ಪ್ರವೀಣ್ ನೆಟ್ಟಾರ್ ಹ*ತ್ಯೆ ಪ್ರಕರಣ: ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ NIA ದಾಳಿ!
Thursday, December 5, 2024
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಎನ್‌ಐಎ ದಾಳಿ ಮುಂದುವರೆದಿದೆ. ಸುಳ್ಯ, ಪುತ್ತೂರು ಹಾಗೂ ಬೆಳ್ತಂಗಡಿಯಲ್ಲಿ ಪ್ರವೀಣ್ ನೆಟ್ಟಾರ್ ಕೊ*ಲೆ ಆರೋಪಿಗಳು ಹಾಗೂ ಸಂಬಂಧಿಕರ ಮನೆಗಳಿಗೆ ಗುರುವಾರ ಬೆಳಗ್ಗೆ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿ ಪರಿಶೀಲಿಸಿದೆ. ಬೆಳ್ತಂಗಡಿಯ ನೌಶಾದ್, ಪುತ್ತೂರಿನ ಉಮರ್ ಹಾಗೂ ಸುಳ್ಯದ ಮಸೂದ್ ಅಗ್ನಾಡಿ ಅವರ ಮನೆ ಮೇಲೆ ಎನ್‌ಐಎ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಕೊ*ಲೆ ಪ್ರಕರಣ ಸಂಬಂಧ ಈಗಾಗಲೇ ಎನ್ಐಎ ತಂಡ ಮಸೂದ್ ಅಗ್ನಾಡಿ, ನೌಶಾದ್, ಅಬೂಬಕ್ಕರ್ ಸಿದ್ದೀಕ್ ಅವರ ಹುಡುಕಾಟದಲ್ಲಿದೆ. ಪುತ್ತೂರಿನಲ್ಲಿ ಆರೋಪಿ ಅಬೂಬಕ್ಕರ್ ಸಿದ್ದೀಕ್ ಪತ್ನಿಯ ಸಹೋದರನ ಮನೆ ಮೇಲೆ ದಾಳಿ ನಡೆದಿದ್ದಾಗಿ ಹೇಳಲಾಗಿದೆ. ಈ ಸಂಬಂಧ ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.