ ಹಾಸ್ಟೆಲ್ ಕಟ್ಟಡ ನಿರ್ಮಾಣ ಮಾಡಲು ಕಲ್ಲುಗಳನ್ನು ಅಕ್ರಮವಾಗಿ ಜಿಲೆಟಿನ್ ಕಡ್ಡಿಗಳನ್ನು ಬಳಸಿ ಸ್ಫೋಟ ಮಾಡಿದ್ದರಿಂದ ಸ್ಥಳೀಯ ಹಲವು ಮನೆಗಳು ಬಿರುಕು ಬಿಟ್ಟಿದೆ.
ಅಕ್ರಮ ಗಣಿಗಾರಿಕೆ ಪಕ್ಕದಲ್ಲಿರುವ ರವಿ ನಾಯ್ಕ ಅವರ ಬಾವಿ ಜಿಲೆಟಿನ್ ಸ್ಫೋಟದಿಂದ ಕುಸಿದು ಬಿದ್ದಿದ್ದು .ಮನೆ ಗೋಡೆ ಕೂಡ ಬಿರುಕು ಬಿಟ್ಟಿದೆ ಅದರ ಪಕ್ಕದ ಲತೀಫ್ ಅವರ ಮನೆಯ ಗೋಡೆ , ಸಿಮೆಂಟ್ ಸೀಟ್ ಕೂಡ ಬಿರುಕು ಬಿಟ್ಟು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ.
ಫೆ.19 ರಂದು ಬೆಳ್ತಂಗಡಿ ತಹಶಿಲ್ದಾರ್ ಪೃಥ್ವಿ ಸಾನಿಕಂ ಭೇಟಿ ನೀಡಿ ಗಣಿ ಇಲಾಖೆಗೆ ಹಾಗೂ ಲಾಯಿಲ ಗ್ರಾಮ ಪಂಚಾಯತ್ ಗೆ ವರದಿ ಮಾಡಿದ್ದರು. ಅದರಂತೆ ಫೆ.20 ರಂದು ಸಂಜೆ ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ವಸುಧಾ, ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಪುರ್ ಮಠ್ , ಲಾಯಿಲ ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ ಮಾಡಿ ಸ್ಥಳ ಪರಿಶೀಲನೆ ನಡೆಸಿ ಮಹಜರು ನಡೆಸಿದ್ದಾರೆ. ಕ್ರಿಮಿನಲ್ ಪ್ರಕರಣದಿಂದ ಬಚ್ಚವಾಗಲು ಕಲ್ಲುಗಳನ್ನು ಸ್ಫೋಟ ಮಾಡಿದ ಜಾಗಕ್ಕೆ ಆಡಳಿತ ಮಂಡಳಿ ಮಣ್ಣು ಹಾಕಿ ಸಮತಟ್ಟು ಮಾಡಿರುವುದು ಬೆಳಕಿಗೆ ಬಂದಿದೆ.ಆದ್ರೆ ಹೊರತೆಗೆದ ಕಲ್ಲುಗಳು ಪತ್ತೆಯಾಗಿದೆ. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವರದಿ ತಯಾರಿಸಿ ಬೆಳ್ತಂಗಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಲಿದ್ದಾರೆ.